ಸ್ಟ್ರೆಚ್ ಮಾರ್ಕ್ ನಿವಾರಣೆಗೆ ಇಲ್ಲಿದೆ ಸುಲಭ ವಿಧಾನ

ಬೆಂಗಳೂರು, ಶುಕ್ರವಾರ, 30 ಜೂನ್ 2017 (17:59 IST)

Widgets Magazine

ಸ್ಟ್ರೆಚ್ ಮಾರ್ಕ್ ನಿವಾರಣೆಗೆ ಇಲ್ಲಿದೆ ಸುಲಭ ವಿಧಾನ
ಬೆಂಗಳೂರು:ಹೆರಿಗೆಯ ಬಳಿಕ ಮಹಿಳೆಯರು ಹಲವಾರು ವ್ಯತಿರಿಕ್ತ ದೈಹಿಕ ಪರಿಣಾಮಗಳನ್ನು ಎದುರಿಸುತ್ತಾರೆ. ತೂಕ ಹೆಚ್ಚಳ, ಹೊಟ್ಟೆ, ತೂಳು, ತೊಡೆ ಭಾಗಗಳಲ್ಲಿ ಸ್ಟ್ರೆಚ್ ಮಾರ್ಕ್ ನಂತಹ ಸಮಸ್ಯೆಗಳನ್ನು ಬಹುತೇಕ ಎಲ್ಲಾ ಮಹಿಳೆಯರು ಸಾಮಾನ್ಯವಾಗಿ ಎದುರಿಸುವ ಸಮಸ್ಯೆ. ಸಮಸ್ಯೆ ಏನೋ ಸಾಮಾನ್ಯ ಎನ್ನಬಹುದು ಆದರೆ ಅದರಿಂದ ಮಹಿಳೆಯರಿಗಾಗುವ ಮುಜುಗರ ಹೇಳಲಾಗದು.
 
ಸ್ಟ್ರೆಚ್ ಮಾರ್ಕ್ ಸಮಸ್ಯೆ ಕೇವಲ ಹೆರಿಗೆ ನಂತರ ಮಹಿಳೆಯರ ಸಮಸ್ಯೆ ಮಾತ್ರವಲ್ಲ. ಸ್ಥೂಲಕಾಯದ ಮಹಿಳೆಯರಿಗೂ ಈ ಸಮಸ್ಯೆಯಿರುತ್ತದೆ. ಇಂತಹ ಸಮಸ್ಯೆಗಳ ನಿವಾರಣೆಗೆ ಸ್ವಲ್ಪ ಸಮಯ ವ್ಯಯ ಮಾಡಿದಲ್ಲಿ ಸ್ಟ್ರೆಚ್ ಮಾರ್ಕ್ ಗಳನ್ನು ನಿವಾರಿಸಿಕೊಳ್ಳಬಹುದು. ಕೆಲವು ನೈಸರ್ಗಿಕ ಹಾಗೂ ಮನೆ ಮದ್ದುಗಳನ್ನು ಉಪಯೋಗಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
 
 * ಆಲೂಗಡ್ಡೆ ಮತ್ತು ಹರಳೆಣ್ಣೆಯನ್ನು ಬಳಸಿ ತಯಾರಿಸುವ ಲೇಪನದಿಂದಾಗಿ ಸ್ಟ್ರೆಚ್ ಮಾರ್ಕ್ ನಿವಾರಿಸಬಹುದು.
 
ಒಂದು ದೊಡ್ಡ ಸ್ಪೂನ್ ನಷ್ಟು ಹರಳೆಣ್ಣೆ ಹಾಗೂ ಎರಡು ಚಮಚ ಹರಳೆಣ್ಣೆಯನ್ನು ತೆಗೆದುಕೊಂಡು ಇವೆರಡನ್ನೂ ಮಿಶ್ರಣಗೊಳಿಸಿ ಸ್ಟ್ರೆಚ್ ಮಾರ್ಕ್ ಇರುವ ಜಾಗದಲ್ಲಿ ಲೇಪಿಸಿ. ಈ ಮಿಶ್ರಣವನ್ನು ಚರ್ಮದ ಮೇಲೆ ಹಚ್ಚಿದಾಗ ಆಲೂಗಡ್ಡೆಯಲ್ಲಿರುವ ಪಿಷ್ಟ ಚರ್ಮದಲ್ಲಿ ಕೊಲ್ಯಾಜೆನ್ ಎಂಬ ಕಣದ ಬೆಳವಣಿಗೆಗೆ ನೆರವಾಗುತ್ತದೆ. ಇದು ಚರ್ಮದಲ್ಲಿ ಸೆಳೆತವನ್ನು ಹೆಚ್ಚಿಸಿ ದೂರವಾಗಿದ್ದ ಚರ್ಮದ ಜೀವಕೋಶಗಳನ್ನು ಹತ್ತಿರ ತರುತ್ತದೆ.
 
ಹೀಗೆ ಹಚ್ಚಿದ ಲೇಪನವನ್ನು 1/2 ಗಂಟೆ ಬಳಿಕ ಉಗುರು ಬೆಚ್ಚಗಿನ ನೀರು ಹಾಗೂ ಸಾಫ್ಟ್ ಸೋಪುಗಳನ್ನು ಬಳಸಿ ತೆಗೆಯಿರಿ. 
 
