ಮುಖದ ಮೇಲೆ ಮೊಡವೆಗಳು ಏಕೆ ಏಳುತ್ತವೆ ಗೊತ್ತಾ...?

ಬೆಂಗಳೂರು, ಶನಿವಾರ, 24 ಫೆಬ್ರವರಿ 2018 (07:12 IST)

Widgets Magazine

ಬೆಂಗಳೂರು : ಮೊಡವೆ ಏಕೆ ಬರುತ್ತದೆ ಎಂಬ ಪ್ರಶ್ನೆಗೆ ಹೊಸ ಅಧ್ಯಯನವೊಂದು ಉತ್ತರ ಕಂಡುಕೊಂಡಿದೆ. ಮೊಡವೆ ಹಾಗೂ ಇತರ ಕೆಲ ಚರ್ಮದ ಸೋಂಕಿಗೆ ಕಾರಣವಾಗುವ ಪ್ರೋಪಿಯೋನಿ ಬ್ಯಾಕ್ಟೀರಿಯಮ್ ಏಕ್ನಿಸ್'ಗೆ ಆಮ್ಲಜನಕದ ಕೊರತೆ ಉಂಟಾದಾಗ ಮೊಡವೆಗಳಾಗುತ್ತವೆ ಎಂಬುದು ಈ ಅಧ್ಯಯನದಿಂದ ತಿಳಿದುಬಂದಿದೆ.


ಈ ಬ್ಯಾಕ್ಟೀರಿಯಾಗಳು ನಮ್ಮ ಚರ್ಮದ ಮೇಲೆ ಯಾವಾಗಲೂ ಇರುತ್ತವಾದರೂ ಸಾಮಾನ್ಯವಾಗಿ ನಿರುಪದ್ರವಿಗಳಾಗಿರುತ್ತವೆ. ಆದರೆ, ಚರ್ಮದ ಕೋಶಗಳು ಹಾಗೂ ಕೂದಲಿನಲ್ಲಿ ಗಾಳಿ ಆಡದ ಸ್ಥಿತಿ ನಿರ್ಮಾಣವಾದಾಗ ಈ ಬ್ಯಾಕ್ಟೀರಿಯಾಗಳು ರೊಚ್ಚಿಗೇಳುತ್ತವೆ. ನಮ್ಮ ಚರ್ಮದಲ್ಲಿ ಕಂಡುಬರುವ ಸಿರಮ್ ಎಂಬ ಎಣ್ಣೆಯನ್ನು ಈ ಬ್ಯಾಕ್ಟೀರಿಯಾ ಫ್ಯಾಟಿ ಆಸಿಡ್'ಗಳಾಗಿ ಪರಿವರ್ತಿಸುತ್ತದೆ. ಇದರೊಂದಿಗೆ ಹತ್ತಿರದ ಕೋಶಗಳು ಊದಿಕೊಳ್ಳುತ್ತವೆ. ದೇಹದಲ್ಲಿರುವ ಹಿಸ್ಟೋನ್ಸ್ ಎಂಬ ಗ್ರಂಥಿಗಳು ಈ ಊತವನ್ನು ಕಡಿಮೆ ಮಾಡಲು ಸ್ವಾಭಾವಿಕವಾಗಿ ಯತ್ನಿಸುತ್ತವಾದರೂ ಬ್ಯಾಕ್ಟೀರಿಯಾಗಳು ಉತ್ಪಾದಿಸುವ ಫ್ಯಾಟಿ ಆಸಿಡ್'ಗಳ ಮುಂದೆ ಅವುಗಳ ಆಟ ಸಾಗುವುದಿಲ್ಲ. ಹೀಗಾಗಿ, ಊತ ಕಡಿಮೆ ಆಗುವುದಿಲ್ಲ. ಚರ್ಮದ ಮೇಲೆ ತುರಿಕೆ ತರುವಂತಹ ಕೆಂಪಗಿನ ಗುಳ್ಳೆಗಳೇಳುತ್ತವೆ.


 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಕ್ಯಾನ್ಸರ್ ತಡೆಯುವಲ್ಲಿ ಕಿಮೋಥೆರಪಿಯಷ್ಟೇ ಪರಿಣಾಮಕಾರಿ ಔಷಧ ಯಾವುದು ಗೊತ್ತಾ...?

ಬೆಂಗಳೂರು : ಪ್ರಾಚೀನ ಕಾಲದ ಸಾಂಬಾರ ಪದಾರ್ಥಗಳನ್ನು ಆಹಾರದಲ್ಲಿ ಬಳಕೆ ಮಾಡುವುದರಿಂದ ಅನೇಕ ರೀತಿಯಾದ ...

news

ಗರ್ಭಪಾತದ ಬಳಿಕ ಎಷ್ಟು ತಿಂಗಳಲ್ಲಿ ಮತ್ತೆ ಗರ್ಭಧಾರಣೆ ಮಾಡಬಹುದು ಗೊತ್ತಾ…?

ಬೆಂಗಳೂರು : ಗರ್ಭಪಾತದ ಬಳಿಕ ಕೆಲವೇ ಸಮಯದಲ್ಲಿ ಮತ್ತೆ ಗರ್ಭಧಾರಣೆ ಮಾಡಲು ಕೆಲವೊಂದು ಯೋಜನೆಗಳಿವೆ. ಆದರೆ ...

news

ಸುಲಭವಾಗಿ ರೆಡಿಯಾಗುವ ಆಲೂ ಬ್ರೆಡ್ ರೋಲ್ ಮಾಡುವುದು ಹೇಗೆ ಗೊತ್ತಾ...?

ಬೆಂಗಳೂರು : ಏನಾದ್ರೂ ಬಿಸಿ ಬಿಸಿಯಾದ ಸ್ನ್ಯಾಕ್ಸ್ ತಿನ್ನಬೇಕೆಂದು ಅನಿಸುವವರು ಹೊರಗೆ ಹೋಗಿ ತಿನ್ನುವ ಬದಲು ...

news

ಹಾಲು ಕುಡಿಯುವುದರಿಂದ ನಿಜವಾಗಿಯೂ ಟಾಲರ್, ಸ್ಟ್ರಾಂಗರ್ ಆಗುತ್ತೇವೆಯೇ?!

ಬೆಂಗಳೂರು: ಹಾಲು ಕುಡಿಯುವುದರಿಂದ ಮಕ್ಕಳು ಟಾಲ್ ಆಗಿ, ಸ್ಟ್ರಾಂಗ್ ಆಗಿ ಬೆಳೆಯುತ್ತಾರೆ ಎಂದು ಹಲವು ...

Widgets Magazine