ಪತ್ನಿ ಐಶ್ವರ್ಯಾ ರೈ ಫೋಟೋ ತೆಗೆದ ಫೋಟೋಗ್ರಾಫರ್ ನ ‘ವಿಚಾರಿಸಿಕೊಂಡ’ ಅಭಿಷೇಕ್!

ಮುಂಬೈ, ಶನಿವಾರ, 11 ನವೆಂಬರ್ 2017 (07:59 IST)

ಮುಂಬೈ: ಐಶ್ವರ್ಯಾ ರೈ ಬಚ್ಚನ್ ಹೋದಲ್ಲೆಲ್ಲಾ ಕ್ಯಾಮರಾ ಕಣ್ಣು ಕ್ಲಿಕ್ಕಿಸುವುದು ಸಾಮಾನ್ಯ. ಆದರೆ ಇತ್ತೀಚೆಗೆ ಪಾರ್ಟಿಯಿಂದ ಮರಳುತ್ತಿದ್ದ ಐಶ್ವರ್ಯಾ ಫೋಟೋ ತೆಗೆದ ಕ್ಯಾಮರಾ ಮೆನ್ ನ್ನು ಪತಿ ಅಭಿಷೇಕ್ ಪ್ರತ್ಯೇಕವಾಗಿ ‘ವಿಚಾರಿಸಿಕೊಂಡ’ ಘಟನೆ ನಡೆದಿದೆ.


 
ಡಿಸೈನರ್ ಮನೀಶ್ ಮಲ್ಹೋತ್ರಾ ಆಯೋಜಿಸಿದ್ದ ಭೋಜನ ಕೂಟಕ್ಕೆ ಪತಿ ಅಭಿಷೇಕ್ ಬಚ್ಚನ್ ಜತೆ ಐಶ್ವರ್ಯಾ ಆಗಮಿಸಿದ್ದರು. ಈ ಪಾರ್ಟಿ ಮುಗಿಸಿ ಮನೆಗೆ ಮರಳುತ್ತಿದ್ದ ಐಶ್ವರ್ಯಾ ಕಾರು ಹತ್ತುವ ಮೊದಲು ಅಲ್ಲಿ ನೆರೆದಿದ್ದ ಫೋಟೋಗ್ರಾಫರ್ ಗಳು ಸಾಕಷ್ಟು ಫೋಟೋ ತೆಗೆದಿದ್ದರು.
 
ಆದರೆ ಕಾರು ಹತ್ತಿ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಅಭಿಷೇಕ್ ಗೆ ಅದೇನೆನಿಸಿತೋ. ಅವರಲ್ಲಿ ಓರ್ವ ಫೋಟೋ ಜರ್ನಲಿಸ್ಟ್ ನ್ನು ಪಕ್ಕಕ್ಕೆ ಕರೆದ ಆತನನ್ನು ಪ್ರಶ್ನಿಸಿದ್ದಲ್ಲದೆ, ಕ್ಯಾಮರಾ ತೋರಿಸುವಂತೆ ಕೇಳಿದರು. ಕ್ಯಾಮರಾದಲ್ಲಿದ್ದ ಐಶ್ವರ್ಯಾ ಫೋಟೋಗಳನ್ನು ಪರಿಶೀಲಿಸಿದ ಅಭಿಷೇಕ್ ಅದರಲ್ಲಿ ಅಶ್ಲೀಲ ಫೋಟೋ ಇಲ್ಲವೆಂದು ಸಮಾಧಾನವಾದ ಬಳಿಕ ಆತನನ್ನು ಕಳುಹಿಸಿದ ಘಟನೆ ನಡೆದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮತ್ತೆ ಶೇಮ್‌ಲೆಸ್ ನಗ್ನ ಸೆಲ್ಫಿ ಪೋಸ್ಟ್ ಮಾಡಿದ ದಂಗಲ್ ಚಿತ್ರದ ಬೆಡಗಿ

ನವದೆಹಲಿ: ದಂಗಲ್ ಹುಡುಗಿ ಫಾತಿಮಾ ಸಾನಾ ಶೇಖ್ ಸ್ವಲ್ಪ ಸಮಯದವರೆಗೆ ಟ್ರೋಲರ್ಸ್‌ಗೆ ನೆಚ್ಚಿನವಳಾಗಿದ್ದಳು. ...

news

ನ.24 ರಂದು ಸಪ್ತಪದಿ ತುಳಿಯಲಿರುವ ಕಾಲಿವುಡ್ ಹಾಟ್ ನಟಿ ನಮಿತಾ

ಚೆನ್ನೈ: ಮಾದಕ ದೇಹ ಸೌಂದರ್ಯದಿಂದ ಪಡ್ಡೆಹುಡುಗರನ್ನು ಕೆರಳಿಸಿದ್ದ ದಕ್ಷಿಣ ಭಾರತೀಯ ಚಿತ್ರರಂಗದ ಹಾಟ್ ತಾರೆ ...

news

ಸಲ್ಮಾನ್ ಖಾನ್ ಕರೆದರೆ ಇಲ್ಲಿಗೂ ಬರುತ್ತೇನೆ ಎಂದಳಾ ಚೆಲುವೆ!

ಮುಂಬೈ: ಸಲ್ಮಾನ್ ಖಾನ್ ಬಾಲಿವುಡ್ ನಲ್ಲಿ ಈಗಲೂ ಯುವತಿಯರ ಫೇವರಿಟ್. ಈ ಎವರ್ ಗ್ರೀನ್ ಹೀರೋ ಕರೆದರೆ ನಾ ...

news

ರಚಿತಾ ರಾಂ ಮದುವೆಯಾಗುತ್ತಿರುವುದು ನಿಜವೇ?

ಬೆಂಗಳೂರು: ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಂ ಮದುವೆಯಾಗುತ್ತಾರಂತೆ. ಈಗಾಗಲೇ ಆಕೆಗೆ ಬಾಯ್ ...

Widgets Magazine
Widgets Magazine