Widgets Magazine
Widgets Magazine

ಟಾಲಿವುಡ್ ನಲ್ಲಿ ಡ್ರಗ್ ಮಾಫಿಯಾ: ಯಾವೆಲ್ಲ ಸೆಲೆಬ್ರೆಟಿಗಳ ಹೆಸರು ಸೇರಿಕೊಂಡಿದೆ ಗೊತ್ತಾ..?

ಹೈದರಾಬಾದ್, ಶುಕ್ರವಾರ, 14 ಜುಲೈ 2017 (17:13 IST)

Widgets Magazine

ಹೈದ್ರಾಬಾದ್:ಟಾಲಿವುಡ್ ಚಿತ್ರರಂಗದ ಹಲವರು ಡ್ರಗ್ಸ್ ಮಾಫಿಯಾದಲ್ಲಿ ಸಿಲುಕಿದ್ದು, ಇದರಿಂದ ಟಾಲಿವುಡ್ ಚಿತ್ರರಂಗದ ಹೆಸರು ಹಾಳಾಗುತ್ತಿದೆ ಎಂದು ಇತ್ತೀಚೆಗೆ ನಿರ್ಮಾಪಕ ಅಲ್ಲು ಅರವಿಂದ್ ಕಾವಳ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ತೆಲಂಗಾಣ ಅಬಕಾರಿ ಮತ್ತು ತರಬೇತಿ ಇಲಾಖೆ  15 ಟಾಲಿವುಡ್ ಸೆಲೆಬ್ರಿಟಿಗಳಿಗೆ ನೋಟಿಸ್ ಜಾರಿಮಾಡಿದೆ.
 
ಈ ಎಲ್ಲಾ ಸೆಲೆಬ್ರೆಟಿಗಳು ವಿಶೇಷ ತನಿಖಾ ತಂಡ ಹಾಗೂ ಅಬಕಾರಿ ಇಲಾಖೆ ಮುಂದೆ ಜುಲೈ 19 ರ ಒಳಗಾಗಿ ಹಾಜರಾಗುವಂತೆ ನೋಟಿಸ್ ನಲ್ಲಿ ಸೂಚಿಸಲಾಗಿದೆ. ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಯ ಮೊಬೈಲ್ ನಲ್ಲಿ ಸಿಕ್ಕ ಸುಳಿವಿನ ಆಧಾರದ ಮೇಲೆ  ತೆಲುಗಿನ ಟಾಪ್ ಸೆಲೆಬ್ರೆಟಿಗಳಿಗೆ ಈ ನೋಟಿಸ್ ಕಳುಹಿಸಲಾಗಿದೆ.
 
ಇನ್ನು ಈ ಮಾಫಿಯಾದಲ್ಲಿ ಕೇಳಿಬರುತ್ತಿರುವ ಹೆಸರುಗಳೆಂದರೆ ಸ್ಟಾರ್ ನಟ ರವಿತೇಜಾ, ಪುರಿ ಜಗನ್ನಾಥ್, ಸುಭ್ರರಾಜು, ಸಿಂಗರ್ ಗೀತಾ ಮಾಧುರಿಯ ಪತಿ ನಂದು, ತಾನಿಶ್, ನವದೀಪ್, ಚಾರ್ಮಿ, ಮುಮೈತಾ ಖಾನ್ ಮೊದಲಾದವರ ಹೆಸರು ಕೇಳಿಬರುತ್ತಿದ್ದು, ಇವರೆಲ್ಲಾ ಭಾಗಿಯಾಗಿದ್ದಾರೋ ಇಲ್ಲವೋ ಎಂಬುದು ತನಿಖೆಯಿಂದಷ್ಟೇ ಖಚಿತಪಡಬೇಕಿದೆ.
 Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಶ್ರೀಕೃಷ್ಣನಾಗಲು ನಾನ್ ವೆಜ್ ಬಿಟ್ಟ ರವಿಚಂದ್ರನ್

ಬೆಂಗಳೂರು: ಸಿನಿಮಾ ಮಂದಿಯೇ ಹಾಗೆ. ತಮ್ಮ ಪಾತ್ರದ ಅನುಕೂಲಕ್ಕೆ ತಕ್ಕಂತೆ ಏನೇನೋ ಸರ್ಕಸ್ ಮಾಡಬೇಕಾಗುತ್ತದೆ. ...

news

ವಿವಾದಕ್ಕೀಡಾದ ಚಾರ್ಮಿ ಕೌರ್ ತುಂಡುಡುಗೆ

ಇತ್ತೀಚೆಗೆ ಪೈಸಾ ವಸೂಲ್ ಚಿತ್ರಕ್ಕೆ ಭಾರೀ ಸಂಭಾವನೆ ಪಡೆದು ಸುದ್ದಿಯಾಗಿದ್ದ ತೆಲುಗು ನಟಿ ಚಾರ್ಮಿ ಕೌರ್ ...

news

ಡ್ರಗ್ಸ್ ಮಾಫಿಯಾದಲ್ಲಿ ತೆಲುಗಿನ ನಟ-ನಟಿಯರು

ಡ್ರಗ್ ಮಾಫಿಯಾದಲ್ಲಿ 9 ಮಂದಿ ತೆಲುಗು ಚಿತ್ರರಂಗದವರ ಹೆಸರು ಕೇಳಿಬಂದಿದೆ. ಇಬ್ಬರು ನಟಿಯರು ಮತ್ತು ಮೂವರು ...

news

ಮತ್ತೆ ದಿಲೀಪ್ ಗೆ ಜಾಮೀನಿಲ್ಲ! ಸಹೋದರನ ಹೇಳಿಕೆಯೇ ಮುಳುವಾಯಿತೇ?!

ಕೊಚ್ಚಿ: ಬಹುಭಾಷಾ ತಾರೆಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದಿಲೀಪ್ ಗೆ ...

Widgets Magazine Widgets Magazine Widgets Magazine