ಮಗಳನ್ನು ಶಾಲೆಗೆ ಕಳುಹಿಸಲ್ವಾ? ಎಂದು ಪ್ರಶ್ನಿಸಿದ ಮಹಿಳೆಗೆ ಅಭಿಷೇಕ್ ಬಚ್ಚನ್ ಕೊಟ್ಟ ಉತ್ತರ!

ಮುಂಬೈ, ಬುಧವಾರ, 6 ಡಿಸೆಂಬರ್ 2017 (08:55 IST)

ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತು ನಟಿ ಐಶ್ವರ್ಯಾ ರೈ ಪುತ್ರಿ ಆರಾಧ್ಯ ಬಚ್ಚನ್ ಗೆ ಈಗ 6 ವರ್ಷ. ಹಾಗಿದ್ದರೂ ಈಗಲೇ ಬಚ್ಚನ್ ಕುಡಿ ಭಾರೀ ಫೇಮಸ್ಸು.
 

ಅಮ್ಮ ಐಶ್ವರ್ಯಾ ಹೋಗುವ ಸಮಾರಂಭಗಳಲ್ಲಿ ಮಗಳು ಆರಾಧ್ಯನೂ ಜತೆಯಾಗಿರುತ್ತಾಳೆ. ಇತ್ತೀಚೆಗೆ ಐಶ್ವರ್ಯಾ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮಂಗಳೂರಿಗೆ ಬಂದಿದ್ದಾಗಲೂ ಆರಾಧ್ಯ ಜತೆಗಿದ್ದಳು.
 
ಈ ಬಗ್ಗೆ ಮಹಿಳೆಯೊಬ್ಬರು ಅಭಿಷೇಕ್ ಬಚ್ಚನ್ ಗೆ ಟ್ವಿಟರ್ ನಲ್ಲಿ ಪ್ರಶ್ನೆ ಮಾಡಿದ್ದಾರೆ. ‘ನಿಮ್ಮ ಮಗಳು ಯಾವಾಗ ನೋಡಿದರೂ ಅವಳ ತಾಯಿ ಕೈ ಹಿಡಿದುಕೊಂಡು ಸಮಾರಂಭಗಳಲ್ಲಿ ಸುತ್ತುತ್ತಿರುತ್ತಾಳಲ್ಲಾ. ಜ್ಯೂನಿಯರ್ ಬಚ್ಚನ್, ನಿಮ್ಮ ಮಗಳು ಶಾಲೆಗೆ ಹೋಗುತ್ತಾಳೋ ಇಲ್ಲವೋ? ಅವಳಿಗೆ ಸಹಜ ಬಾಲ್ಯ ಇಲ್ಲವೇ?’ ಎಂದು ಪ್ರಶ್ನಿಸಿದ್ದರು.
 
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಅಭಿಷೇಕ್ ‘ಡಿಯರ್ ಮೇಡಂ, ನನಗೆ ಗೊತ್ತಿರುವ ಮಟ್ಟಿಗೆ ವಾರಂತ್ಯದಲ್ಲಿ ಶಾಲೆಗಳಿಗೆ ರಜೆ ಇರುತ್ತದೆ. ನಿಮಗೆ ಆ ಕುರಿತು ಮಾಹಿತಿ ಇಲ್ಲ ಎನಿಸುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ. ಐಶ್ವರ್ಯಾ ಜತೆ ಆರಾಧ್ಯ ಕಳೆದ ಭಾನುವಾರ ಮಂಗಳೂರಿಗೆ ಭೇಟಿ ನೀಡಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸೊಸೆಯನ್ನೇ ಮರೆತ ನಟ ಜಗ್ಗೇಶ್ ಗೆ ನೆನಪಿಸಿದ ಅಭಿಮಾನಿಗಳು!

ಬೆಂಗಳೂರು: ನವರಸನಾಯಕ ಜಗ್ಗೇಶ್ ಪುತ್ರ ಗುರುರಾಜ್ ವಿದೇಶೀ ಯುವತಿಯನ್ನು ವಿವಾಹವಾಗಿರುವುದು ಎಲ್ಲರಿಗೂ ...

news

ಬಿಗ್ ಬಾಸ್: ಮೀಸೆ ಬೋಳಿಸಿಕೊಂಡ ಜೆಕೆ, ಹುಡುಗಿಯರಿಗೆ ಬೇಜಾರು!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಮೊದಲ ದಿನದಿಂದಲೂ ಸ್ವಭಾವದಲ್ಲೂ, ಲುಕ್ ನಲ್ಲೂ ಒಂದೇ ರೀತಿ ಮೇನ್ ಟೈನ್ ...

news

ಯಶ್ ಮಡದಿಯಾದ ಮೇಲೂ ಬ್ಯಾಚ್ಯುಲರ್ ದಿನಗಳನ್ನು ನೆನೆಸಿಕೊಂಡ ರಾಧಿಕಾ ಪಂಡಿತ್

ಬೆಂಗಳೂರು: ರಾಧಿಕಾ ಪಂಡಿತ್ ಯಶ್ ಮಡದಿಯಾಗಿ ಒಂದು ವರ್ಷ ತುಂಬಲು ಇನ್ನೆರಡೇ ದಿನ ಬಾಕಿಯಿದೆ. ಈ ...

news

ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ಸರ್ಪ್ರೈಸ್ ಅತಿಥಿ!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಇದೀಗ ತಾನೇ ಸಿಹಿ ಕಹಿ ಚಂದ್ರು ಎಲಿಮಿನೇಟ್ ಆದ ಶಾಕ್ ನಿಂದ ಸ್ಪರ್ದಿಗಳು ...

Widgets Magazine