ಕೂದಲ ಆರೈಕೆಗೆ ಕೆಲ ಉಪಯೋಗಕಾರಿ ಟಿಪ್ಸ್

ಗುರುವಾರ, 27 ಅಕ್ಟೋಬರ್ 2016 (10:55 IST)

Widgets Magazine

ಹೆಣ್ಣುಮಕ್ಕಳ ಸೌಂದರ್ಯದಲ್ಲಿ ಕೂದಲು ಬಹುಮುಖ್ಯ ಪಾತ್ರ ವಹಿಸುತ್ತದೆ. ಮುಖದ ಆರೈಕೆ ಮಾಡಿದಂತೆ ಕೂದಲ ಆರೈಕೆಯೂ ಅಷ್ಟೇ ಮುಖ್ಯ. ಇಲ್ಲದಿದ್ದರೆ ಕೂದಲು ಉದುರುವುದು, ತಲೆ ಹೊಟ್ಟು ಸಮಸ್ಯೆ ಇವೇ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೂದಲ ಆರೈಕೆಗೆ ಇಲ್ಲಿದೆ ಕೆಲ ಸಲಹೆಗಳು...

 
*ಕೂದಲಿಗೆ ಬಿಸಿನೀರಿನ ಸ್ನಾನ ಒಳ್ಳೆಯದಲ್ಲ, ಏಕೆ೦ದರೆ ಬಿಸಿನೀರು ನಿಮ್ಮ ಕೂದಲನ್ನು ಒಣಗಾಗಿಸುತ್ತದೆ. 
 
* ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಬೀಸಿನೀರ ಸ್ನಾನದಿಂದ ಕೂದಲು ಒಣಗಿ ಸ್ಟಿಫ್ ಆಗಿ ಬೇಗನೇ ಉದುರಿ ಹೋಗುತ್ತದೆ. 
 
* ಟೈಟ್ ಆಗಿ ಜಡೆ ಕಟ್ಟುತ್ತೀರಿ. ಆದರೆ ಹಾಗೆ ಮಾಡಿದರೆ ಕೂದಲಿನ ಫಾಲಿಕಲ್‌ನಲ್ಲಿ ಹೆಚ್ಚು ಒತ್ತಡ ಉ೦ಟಾಗಿ, ಹಾನಿಯಾಗುತ್ತದೆ. 
* ಕೂದಲನ್ನು ನೇರವಾಗಿಸುವ ಐರನ್ ನಿಮ್ಮ ಕೂದಲಿನಲ್ಲಿರುವ ಪ್ರೊಟೀನ್‌ಗಳನ್ನು ಹಾಗೂ ಸ೦ರಕ್ಷಕ ಕ್ಯೂಟಿಕಲ್ಸ್‌ಗೆ ಹಾನಿ ಉಂಟು ಮಾಡುತ್ತದೆ.
 
* ಕ್ಯೂಟಿಕಲ್ಸ್ ಹಾನಿಗೊಳಗಾದರೆ, ಮಾಯಿಶ್ಚರ್ ಬ್ಯಾಲೆನ್ಸ್‌ಗೆ ತಡೆಯು೦ಟಾಗಿ ಕೂದಲು  ಹೆಚ್ಚು ತು೦ಡಾಗುತ್ತದೆ. ಬಿಸಿ ಉಪಕರಣ ಉಪಯೋಗಿಸುವಾಗ ಕೂಲೆಸ್ಟ್‌ ಸೆಟಿ೦ಗ್‌ನಲ್ಲಿಡಲು ಪ್ರಯತ್ನಿಸಿ.  
 
*ನಿಂಬೆ ರಸ ಹಾಗೂ ತೆಂಗಿನಕಾಯಿ ಹಾಲಿನ ಪೇಸ್ಟ್‌ ನೈಸರ್ಗಿಕವಾಗಿ ಕೂದಲನ್ನು ನಯಗೊಳಿಸಲು ಉತ್ತಮ ವಿಧಾನ. ಅದು ಕ್ರೀಮ್‌ ಕಂಡೀಷನರ್‌ ರೀತಿ ಕೆಲಸ ಮಾಡುತ್ತದೆ.
 
