ಸೌಂದರ್ಯ ವರ್ಧನೆಗೆ ಸರಳ ಉಪಾಯಗಳು

ಗುರುವಾರ, 20 ಅಕ್ಟೋಬರ್ 2016 (12:54 IST)

Widgets Magazine

ತಾನು ಸುಂದರವಾಗಿ ಕಾಣಬೇಕೆಂದು ಯಾರು ತಾನೆ ಬಯಸುವುದಿಲ್ಲ? ಈಸಲಹೆಗಳನ್ನು ಪಾಲಿಸಿದಲ್ಲಿ ನಿಮ್ಮ ಸೌಂದರ್ಯ ವರ್ಧನೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಒಮ್ಮೆ ಪ್ರಯತ್ನಿಸಿ ನೋಡಿ. 


1. ಪ್ರತಿದಿನ ಸ್ವಲ್ಪ ತುಳಸಿ ರಸವನ್ನು ಜೇನುತುಪ್ಪದೊಡನೆ ಸೇವಿಸುತ್ತಿದ್ದರೆ ಮುಖದ ತೇಜಸ್ಸು ಹೆಚ್ಚುತ್ತದೆ ಅಲ್ಲದೆ ಮುಖದ ಮೇಲಿನ ಕಲೆಗಳೂ ಕೂಡ ಮಾಯವಾಗುತ್ತದೆ.
 
2.ಕಹಿ ಬೇವಿನ ಏಳೆಂಟು ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ತುಸು ಉಗುರು ಬೆಚ್ಚಗಿರುವಾಗಲೇ ಮುಖ ತೊಳೆದುಕೊಳ್ಳುತ್ತಿದ್ದರೆ ಸೌಂದರ್ಯ ವೃದ್ಧಿಸುತ್ತದೆ, ಅಲ್ಲದೆ ಸಿಡಿಬಿನ ಕಲೆಗಳು ಮಾಯವಾಗುತ್ತವೆ.
 
3. ಹಸಿ ಹಾಲನ್ನು ಮುಖ, ಕೈ, ಕಾಲು ಮತ್ತು ತಲೆಗೆ ಹಚ್ಚಿಕೊಂಡು ಅರ್ಧ ಗಂಟೆ ನಂತರ ಸ್ನಾನ ಮಾಡಿದರೆ ನ್ಯಾಚುರಲ್ ಕಂಡೀಶನರ್‌ನಂತೆ ಕೆಲಸ ಮಾಡುತ್ತದೆ ಮತ್ತು ಮುಖ ಹಾಗೂ ಕೂದಲಿನ ಹೊಳಪನ್ನು ಕಾಯ್ದಿರಿಸಿ ಸೌಂದರ್ಯ ಹೆಚ್ಚಲು ಸಹಕಾರಿಯಾಗುತ್ತದೆ.
 
4. ದಾಲ್ಚಿನಿ ಚೆಕ್ಕೆಗಳನ್ನು ಪುಡಿ ಮಾಡಿ ನಿಂಬೆರಸ ಸೇರಿಸಿ ಹಚ್ಚಿಕೊಂಡರೆ ಮೊಡವೆಗಳು ಮಾಯವಾಗುತ್ತದೆ.
 
5. ಕಡಲೇ ಹಿಟ್ಟಿಗೆ ಸೌತೆ ರಸ ಬೆರೆಸಿ ಮುಖ ಹಾಗೂ ಕತ್ತಿಗೆ ಹಚ್ಚಿಕೊಂಡು 15 ನಿಮಿಷಗಳ ನಂತರ ಮುಖ ತೊಳೆದುಕೊಳ್ಳಿ. ಪ್ರತಿನಿತ್ಯ ಈ ರೀತಿ ಮಾಡಿದರೆ ತ್ವಚೆ ನುಣುಪು, ಕೋಮಲತೆ ಪಡೆಯುತ್ತದೆ.
 
6. ಸೌತೆಕಾಯಿಯನ್ನು ಅತಿ ತೆಳುವಾಗಿ ಕತ್ತರಿಸಿ, ಅವುಗಳನ್ನು 10 ನಿಮಿಷ ಕಣ್ಣಿನ ರೆಪ್ಪೆ ಮೇಲೆ ಇಟ್ಟುಕೊಂಡರೆ ಕಣ್ಣಿನ ಸುತ್ತಲಿನ ಕಪ್ಪುವೃತ್ತ ಮಾಯವಾಗುತ್ತದೆ.
 
