ರಜನಿಕಾಂತ್‌ ಬಹುನಿರೀಕ್ಷಿತ ‘ಕಾಲಾ’ ಚಿತ್ರದ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್

ರಾಮಕೃಷ್ಣ ಪುರಾಣಿಕ 

ಬೆಂಗಳೂರು, ಮಂಗಳವಾರ, 13 ಫೆಬ್ರವರಿ 2018 (19:34 IST)

ಕೆಲವು ದಿನಗಳ ಹಿಂದೆಯಷ್ಟೇ ರಜನಿಕಾಂತ್ ಅಭಿನಯದ ‘ಕಾಲಾ’ ಚಿತ್ರದ ಬಿಡುಗಡೆ ದಿನಾಂಕವು ಅಧೀಕೃತವಾಗಿ ಘೋಷಣೆಯಾಗಿತ್ತು ಮತ್ತು ಚಿತ್ರದ ಬಿಡುಗಡೆಯ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಚಿತ್ರದ ತುಣುಕೊಂದು ಇಂಟರ್ನೆಟ್‌ನಲ್ಲಿ ಸೋರಿಕೆಯಾಗಿದೆ.
ವರದಿಗಳ ಪ್ರಕಾರ, ರಜನಿಕಾಂತ್‌ರವರ ಸಾಹಸ ಸನ್ನಿವೇಶ ಹೊಂದಿರುವ ದೃಶ್ಯವೊಂದು ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸಿದೆ. 13 ಸೆಕೆಂಡುಗಳ ಈ ವೀಡಿಯೊವನ್ನು ಸಾಹಸ ಸನ್ನಿವೇಶದ ದೃಶ್ಯವನ್ನು ಚಿತ್ರೀಕರಣ ಮಾಡುತ್ತಿರುವಾಗ ಸೆರೆಹಿಡಿದಿರುವಂತೆ ತೋರುತ್ತದೆ ಮತ್ತು ಈ ದೃಶ್ಯ ಅಂತಿಮವಾಗಿ ಚಿತ್ರದಲ್ಲಿ ಇರುವುದರ ಕುರಿತು ಯಾವುದೇ ಸ್ಪಷ್ಟ ಮಾಹಿತಿಯಿಲ್ಲ. ಚಿತ್ರ ನಿರ್ಮಾಣ ತಂಡವು ಇನ್ನೂ ಸೋರಿಕೆ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
 
ಗ್ಯಾಂಗ್‌ಸ್ಟರ್‌ಗಳ ಕುರಿತಾಗಿರುವ ಈ ಚಿತ್ರವು, ಮುಂಬೈನಲ್ಲಿ ತಮಿಳಿಗರ ಬೆಂಬಲಕ್ಕಾಗಿ ನಿಲ್ಲುವ ತಮಿಳಿಗರ ಡಾನ್‌ನ ಕುರತಾದ ಕಥೆಯನ್ನು ಹೊಂದಿದೆ ‘ಕಾಲಾ’ ಚಲನಚಿತ್ರ. ಈ ಮೊದಲು, ಚಿತ್ರವು ಹಾಜಿ ಮಸ್ತಾನ್ ಜೀವನವನ್ನು ಆಧರಿಸಿದೆ ಎಂದು ವರದಿಗಳು ತಿಳಿಸಿದ್ದವು, ನಂತರದಲ್ಲಿ ಪಾ ರಂಜೀತ್ ಆಧಾರವಿಲ್ಲದ ವದಂತಿಯನ್ನು ತಳ್ಳಿಹಾಕಿದ್ದರು. 'ಕಬಾಲಿ' ಚಲನಚಿತ್ರದ ಯಶಸ್ಸಿನ ನಂತರ ರಂಜೀತ್ ಜೊತೆಗೆ ರಜನಿಕಾಂತ್ ಅವರ ಎರಡನೇ ಚಿತ್ರ ಇದಾಗಿದ್ದು, ಅಳಿಯ ಧನುಷ್ ಅವರ ವಂಡರ್‌ಬಾರ್ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣವಾಗಿದೆ.
 
‘ಕಾಲಾ’ ಚಲನಚಿತ್ರದಲ್ಲಿ ಹುಮಾ ಖುರೇಶಿ, ನಾನಾ ಪಾಟೇಕರ್, ಸಮುದ್ರಕಣಿ, ಅಂಜಲಿ ಪಾಟೀಲ್, ಸಂಪತ್ ರಾಜ್ ಮತ್ತು ಈಶ್ವರಿ ರಾವ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಏಪ್ರಿಲ್ 27 ರಂದು ಅದ್ಧೂರಿ ಬಿಡುಗಡೆಗೆ ಸಿದ್ಧವಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪ್ರಿಯಾ ಪ್ರಕಾಶ್ ನಟಿ ಮಾತ್ರವಲ್ಲ, ಒಳ್ಳೆಯ ಸಿಂಗರ್ ಎನ್ನುವುದು ನಿಮಗೆ ಗೊತ್ತಾ?

ಕೇವಲ 24 ಗಂಟೆಗಳಲ್ಲಿ ತಮ್ಮ ವೀಡಿಯೊವೊಂದರಿಂದ ಇಂಟರ್‌ನೆಟ್‌ನಲ್ಲಿ ಸೆನ್ಸೇಶನ್ ಉಂಟುಮಾಡಿರುವ ಮಲಯಾಳಂ ಮೂಲದ ...

news

ಸೀರೆಯಲ್ಲಿ ಫುಶ್ ಅಪ್ಸ್ ಮಾಡಿದ ಮಂದಿರಾ, ವೈರಲ್ ಆಯ್ತು ವಿಡಿಯೋ

45 ವರ್ಷದ ಬೋಲ್ಡ್‌ ನಟಿ ಹಾಗೂ ಖ್ಯಾತ ನಿರೂಪಕಿ ಮಂದಿರಾ ಬೇಡಿ ಫಿಟ್ನೆಸ್ ಬಗ್ಗೆ ಸಿಕ್ಕಾಪಟ್ಟೆ ಕಾಳಜಿ ...

news

ಯೋಗ ಡ್ರೆಸ್ ನಲ್ಲೂ ಸಖತ್ ಹಾಟ್ ಆಗಿ ಕಾಣಿಸುವ ಮಲೈಕಾ!

ಮುಂಬೈ: ಬಾಲಿವುಡ್ ನಲ್ಲಿ ಇತ್ತೀಚೆಗೆ ತಾಯಂದಿರು ಚಿರಯವ್ವೌನದಿಂದ ಮಿಂಚುತ್ತಿದ್ದಾರೆ. ಶಿಲ್ಪಾ ಶೆಟ್ಟಿ, ...

news

ಪ್ಯಾಡ್ ಮ್ಯಾನ್ ಚಿತ್ರಕ್ಕೆ ಪಾಕಿಸ್ತಾನದಲ್ಲಿ ವಿರೋಧ ವ್ಯಕ್ತವಾಗಿದ್ದು ಯಾಕೆ ಗೊತ್ತಾ…?

ಮುಂಬೈ : ಅಕ್ಷಯ್ ಕುಮಾರ್ ಅಭಿಯದ ಪ್ಯಾಡ್ ಮ್ಯಾನ್ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ಕಾಣುತ್ತಿದ್ದು, ಆದರೆ ...

Widgets Magazine
Widgets Magazine