* ತಾಜಾ ನಿಂಬೆ ರಸದ ಮಸಾಜ್: 
ತಾಜಾ ನಿಂಬೆ ಹಣ್ಣನ್ನು ಕತ್ತರಿಸಿ ರಸ ತೆಗೆದು ಅದನ್ನು ಕಲೆಗಳ ಮೇಲೆ ನಿಧಾನವಾಗಿ ಹಚ್ಚಿ. 10-12 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಚರ್ಮವನ್ನು ತೊಳೆಯಿರಿ. ಹೀಗೆ ದಿನಕ್ಕೆ ಎರಡು - ಮೂರು ಬಾರಿ ಮಾಡುವುದರಿಂದ ಕಲೆಗಳು ಗಣನೀಯವಾಗಿ ಕಡಿಮೆಯಾಗುತ್ತದೆ.
 
* ತರಕಾರಿ ಎಣ್ಣೆಯ ಮಸಾಜ್:
 
ಹರಳೆಣ್ಣೆ, ತೆಂಗಿನೆಣ್ಣೆ ಮತ್ತು ಆಲಿವ್ ಎಣ್ಣೆಗಳಲ್ಲಿ ಮಾಯಿಶ್ಚರೈಸಿಂಗ್ ಮತ್ತು ನೆರಿಗೆಗಳನ್ನು ನಿವಾರಿಸುವ ಗುಣವಿದೆ. ಆದ್ದರಿಂದ ಪ್ರತಿನಿತ್ಯ ಮಲಗುವ ಮುನ್ನ ತರಕಾರಿ ಎಣ್ಣೆಯಿಂದ ಚರ್ಮದ ಕಲೆಗಳ ಮೇಲೆ ಮಸಾಜ್ ಮಾಡಿ. ಬೆಳಗ್ಗೆದ್ದು ಸಾಬೂನು ಮತ್ತು ಉಗುರು ಬೆಚ್ಚನೆಯ ನೀರಿನಿಂದ ತೊಳೆಯಿರಿ. ನೀವು ಹರಳೆಣ್ಣೆ ಬಳಸಿದ್ದರೆ ಹಚ್ಚಿದ ನಂತರ ಸ್ವಲ್ಪ ಆರಲು ಬಿಟ್ಟು, ನಂತರ ಉಗುರು ಬೆಚ್ಚನೆಯ ನೀರಿನಲ್ಲಿ ಅದ್ದಿದ ಬಟ್ಟೆಯಿಂದ ಕಲೆಗಳ ಭಾಗವನ್ನು ಸ್ವಲ್ಪ ಹೊತ್ತು ಸುತ್ತಿಡಿ.
 Widgets Magazine
ಇದರಲ್ಲಿ ಇನ್ನಷ್ಟು ಓದಿ :  
Remove Stretch Marks Simple Tips

Widgets Magazine

ಆರೋಗ್ಯ

news

ಮಲಬದ್ಧತೆಯೇ? ಹಾಗಾದರೆ ಈ ಆಹಾರ ಸೇವಿಸಲೇಬೇಡಿ!

ಬೆಂಗಳೂರು: ಮಲಬದ್ಧತೆ ಉಗುಳಲೂ ಆಗದ ನುಂಗಲೂ ಆಗದ ಸಮಸ್ಯೆ. ಈ ಸಮಸ್ಯೆ ಇದ್ದವರು ಕೆಲವು ಆಹಾರಗಳನ್ನು ...

news

ಗರ್ಭಿಣಿ ಮಹಿಳೆ ತನ್ನ ಗಂಡನಿಂದ ಬಯಸೋದು ಏನನ್ನು?

ಬೆಂಗಳೂರು: ಒಡಲಲ್ಲಿ ತಮ್ಮಿಬ್ಬರ ಪ್ರೀತಿಯ ಫಲ ಹೊತ್ತುಕೊಂಡ ಮಹಿಳೆಯನ್ನು ಹೇಗೆ ನೋಡಿಕೊಳ್ಳಬೇಕು? ಹೀಗೊಂದು ...

news

ವ್ಹಾವ್.. ಬೆಂಡೆಕಾಯಿ ದೋಸಾ ಸಖತ್ ಟೇಸ್ಟಿ..

ಬೆಂಡೆಕಾಯಲ್ಲಿ ದೋಸಾ ಮಾಡ್ಬಹುದಾ ಅಂತ ಆಶ್ಚರ್ಯಾನಾ. ಖಂಡಿತಾ ಮಾಡ್ಬಹುದು. ತುಂಬಾನೇ ಸುಲಭ ಮತ್ತು ಸಖತ್ ...

news

ವಿಷಯುಕ್ತ ತರಕಾರಿ ತೊಳೆಯುವುದು ಹೇಗೆ?

ಬೆಂಗಳೂರು: ಇಂದಿನ ಕಾಲದಲ್ಲಿ ಶುದ್ಧ ತರಕಾರಿ ಸಿಗುವುದು ಕನಸಿನ ಮಾತು. ಆದಷ್ಟು ತೊಳೆದು ತಿನ್ನುವುದರಿಂದ ...

Widgets Magazine