7. ಟೊಮ್ಯಾಟೋ ಕತ್ತರಿಸಿ ಪ್ರತಿದಿನ ಮುಖದ ಮೇಲೆ ತಿಕ್ಕುವುದರಿಂದ ತ್ವಚೆ ಹೊಳಪು ಪಡೆಯುತ್ತದೆ.
 
8. ಹಾಲಿನ ಕೆನೆಯನ್ನು ಪ್ರತಿದಿನ ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದರೆ ತ್ವಚೆ ಮೃದುವಾಗುತ್ತದೆ ಅಲ್ಲದೆ ನಂಜುನಿರೋಧಕ ಶಕ್ತಿ ಪಡೆಯುತ್ತದೆ ಜೊತೆಗೆ ಕಪ್ಪು ಕಲೆ ಹಾಗೂ ನೆರಿಗೆಗಳು ಮಾಯವಾಗುತ್ತದೆ.
 
9. ಪಪ್ಪಾಯಿ ಕಾಯಿಯ ಸಿಪ್ಪೆಯಿಂದ ನಿಯಮಿತವಾಗಿ ಉಜ್ಜಿಕೊಳ್ಳುತ್ತಿದ್ದರೆ ಮಚ್ಚೆಗಳು ನಿವಾರಣೆಯಾಗುತ್ತದೆ.
 
10. ಪ್ರತಿದಿನ ಊಟದ ನಂತರ ಸೇಬುಹಣ್ಣನ್ನು ತಿನ್ನುವುದರಿಂದ ಹಲ್ಲುಗಳು ಹೊಳೆಯುತ್ತವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಸೌಂದರ್ಯ ವರ್ಧನೆ ಸರಳ ಉಪಾಯ Beauty Tips

Widgets Magazine

ಆರೋಗ್ಯ

news

ಹಳದಿಗಟ್ಟಿದ ಹಲ್ಲು ಬೆಳ್ಳಗಾಗಿಸಬೇಕೆ ಈ ವಿಡಿಯೋ ನೋಡಿ

ಹಲ್ಲು ಹಳದಿಯಾಗಿದೆಯೇ. ಚಿಂತೆ ಬಿಡಿ . ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ ಇದಕ್ಕೆ ಮದ್ದು. ನಿಂಬೆ ಹಣ್ಣು ...

news

ಸತತ ಏಳು ದಿನ ಎಳನೀರು ಕುಡಿದು ನೋಡಿ( ವಿಡಿಯೋ)

ಎಳನೀರು ಆರೋಗ್ಯ ಮತ್ತು ಚೈತನ್ಯವೃದ್ಧಿಗೆ ಸಹಾಯಕವಾದ ಶಕ್ತಿವರ್ಧಕ ಪಾನೀಯ ಎಂಬುದು ಎಲ್ಲರಿಗೂ ಗೊತ್ತು. ಸತತ ...

news

ನೀವೂ ಇಂಟರ್ನೆಟ್ ಚಟದ ದಾಸರೇ? ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಏನಾಗುತ್ತೆ ಎಂದು ಗೊತ್ತಾ?

ಇಂಟರ್ನೆಟ್ ಎಂಬುದು ಚಟವಾಗಿ ಮಾರ್ಪಟ್ಟರೆ ಅದರಿಂದಾಗುವ ಅನಾಹುತಗಳೇನು ಎಂಬ ಬಗೆಗೀಗ ಚಿಂತಿಸಲಾಗುತ್ತಿದೆ. ...

news

ಸೆಕ್ಸ್ ನಂತರ ಪುರುಷರು ಏನು ಬಯಸುತ್ತಾರೆ ಗೊತ್ತಾ ? ಹಾಗಾದರೆ ಈ ಲೇಖನ ಓದಿ

ಹೆಂಗನಿಸ್ತು.. ನನಗಂತು ತುಂಬಾ ಮಜಾ ಬಂತು : ಈ ಮಾತು ಕೂಡ ನಿಮ್ಮ ಸಂಗಾತಿಗೆ ಖುಷಿಯನ್ನು ನೀಡುತ್ತದೆ. ನಿಮ್ಮ ...

Widgets Magazine