ಕಣ್ಣಿಗೆ ಹಾಕಿದ ಮೇಕಪ್ ಸುಲಭವಾಗಿ ತೆಗೆಯುವುದಕ್ಕೆ ಇಲ್ಲಿದೆ ಟಿಪ್ಸ್

ಬೆಂಗಳೂರು, ಶುಕ್ರವಾರ, 23 ಫೆಬ್ರವರಿ 2018 (06:58 IST)

ಬೆಂಗಳೂರು : ದಿನವಿಡೀ ತಮ್ಮ ಕಣ್ಣು ಹಾಗೂ ಸುಂದರವಾಗಿ ಕಾಣಲೆಂದು ಬಹುತೇಕ ಯುವತಿಯರು ಮಸ್ಕರಾ, ಕಾಜಲ್, ಐ ಲೈನರ್, ಲಿಪ್ ಲೈನರ್, ಕ್ರೀಂಗಳು ಹಾಗೂ ಪೌಡರ್'ಗಳನ್ನು ಬಳಸುತ್ತಾರೆ. ಆದರೆ ರಾತ್ರಿ ಹೊತ್ತು ಈ ಮೇಕಪ್ ತೆಗೆಯುವುದೇ ಅತ್ಯಂತ ಕಷ್ಟಕರವಾದ ಕೆಲಸ. ಹಾಗಾದರೆ ಈ ಮೇಕಪ್ ಸುಲಭವಾಗಿ ತೆಗೆಯುವುದಕ್ಕೆ ಇಲ್ಲಿದೆ  ಟಿಪ್ಸ್.

*ಬೇಬಿ ಶ್ಯಾಂಪೂ : ಟಿಯರ್ ಫ್ರೀ ಬೇಬಿ ಶ್ಯಾಂಪೂ ಕಣ್ಣಿಗೆ ಹಾಕಿದ ಲೈನರ್, ಶೇಡ್ ಹಾಗೂ ಮಸ್ಕರಾ ತೆಗೆಯಲು ತುಂಬಾ ಉಪಯೋಗವಾಗುತ್ತದೆ. ಯಾವುದೇ ಉರಿ ಇಲ್ಲದೇ ಬೇಬಿ ಶ್ಯಾಂಪೂ ನಿಮ್ಮ ಸುಲಭವಾಗಿ ಮೇಕಪ್ ತೆಗೆಯಲು ಸಹಾಯ ಮಾಡುತ್ತದೆ. ಶ್ಯಾಂಪೂ ಬಳಸುವಾಗ ತಣ್ಣೀರಿನ ಬದಲಾಗಿ ಉಗುರು ಬೆಚ್ಚಗಿನ ನೀರನ್ನು ಬಳಸಿ.

*ಬೇಬಿ ವೈಪ್ಸ್ : ನಿಮಗೆ ಬೇಬಿ ಶಾಂಪೂ ಬಳಸಲು ಸಾಧ್ಯವಾಗುತ್ತಿಲ್ಲವೆಂದಾದರೆ ನೀವು ಬೇಬಿ ವೈಪ್ಸ್ ಕೂಡಾ ಬಳಸಬಹುದು. ಇದರಲ್ಲೂ ನಿಮಗೆ ತೊಡಕುಂಟಾದರೆ ಪೆಟ್ರೋಲಿಯಂ ಜೆಲ್ಲಿ ಬಳಸಿ. ಇದು ಕೇವಲ ಕಣ್ಣಿನ ಮೇಕಪ್ ಮಾತ್ರವಲ್ಲದೇ, ಇಡೀ ಮುಖದ ಮೇಕಪ್ ಅತ್ಯಂತ ಸುಲಭವಾಗಿ ತೆಗೆಯಲು ಸಹಾಯಕವಾಗುತ್ತದೆ. ಇಷ್ಟೇ ಅಲ್ಲದೇ ಲೋಷನ್ ಬಳಸಿಯೂ ನೀವು ಮೇಕಪ್ ತೆಗೆಯಬಹುದಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಒಣಗಿದ ತರಕಾರಿಗಳನ್ನು ತಾಜಾಗೊಳಿಸಲು ಹೀಗೆ ಮಾಡಿ

ಬೆಂಗಳೂರು : ತರಕಾರಿಗಳನ್ನು ಫ್ರಿಜ್ ನಲ್ಲಿಟ್ಟರೆ ಅದು ಫ್ರೆಶ್ ಆಗಿರುತ್ತದೆ ನಿಜ. ಆದರೆ ಮನೆಯಲ್ಲಿ ಫ್ರಿಜ್ ...

news

ಬೊಜ್ಜು ಪುರುಷರ ಬಂಜೆತನಕ್ಕೆ ಕಾರಣವಾಗುತ್ತದೆಯೇ? ಇಲ್ಲಿದೆ ಉತ್ತರ

ಬೆಂಗಳೂರು : ಬಂಜೆತನವು ಮಹಿಳೆಯರನ್ನು ಮಾತ್ರ ಕಾಡುತ್ತದೆ ಎಂಬುದು ತಪ್ಪುಕಲ್ಪನೆ. ಪುರುಷರಲ್ಲಿಯೂ ಬಂಜೆತನದ ...

news

ಸರಳವಾಗಿ ಮಾಡಬಹುದಾದ ಸಾಂಪ್ರದಾಯಿಕ ತಿಂಡಿ ಖರ್ಜಿಕಾಯಿ...

ಗಣೇಶ ಚತುರ್ಥಿ, ದೀಪಾವಳಿ, ಸಂಕ್ರಾಂತಿ ಹೀಗೆ ಎಲ್ಲಾ ಹಬ್ಬಗಳಲ್ಲೂ ಮಾಡುವ ಖರ್ಜಿಕಾಯಿ ನಮ್ಮ ಸಾಂಪ್ರದಾಯಿಕ ...

news

ಸರಳ ಮತ್ತು ರುಚಿಕರ ಬ್ರೆಡ್ ಪಿಜ್ಜಾ

ಮೊದಲು ಬ್ರೆಡ್‍ನ ಒಂದು ಬದಿಗೆ 1 ಚಮಚದಷ್ಟು ಟೊಮೆಟೋ ಸಾಸ್ ಅಥವಾ ಪಿಜ್ಜಾ ಸಾಸ್ ಸವರಿಕೊಳ್ಳಿ. ಅದರ ಮೇಲೆ ...

Widgets Magazine
Widgets Magazine