ಬೆಂಗಳೂರು: ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿರಲಿ ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವುದು ನಮ್ಮ ಪದ್ಧತಿ. ಯಾವುದೇ ಹೊಸ ಕೆಲಸಕ್ಕಾದರೂ ಸರಿಯೇ ಪಾದ ಮುಟ್ಟಿ ನಮಸ್ಕರಿಸುವುದರ ಹಿಂದೆ ಒಳ್ಳೆಯ ಉದ್ದೇಶವಿದೆ.ಹಿರಿಯರು ನಮ್ಮ ತೀರ್ಥರೂಪರು, ದೈವ ಸಮಾನರು ಎಂಬುದು ನಮ್ಮ ನಂಬಿಕೆ. ಹಿರಿಯರಿಗೆ ಸಂಪೂರ್ಣ ಶರಣಾಗತಿಯಾಗಿದ್ದೇನೆ ಎಂಬರ್ಥದಲ್ಲಿ ಪಾದ ಮುಟ್ಟಿ ನಮಸ್ಕರಿಸಲಾಗುವುದು.ಭಗವಂತನೇ ಆದರೂ, ಹಿರಿಯರೇ ಆದರೂ ಮೊದಲು ಪಾದ ಸ್ಪರ್ಶ ಮಾಡಬೇಕು ಎನ್ನುವುದು ನಮ್ಮ ಹಿರಿಯರು ಹೇಳಿಕೊಟ್ಟ ಪಾಠ. ನಾವು ಯಾರಿಗೆ ನಮಸ್ಕರಿಸುತ್ತೇವೋ ಅವರು