ತಲೆಹೊಟ್ಟಿನ ನಿವಾರಣೆಗೆ ಸರಳ ಉಪಾಯಗಳೇನು?

ಬೆಂಗಳೂರು, ಸೋಮವಾರ, 15 ಅಕ್ಟೋಬರ್ 2018 (17:03 IST)

ಈಗಿನ ವಿದ್ಯಮಾನದಲ್ಲಿ ವೇಗದ ಜೀವನ ಶೈಲಿಯಲ್ಲಿ ನಮ್ಮನ್ನು ನಾವೇ ಮರೆಯತ್ತಿದ್ದೇವೆ ಇನ್ನು ಕೂದಲ ಸಂರಕ್ಷಣೆ. ಅದರ ಪೋಷಣೆ ಮಾಡುವುದು ದೂರದ ಮಾತೇ ಸರಿ. ಅದರಲ್ಲಿಯೂ ತಲೆಹೊಟ್ಟನ್ನು ನಿವಾರಿಸಲು ಜನರು ಮಾಡುವ ಸರ್ಕಸ್ ಒಂದೆರಡಲ್ಲ. ಎಲ್ಲಾ ತರಹದ ರಾಸಾಯನಿಕ ವಸ್ತುಗಳನ್ನು ಬಳಸಿ ಇನ್ನಷ್ಟು ತೊಂದರೆಗೊಳಗಾಗುತ್ತಾರೆ. ಅದನ್ನು ಬಿಟ್ಟು ನಾವು ಸುಲಭವಾಗಿ ಮನೆಯಲ್ಲಿಯೇ ನೈಸರ್ಗಿಕವಾಗಿ ತಲೆಹೊಟ್ಟನ್ನು ನಿವಾರಿಸಿಕೊಳ್ಳಬಹುದು.
* ಸಾಮಾನ್ಯವಾಗಿ ಕೂದಲಿನ ಬುಡ ಒಣಗಿದಾಗ ತಲೆಹೊಟ್ಟಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆಗ ಕೂದಲಿಗೆ ಚೆನ್ನಾಗಿ ಎಣ್ಣೆ ಮಸಾಜ್ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.
 
* ವಾರಕ್ಕೊಮ್ಮೆ ಮೊಟ್ಟೆಯ ಹಳದಿ ಭಾಗವನ್ನು ತಲೆಗೆ ಹಚ್ಚಿಕೊಂಡು 1 ಗಂಟೆಯ ನಂತರ ತೊಳೆಯುವುದರಿಂದ ತಲೆಹೊಟ್ಟು ನಿವಾರಣೆಯಾಗುವುದಲ್ಲದೇ ತಲೆಕೂದಲೂ ಸಹ ಸೊಂಪಾಗಿ ಬೆಳೆಯುತ್ತದೆ. 
 
* ವಾರಕ್ಕೊಮ್ಮೆ ಬಾರಿ ಲೊಲೆರಸವನ್ನು ತಲೆಗೆ ಹಚ್ಚಿ ಶ್ಯಾಂಪೂ ಬಳಸದೇ ಹಾಗೆಯೇ ತೊಳೆಯುವುದರಿಂದಲೂ ಸಹ ತಲೆಹೊಟ್ಟು ನಿವಾರಣೆಯಾಗುತ್ತದೆ.
 
* ತೆಂಗಿನಕಾಯಿಯ ಸಾರಕ್ಕೆ ಸ್ವಲ್ಪ ಬಿಸಿ ನೀರು ಮತ್ತು ನಿಂಬೆ ರಸವನ್ನು ಬೆರೆಸಿ  ಹಚ್ಚುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.
 
* ಮೆಂತ್ಯದ ಸೊಪ್ಪಿನ ಪೇಸ್ಟ್‌ನ್ನು ತಲೆಗೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯುವುದರಿಂದ ತಲೆಹೊಟ್ಟು ನಿವಾರಣೆಯಾಗಬಹುದು.
 
* 1 ಚಮಚ ಅಡುಗೆ ಸೋಡಾವನ್ನು ನೀರಿನಲ್ಲಿ ಬೆರೆಸಿ 5 ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.
 
* ಕೇವಲ ನಿಂಬೆ ರಸವನ್ನು ಕೂದಲ ಬುಡಕ್ಕೆ ಹಚ್ಚಿ ಸ್ನಾನ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.
 
* ತಲೆಕೂದಲಿಗೆ ಮೆಹೆಂದಿ ಹಾಕುವುದರಿಂದಲೂ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.
 
* ಹುಳಿ ಮೊಸರನ್ನು ತಲೆಬುಡಕ್ಕೆ ಹಚ್ಚಿ ಅರ್ಥ ಗಂಟೆಯ ನಂತರ ಸ್ನಾನ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.
 
* ತಲೆಸ್ನಾನ ಮಾಡುವಾಗ ಶ್ಯಾಂಪೂವನ್ನು ಬಳಸುವುದರ ಬದಲು ಸೀಗಾಕಾಯಿ ಬಳಸುವುದರಿಂದ ತಲೆಹೊಟ್ಟು ನಿವಾರಣೆಯಾಗುವುದಲ್ಲದೇ ಅದು ಮತ್ತೆ ಬರದಂತೆ ತಡೆಗಟ್ಟಬಹುದು.
 
