ಚಳಿಗಾಲದಲ್ಲಿ ತುಟಿ ಒಡೆದು ರಕ್ತ ಬರುವುದನ್ನು ತಡೆಯಲು ಈ ರೀತಿ ಆರೈಕೆ ಮಾಡಿ

ಬೆಂಗಳೂರು, ಬುಧವಾರ, 7 ಫೆಬ್ರವರಿ 2018 (06:37 IST)

ಬೆಂಗಳೂರು : ಸುಂದರ ತುಟಿ ಜನರನ್ನು ಆಕರ್ಷಿಸುತ್ತದೆ. ಆದರೆ ಚಳಿಗಾಲದಲ್ಲಿ ಚರ್ಮದ ಜೊತೆಗೆ ತುಟಿಗಳು ಸೌಂದರ್ಯ ಕಳೆದುಕೊಳ್ಳುತ್ತವೆ. ತುಟಿಗಳು ಬಿರುಕು ಬಿಟ್ಟಂತೆ ಕಾಣುವುದಲ್ಲದೆ ಕೆಲವರ ತುಟಿಗಳಿಂದ ರಕ್ತ ಬರುವುದುಂಟು. ಕೆಲವೊಂದು ಟಿಪ್ಸ್ ಗಳನ್ನು ಅನುಸರಿಸುತ್ತ ಬಂದಲ್ಲಿ ಚಳಿಗಾಲದಲ್ಲಿಯೂ ಸುಂದರ ತುಟಿಯನ್ನು ನಮ್ಮದಾಗಿಸಿಕೊಳ್ಳಬಹುದು.


ದೇಹದಲ್ಲಿ ನೀರಿನ ಅಂಶ ಕಡಿಮೆಯಾದಲ್ಲಿ ತುಟಿಗಳು ತೇವಾಂಶ ಕಳೆದುಕೊಳ್ಳುತ್ತವೆ. ಇದ್ರಿಂದ ತುಟಿ ಒಡೆಯುತ್ತದೆ. ಹಾಗಾಗಿ ಚಳಿಗಾಲದಲ್ಲಿಯೂ ಹೆಚ್ಚೆಚ್ಚು ನೀರು ಕುಡಿದಲ್ಲಿ ತುಟಿಯ ರಕ್ಷಣೆ ಸುಲಭವಾಗುತ್ತದೆ.


ರಾತ್ರಿ ಜೇನು ತುಪ್ಪವನ್ನು ತುಟಿಗಳಿಗೆ ಹಚ್ಚಿ ಮಲಗುವುದ್ರಿಂದ ತುಟಿಗಳು ಮೃದುವಾಗುತ್ತವೆ. ರಾತ್ರಿ ತುಟಿಗಳಿಗೆ ಜೇನುತುಪ್ಪ ಹಚ್ಚಿ ಬೆಳಿಗ್ಗೆ ತಣ್ಣೀರಿನಲ್ಲಿ ತೊಳೆಯಬೇಕು.


ಗ್ಲಿಸರಿನ್ ಹಾಗೂ ರೋಸ್ ವಾಟರನ್ನು ಸಮ ಪ್ರಮಾಣದಲ್ಲಿ ಮಿಕ್ಸ್ ಮಾಡಿ ರಾತ್ರಿ ತುಟಿಗೆ ಹಚ್ಚುತ್ತ ಬಂದಲ್ಲಿ ಅತಿ ಬೇಗ ತುಟಿ ಉರಿ, ಒಡಕು ಸಮಸ್ಯೆ ಕಡಿಮೆಯಾಗುತ್ತದೆ.


ಬೆರಳಿನಲ್ಲಿ ಸ್ವಲ್ಪ ಆಕಳ ತುಪ್ಪವನ್ನು ತೆಗೆದುಕೊಂಡು ತುಟಿಗಳಿಗೆ ಮಸಾಜ್ ಮಾಡಿ. ತುಟಿಗಳ ರಕ್ತ ಸಂಚಾರ ಸುಲಭವಾಗಿ ಒಡಕು ನಿವಾರಣೆಯಾಗುತ್ತದೆ.


ರಾತ್ರಿ ಮಲಗುವಾಗ ಹೊಕ್ಕಳಿಗೆ ಸಾಸಿವೆ ಎಣ್ಣೆ ಹಾಕಿಕೊಂಡಲ್ಲಿ ತುಟಿ ಒಡಕಿನ ಸಮಸ್ಯೆ ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹುಚ್ಚು ನಾಯಿ ಕಡಿತಕ್ಕೆ ಈ ರೀತಿಯಲ್ಲಿ ಪ್ರಥಮ ಚಿಕಿತ್ಸೆ ಮಾಡಿ ರೇಬಿಸ್ ರೋಗದಿಂದ ಪಾರಾಗಿ

ಬೆಂಗಳೂರು : ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ, ಅಂಚೆಯವರಿಗೆ, ಪತ್ರಿಕೆ ಹಾಕುವ ಹುಡುಗರಿಗೆ, ...

news

ಮಹಿಳೆಯರು ಈ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದರೆ ಉತ್ತಮವಂತೆ

ಬೆಂಗಳೂರು : ಮದುವೆಯ ನಂತರ ಮಹಿಳೆ ತಾಯಿಯಾಗುವುದು ಎಂದರೆ ಅದು ಅವರಿಗೆ ಸೌಭಾಗ್ಯದ ವಿಷಯವಾಗಿದೆ. ತಾಯಿಯಾಗುವ ...

news

ರುಚಿಯಾದ ಟೊಮೆಟೊ ಎಗ್ ರೈಸ್

ಚಿತ್ರಾನ್ನ, ಪುಳಿಯೊಗರೆ ಈ ಅಡುಗೆಗಳನ್ನು ತಿಂದು ಬೇಜಾರಾಗಿದವರು ಟೊಮೆಟೊ ಎಗ್ ರೈಸ್ ಟ್ರೈ ಮಾಡಿ.

news

ಚಪಾತಿಯೊಂದಿಗೆ ರುಚಿಯಾದ ತರಕಾರಿಗಳ ಸಾಗು ಮಾಡಿ ಸವಿಯಿರಿ..

ಯಾವಾಗಲೂ ಚಪಾತಿಯೊಂದಿಗೆ ಪಲ್ಯ ಮತ್ತು ಚಟ್ನಿಯನ್ನು ಮಾಡಿಕೊಂಡು ತಿಂದು ಬೇಸರವಾಗಿದ್ದರೆ ಒಮ್ಮೆ ತರಕಾರಿಗಳ ...

Widgets Magazine
Widgets Magazine