ಹಳದಿ ಗಟ್ಟಿದ ಉಗುರುಗಳನ್ನು ಬಿಳಿಯಾಗಿಸುವುದು ಹೇಗೆ ಗೊತ್ತಾ...?

ಬೆಂಗಳೂರು, ಸೋಮವಾರ, 29 ಜನವರಿ 2018 (07:20 IST)

ಬೆಂಗಳೂರು : ಉಗುರಿಗೆ ಹಚ್ಚುವ ಬಣ್ಣ ಹಾಗೂ ಇದನ್ನು ತೆಗೆಯಲು ಬಳಸುವ ನೇಲ್ ರಿಮೂವರ್‪ಗಳ ಅತಿಯಾದ ಬಳಕೆಯಿಂದ ಉಗುರಿನ ಬಣ್ಣ ಹಳದಿಯಾಗುತ್ತದೆ. ಹಳದಿ ಉಗುರುಗಳಿಂದ ಸಾವಿರಾರು ಮಹಿಳೆಯರು ಚಿಂತೆಗೊಳಗಾಗಿದ್ದು ಈ ಉಗುರುಗಳನ್ನು ಇತರರಿಗೆ ತೋರಿಸಿಕೊಳ್ಳಲು ಮುಜುಗರಕ್ಕೊಳಗಾಗುತ್ತಾರೆ ಹಾಗೂ ಇದನ್ನು ಮರೆಮಾಚಲು ಉಗುರಿಗೆ ಮತ್ತೆ ನೈಲ್ ಪಾಲಿಶ್ ಹಚ್ಚುತ್ತಾರೆ. ಆದ್ದರಿಂದ ಹಳದಿ ಉಗುರುಗಳನ್ನು ಮತ್ತೆ ಬಿಳಿಯಾಗಿಸಲು ಕೆಲವಾರು ಮನೆಮದ್ದುಗಳಿದ್ದು ಇವು ಹಾಗೂ ಬಳಸಲು ಸುಲಭವೂ ಆಗಿದೆ.

 
ಅಡುಗೆ ಸೋಡಾ : ಅಡುಗೆ ಸೋಡಾ ಸತ್ತ ಜೀವಕೋಶಗಳನ್ನು ನಿವಾರಿಸಲು ಅತ್ಯುತ್ತಮವಾದ ರಾಸಾಯನಿಕವಾಗಿದ್ದು ಹಳದಿ ಉಗುರುಗಳ ಬಣ್ಣ ಬದಲಿಸಲೂ ಸಹಕಾರಿಯಾಗಿದೆ. ಇದಕ್ಕಾಗಿ ಎರಡು ಚಿಕ್ಕ ಚಮಚ ಅಡುಗೆ ನೋಡಾವನ್ನು ಮೂರು ಅಥವಾ ನಾಲ್ಕು ದೊಡ್ಡ ಚಮಚ ಶುದ್ಧ ನೀರಿಗೆ ಬೆರೆಸಿ ಲೇಪನ ತಯಾರಿಸಿ. ಈ ಲೇಪನವನ್ನು ಉಗುರುಗಳಿಗೆ ಹಚ್ಚಿ 10 ನಿಮಿಷ ಹಾಗೇ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೊಮ್ಮೆ ಈ ವಿಧಾನವನ್ನು ಅನುಸರಿಸಿದರೆ ಸಾಕು.


ಟೂಥ್ ಪೇಸ್ಟ್ : ಕೆಲವು ಹಲ್ಲುಜ್ಜುವ ಕ್ರೀಂಗಳಲ್ಲಿ ಬಿಳಿಯಾಗಿಸುವ ಗುಣವಿದೆ. ಈ ಗುಣ ಉಗುರನ್ನುಕೂಡ  ಬಿಳಿಯಾಗಿಸಲೂ ಸಹಕಾರಿಯಾಗಿದೆ. ಕೊಂಚ ಟೂಥ್ ಪೇಸ್ಟ್ ಅನ್ನು ನೇರವಾಗಿ ಉಗುರುಗಳ ಮೇಲೆ ತೆಳುವಾಗಿ ಹಚ್ಚಿ ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೆರಡು ಬಾರಿ ಅನುಸರಿಸುವ ಮೂಲಕ ಶೀಘ್ರವೇ ಬಿಳಿಯಾದ ಉಗುರುಗಳನ್ನು ಪಡೆಯಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸೆಕ್ಸ್ ಮಾಡುವಾಗ ಇವಿಷ್ಟು ಸಲಹೆಗಳನ್ನು ತಪ್ಪದೇ ಪಾಲಿಸಿ!

ಬೆಂಗಳೂರು : ಲೈಂಗಿಕ ಪ್ರಚೋದನೆಗೆ ತಜ್ಞರು ಅನೇಕ ಸಲಹೆಗಳನ್ನು ನೀಡ್ತಾರೆ. ಅನೇಕ ಸಲಹೆಗಳು ಸೆಕ್ಸ್ ...

news

ತೂಕ ಇಳಿಕೆಗೆ ಧನಿಯಾ ಬೀಜವನ್ನು ಹೇಗೆ ಬಳಸಬೇಕು ಗೊತ್ತಾ?!!

ಬೆಂಗಳೂರು: ಧನಿಯಾ ಅಥವಾ ಕೊತ್ತಂಬರಿ ಬೀಜ ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭ ತಂದುಕೊಡುತ್ತದೆ. ಇದು ...

news

ಸೆಕ್ಸ್ ಬೇಕು ಎಂದು ಮಹಿಳೆಯರು ಯಾಕೆ ಬಾಯ್ಬಿಟ್ಟು ಹೇಳಲ್ಲ?!

ನವದೆಹಲಿ: ನಮ್ಮ ದೇಶದಲ್ಲಿ ಮಹಿಳೆಯರು ತನಗೆ ಬೇಕಾದ್ದನ್ನು ಬೇಕು ಎಂದು ಕೇಳಿ ಪಡೆಯುವ ಸ್ವಾತಂತ್ರ್ಯವನ್ನು ...

news

ಅಡುಗೆಮನೆ ಚಾಕು ಶುಚಿಗೊಳಿಸಲು ಇಲ್ಲಿದೆ ನೋಡಿ ಟಿಪ್ಸ್

ಬೆಂಗಳೂರು: ಅಡುಗೆ ಮನೆಯಲ್ಲಿ ಚಾಕುಗಳಿಗೆ ತುಂಬಾ ಮಹತ್ವವಿದೆ. ಅವುಗಳ ಸಹಾಯವಿಲ್ಲದೆ ತರಕಾರಿಗಳನ್ನು ...

Widgets Magazine
Widgets Magazine