ಕಾಲು ಬೆರಳಿನ ನೋವಿಗೆ ಇಲ್ಲಿದೆ ನೋಡಿ ಪರಿಹಾರ

ಬೆಂಗಳೂರು, ಶುಕ್ರವಾರ, 16 ಫೆಬ್ರವರಿ 2018 (07:11 IST)

ಬೆಂಗಳೂರು : ಇನ್‌ಗ್ರೋನ್ ಟೋನೇಲ್ ಎಂದರೆ ಕಾಲು ಬೆರಳಿನ ಉಗುರು ತನ್ನ ಅಕ್ಕ ಪಕ್ಕಗಳಲ್ಲಿನ ತ್ವಚೆಯನ್ನು ಸೀಳಿಕೊಂಡು ಬೆಳೆಯುವ ಸ್ಥಿತಿಯಾಗಿರುತ್ತದೆ. ಇದನ್ನು ಆನಿಕೊಕ್ರಿಪ್ಟೊಸಿಸ್ ಎಂದು ಸಹ ಕರೆಯುತ್ತಾರೆ. ಇದು ಸಾಮಾನ್ಯವಾಗಿ ನೋವನ್ನು ಉಂಟು ಮಾಡುವುದರ ಜೊತೆಗೆ ಊತವನ್ನು ಸಹ ಉಂಟು ಮಾಡುತ್ತದೆ. ಬಹುತೇಕ ಬಾರಿ ಈ ಸಮಸ್ಯೆಯಿಂದಾಗಿ ನಿಮ್ಮ ಹೆಬ್ಬೆರಳು ತೊಂದರೆಗೊಳಗಾಗುತ್ತದೆ.


ಕಾಲಿನ ಉಗುರನ್ನು ತೀರಾ ಕಡಿಮೆ ಗಾತ್ರಕ್ಕೆ ಕತ್ತರಿಸಿದಲ್ಲಿ ಅಥವಾ ಉಗುರಿನ ತುದಿಯನ್ನು ನೇರವಾಗಿ ಕತ್ತರಿಸುವುದರ ಬದಲಿಗೆ ವೃತ್ತಾಕಾರವಾಗಿ ಕತ್ತರಿಸಿದಲ್ಲಿ, ಉಗುರುಗಳು ಅಕ್ಕ ಪಕ್ಕಕ್ಕೆ ಬೆಳೆಯುವ ಸಾಧ್ಯತೆ ಇರುತ್ತದೆ. ಅಥವಾ ಉಗುರಿನ ತುದಿಗಳನ್ನು ಕೀಳುವಿಕೆ, ಗಾಯಗಳು ಮತ್ತು ಉಗುರು ಜಜ್ಜಿಕೊಳ್ಳುವಿಕೆಯಿಂದ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.


ಈ ಸಮಸ್ಯೆಗೆ ಪರಿಹಾರವೆಂದರೆ:
  ನಿಮ್ಮ ಪಾದವನ್ನು ಬೆಚ್ಚಗಿನ ನೀರಿನಲ್ಲಿ ಮುಳುಗಿಸಿ, ನಂತರ ಕಾಲ್ಬೆರಳುಗಳ ಉಗುರನ್ನು ಕತ್ತರಿಸಿ.
  ನಿಮ್ಮ ಉಗುರನ್ನು ನೇರವಾಗಿ ಕತ್ತರಿಸಿ. ಇದರಿಂದ ಉಗುರುಗಳು ಅಡ್ಡಾದಿಡ್ಡಿಯಾಗಿ ಬೆಳೆಯುವುದಿಲ್ಲ.
  ನಿಮ್ಮ ಉಗುರುಗಳನ್ನು ಕಚ್ಚಬೇಡಿ, ಇಲ್ಲವೇ ಕೀಳಬೇಡಿ.
  ಉಗುರುಗಳನ್ನು ತುಂಬಾ ಸಣ್ಣದಾಗಿ ಕತ್ತರಿಸಬೇಡಿ.
  ನಿಮ್ಮ ಪಾದಗಳನ್ನು ಸ್ವಚ್ಛವಾಗಿ ಇರಿಸಿಕೊಳ್ಳಿ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಅಡುಗೆ ಮಾಡಲೆಂದು ಕತ್ತರಿಸಿಟ್ಟ ಬದನೆಕಾಯಿ ಕಪ್ಪಾಗುತ್ತಿದ್ದರೆ ಹೀಗೆ ಮಾಡಿ

ಬೆಂಗಳೂರು : ಅಡುಗೆ ಬದನೆಕಾಯಿಯನ್ನು ಬಳಸುವ ಮೊದಲು ಅದನ್ನು ಕತ್ತರಿಸಿ ಸ್ವಲ್ಪ ಹೊತ್ತು ನೀರಿನಲ್ಲಿ ...

news

ಪ್ರತಿನಿತ್ಯ ಸೈಕ್ಲಿಂಗ್ ಮಾಡುವುದು ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುತ್ತದೆಯೇ?

ಬೆಂಗಳೂರು : ಹವ್ಯಾಸಿಗಳು ಮತ್ತು ಕ್ರೀಡಾಪಟುಗಳು ಮತ್ತು ಮಕ್ಕಳು ತಮ್ಮ ಮೋಜಿಗಾಗಿ ಬಳಸುತ್ತಿದ್ದಾರೆ. ...

news

ಆಪಲ್‌ ಸೈಡರ್ ವಿನೆಗರ್‌ನ ಉಪಯೋಗಗಳು

ಸೇಬಿನ ರಸದಿಂದ ತಯಾರಿಸಲಾಗುವ ಒಂದು ರೀತಿಯ ಮದ್ಯದ ಅಂಶಕ್ಕೆ ರೂಪಾಂತರವಾಗುವ ರಸಕ್ಕೆ ಆಪಲ್‌ ಸೈಡರ್ ವಿನೆಗರ್ ...

news

ಒಮ್ಮೆ ಮಸಾಲಾ ಪೂರಿ ಮಾಡಿ ನೋಡಿ...

ಪೂರಿ ಮಾಡುವುದು ಹೇಗೆ ಎನ್ನುವುದು ನಿಮಗೆಲ್ಲಾ ತಿಳಿದೇ ಇರುತ್ತದೆ. ಹೆಚ್ಚಾಗಿ ಭಾರತದ ಎಲ್ಲಾ ಭಾಗಗಳಲ್ಲೂ ...

Widgets Magazine