* ಒಂದು ಚಮಚ ಸೋಯಾಬಿನ್‌ ಎಣ್ಣೆ, 2 ಚಮಚ ಅರಳೆಣ್ಣೆಯನ್ನು ಬಿಸಿ ಮಾಡಿ. ತಣಿದ ಮೇಲೆ ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್‌ ಮಾಡಿ, 30 ನಿಮಿಷದ ಬಳಿಕ ಶ್ಯಾಂಪೂ ಹಾಕಿ ಕೂದಲು ತೊಳೆಯಿರಿ. 
 
* 2 ಮೊಟ್ಟೆಯನ್ನು ಆಲಿವ್‌ ಎಣ್ಣೆ ಜೊತೆ ಬೆರೆಸಿ ತಲೆಗೆ ಮಸಾಜ್‌ ಮಾಡಿ.1 ಗಂಟೆ ಬಳಿಕ ತೊಳೆದುಕೊಳ್ಳಿ. ಕೂದಲು ಸಿಲ್ಕಿ ಅ್ಯಂಡ್ ಶೈನಿಯಾಗುತ್ತದೆ.
 
*ಚಹಾ ಮತ್ತು ಕಾಫಿ ಮಿಶ್ರಣದಿಂದ ಕೂದಲಿಗೆ ಕಂದು ಬಣ್ಣ ಬರುತ್ತದೆ. ಸ್ವಲ್ಪ ನೀರಿಗೆ ಚಹಾ ಪುಡಿ ಹಾಕಿ ಚೆನ್ನಾಗಿ ಕುದಿಸಿ. ಬಳಿಕ ಇದನ್ನು ಸೋಸಿ ಅದು ಬಿಸಿಯಿರುವಾಗಲೇ ಕೂದಲಿಗೆ ಹಚ್ಚಿಕೊಳ್ಳಿ. 
 
*ಕಾಫಿ ಪುಡಿಯನ್ನು ಕೂಡಾ ನೀರಿನಲ್ಲಿ ಕುದಿಸಿ ಕೂದಲಿಗೆ ಹಚ್ಚಿಕೊಳ್ಳಬಹುದು ಅಥವಾ ಕಾಫಿ ತರಿಯನ್ನು ಹೇರ್ ಕಂಡೀಷನಿಂಗ್‌ಗೆ ಬೆರೆಸಿ ಕೂದಲಿಗೆ ಹಚ್ಚಿಕೊಳ್ಳಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಬಾಳಿಗೊಂದು ಬಂಗಾರದ ಮಾತು

ಗುರುಗಳು ಗುರುಕುಲದಲ್ಲಿ ತಮ್ಮ ಶಿಷ್ಯರೊಡನೆ ಮಾತನಾಡುತ್ತ ಕುಳಿತಿದ್ದರು. ಆಗ ತಕ್ಷಣ ಅವರು, 'ಎಲ್ಲರೂ ...

news

ಹುಡುಗೀನ ಇಂಪ್ರೆಸ್ ಮಾಡ್ಬೇಕಾ..!

ಮಗಾ ಅವಳ ಹಿಂದೆ ಅಲೆದು ಅಲೆದು ಸಾಕಾಯ್ತು ಕಣೋ.. ಆದ್ರೆ ಅವಳು ಮಾತ್ರ ನನ್ನ ಕಡೆ ತಿರುಗಿಯೂ ನೋಡಲಿಲ್ಲ.. ಛೇ ...

news

ಉಪ್ಪು ಅತಿಯಾದ್ರೆ ಆಪತ್ತು !

ಉಪ್ಪು ತಿಂದೋನು ನೀರು ಕುಡಿಲೇ ಬೇಕು.. ಆದ್ರೆ, ಈಗೀನ ಜಾಯಮಾನ ಬದಲಾಗಿದೆ. ಉಪ್ಪು ತಿಂದೋನು ಉಪ್ಪಿನಿಂದ ಬರೋ ...

ಒತ್ತಡದ ಜೀವನದಿಂದ ಮುಕ್ತಿ ಹೊಂದಬೇಕೇ.. ಇಲ್ಲಿವೆ 6 ಟಿಪ್ಸ್

ಈಗೀನ ಸ್ಪೀಡ್ ದುನಿಯಾದಲ್ಲಿ ಯಾರಿಗೆ ಯಾವಾಗ ಏನೆನಾಗುತ್ತೋ ಗೊತ್ತೆ ಆಗಲ್ಲ. ಜಂಕ್ ಫುಡ್, ಪೊಲ್ಯೋಷನ್, ...

Widgets Magazine