* 4 ಟೇಬಲ್ ಸ್ಪೂನ್‌ಗಳಷ್ಟು ಒಡೆದ ಹಾಲಿನ ರಸಕ್ಕೆ 4 ಟೇಬಲ್ ಸ್ಪೂನ್ ಕರ್ಪೂರ ಮಿಶ್ರಿತ ನೀರನ್ನು ಬೆರೆಸಿ ತಲೆಗೆ ಹಚ್ಚಿಕೊಂಡು 3 ಗಂಟೆಯ ನಂತರ ತೊಳೆಯುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ಮತ್ತು ಕೂದಲೂ ಸಹ ಸೊಂಪಾಗಿ ಬೆಳೆಯುತ್ತದೆ.
 
* ಬಿಲ್ವಪತ್ರೆಯ ತಿರುಳನ್ನು ಬೇಯಿಸಿ ತಲೆಗೆ ಹಚ್ಚುವುದರಿಂದ ತಲೆಹೊಟ್ಟು ಕಡಿಮೆಯಾಗುತ್ತದೆ.
 
* ಯಾವುದೇ ಬಣ್ಣದ ದಾಸವಾಳ ಎಲೆಯನ್ನು ರುಬ್ಬಿ ಅದಕ್ಕೆ ಮೊಸರು ಹಾಕಿ ಕಲೆಸಿದರೆ ಹೊಟ್ಟು ನಿವಾರಣೆಯಾಗುತ್ತದೆ.
 
* ತಲೆಗೆ ಆಲಿವ್ ಎಣ್ಣೆಯನ್ನು ಬಳಸುವುದರಿಂದ ಕೂದಲು ಮೃದುವಾಗುವುದಲ್ಲದೇ ಹೊಟ್ಟು ನಿವಾರಣೆಯಾಗುತ್ತದೆ.
 
      ಮಾನವನ ಚರ್ಮವು ಅತ್ಯಂತ ಸೂಕ್ಷ್ಮವಾದದ್ದಾಗಿದೆ. ಅದನ್ನು ಕಾಪಾಡಿಕೊಳ್ಳುವುದೂ ಸವಾಲೇ ಸರಿ. ಆದ್ದರಿಂದ ನಾವು ನಮ್ಮ ಚರ್ಮಕ್ಕೆ ಏನನ್ನಾದರೂ ಪ್ರಯೋಗಗಳನನ್ನು ಮಾಡುವ ಮಾದಲು ವೈದ್ಯರ ಸಲಹೆಗಳನ್ನು ಪಡೆದುಕೊಳ್ಳುವುದು ಉತ್ತಮ. ಕೂದಲಿನ ಸಮಸ್ಯೆ ಇರಬಹುದು ಅಥವಾ ಚರ್ಮದ ಸಮಸ್ಯೆಯೇ ಇರಬಹುದು. ಅದನ್ನು ಚರ್ಮರೋಗತಜ್ಞರ ಸಲಹೆಯನ್ನು ತೆಗೆದುಕೊಂಡು ಮುಂದುವರಿಯುವುದು ಉತ್ತಮ. ಏಕೆಂದರೆ ಎಲ್ಲಾ ಆಹಾರ ಪದಾರ್ಥಗಳು ಎಲ್ಲರ ದೇಹದ ಪೃಕೃತಿಗೆ ಒಗ್ಗಿಕೊಳ್ಳುವುದಿಲ್ಲ. ಇದರಿಂದ ಮುಂದೆ ತೊಂದರೆ ಅನುಭವಿಸುವುದಕ್ಕಿಂತ ಅದರಲ್ಲಿಯೂ ಬಹಳ ತಲೆಹೊಟ್ಟು ಅಥವಾ ಕೂದಲುದುರುವಿಕೆಯ ಸಮಸ್ಯೆಗೆ ವೈದ್ಯರ ಸಲಹೆಯ ಮೇರೆಗೆ ಬಳಸುವುದು ಉತ್ತಮ. ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ತಪ್ಪದೇ ಮಾಡಿ ತುಪ್ಪದ ಬಳಕೆ

ತುಪ್ಪ ಹೆಚ್ಚಿನ ಪ್ರಮಾಣದ ಕ್ಯಾಲೋರಿ, ಪೋಷಕಾಂಶಗಳನ್ನು ಹೊಂದಿದ್ದು ವೈರಸ್ ಅಥವಾ ಬ್ಯಾಕ್ಟೀರಿಯ ವಿರುದ್ದ ...

news

ಬ್ರೌನ್ ರೈಸ್‌ನ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು

ಆಹಾರ ಪದಾರ್ಥಗಳನ್ನು ತಯಾರಿಸುವಾಗ ಅತಿಯಾಗಿ ಬಳಸುವುದು ಅಕ್ಕಿಯೇ. ಅದರಲ್ಲಿಯೂ ಕಂದು ಅಕ್ಕಿಯು ದೇಹಕ್ಕೆ ...

news

ಕೊಕೊನಟ್ ರೈಸ್

ಒಂದು ದಪ್ಪತಳದ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ, ತೊಳದು ಸ್ವಚ್ಛಗೊಳಿಸಿದ ಅಕ್ಕಿಯನ್ನು ಹಾಕಿ 5 ನಿಮಿಷ ...

news

ಮದ್ದೂರು ವಡೆ

ಮೊದಲು ಬೆಣ್ಣೆಯನ್ನು ಹಿಟ್ಟುಗಳ ಜೊತೆ ಚೆನ್ನಾಗಿ ಕಲೆಸಬೇಕು. (ಅಂದರೆ ಅದು ಬ್ರೆಡ್ ಪುಡಿಯಂತೆ ಕಾಣಿಸಬೇಕು) ...