ನಟ ಸಲ್ಮಾನ್ ಖಾನ್ ಮೇಲೆ ಕಿಡಿಕಾರಿದ ಗಾಯಕ ಅಭಿಜಿತ್ ಭಟ್ಟಾಚಾರ್ಯ

ಮುಂಬೈ, ಸೋಮವಾರ, 8 ಅಕ್ಟೋಬರ್ 2018 (19:43 IST)

ಮುಂಬೈ : ಪಾಕಿಸ್ತಾನದ ಗಾಯಕರನ್ನು ಪ್ರಮೋಟ್ ಮಾಡುತ್ತಿರುವುದಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ  ವಿರುದ್ಧ ಗಾಯಕ ಕಿಡಿಕಾರಿದ್ದಾರೆ.


ಈ ಹಿಂದೆ ಬಾಲಿವುಡ್ ನ ಬಾದ್ ಶಾ ಶಾರುಕ್ ಖಾನ್ ಬಗ್ಗೆ ಬೇಸರಗೊಂಡಿದ್ದ ಗಾಯಕ ಅಭಿಜಿತ್ ಭಟ್ಟಾಚಾರ್ಯ ಇದೀಗ ನಟ ಸಲ್ಮಾನ್ ಖಾನ್ ಪಾಕಿಸ್ತಾನದ ಗಾಯಕರಿಗೆ ಪ್ರಮೋಶನ್ ನೀಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ’ಸಲ್ನಾನ್ ಖಾನ್ ಅವರ ಸಿನಿಮಾಗಳಲ್ಲಿ ಹಾಡಲು ಪಾಕಿಸ್ತಾನದ ಗಾಯಕರನ್ನು ಏಕೆ ಪ್ರಮೋಟ್ ಮಾಡುತ್ತಿದ್ದಾರೆ. ಭಾರತೀಯ ಗಾಯಕರು ಅವರ ಸಿನಿಮಾದಲ್ಲಿ ಚೆನ್ನಾಗಿ ಹಾಡುವುದಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.


ಹಾಗೇ ‘ಭಾರತೀಯ ಸಿನಿಮಾರಂಗದಲ್ಲಿ ಕೆಲಸ ಮಾಡದಂತೆ ಪಾಕಿಸ್ತಾನಿ ಕಲಾವಿದರಿಗೆ ನಿರ್ಬಂಧ ಹೇರಬೇಕು. ಒಂದು ಕಡೆ ಈ ಪಾಕಿಸ್ತಾನಿಗಳು ನಮ್ಮಸೈನಿಕರನ್ನು ಕೊಲ್ಲುತ್ತಿದ್ದಾರೆ. ಆದರೆ ಇನ್ನೊಂದು ಕಡೆ ಸಲ್ಮಾನ್ ಪಾಕಿಸ್ತಾನದ ಪ್ರತಿಭೆಗೆ ಅವಕಾಶ ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.


ಮೈ ಹೂ ನಾ ಚಿತ್ರದ ನಂತರ ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡುವುದನ್ನು ಯಾಕೆ ನಿಲ್ಲಿಸಿದೆ ಎಂಬುದನ್ನು ಹೇಳಿದ್ದಾರೆ.  ನಾನು ಯಾವುದೇ ಖಾನ್ ಗಳ ಜತೆ ಮುಂದೆ ಹಾಡುವುದಿಲ್ಲ. ‘ಮೈ ಹೂ ನಾ’ ಸಮಯದಲ್ಲಿ ಎಲ್ಲರಿಗೂ ಸಲಾಂ ಹೊಡೆದು ಬದುಕಬೇಕಾದ ಸ್ಥಿತಿ ಇತ್ತು ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ತನುಶ್ರೀ ದತ್ತಾ ಅವರ #ಮಿಟೂ ಚಳುವಳಿಯನ್ನು ಬೆಂಬಲಿಸಿದ ರಣವೀರ್ ಸಿಂಗ್...

ಚಿತ್ರರಂಗವು ಕೆಲಸ ಮಾಡಲು ಸುರಕ್ಷಿತವೇ ಅಥವಾ ಅಲ್ಲವೇ ಎಂಬುದರ ಕುರಿತು ನಡೆಯುತ್ತಿರುವ ಚರ್ಚೆಯ ಕುರಿತು ...

news

ನಟಿ ಕಂಗನಾರನ್ನು ಬಿಗಿದಪ್ಪಿಕೊಂಡು , ಅವರ ಕೇಶರಾಶಿಯ ಪರಿಮಳವನ್ನು ಆಘ್ರಾಣಿಸುತ್ತಿದ್ದ ಆ ನಿರ್ದೇಶಕ ಯಾರು ಗೊತ್ತಾ?

ಮುಂಬೈ : ಬಾಲಿವುಡ್ ನಟಿ ತನುಶ್ರೀ ದತ್ತ ಖ್ಯಾತ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ...

news

ಕಿರುತೆರೆ ನಟಿಯ ಮೇಲೆ ಸ್ನೇಹಿತನಿಂದ ಹಲ್ಲೆ

ಬೆಂಗಳೂರು : ಕಿರುತೆರೆ ನಟಿಯೊಬ್ಬಳ ಮೇಲೆ ಆಕೆಯ ಸ್ನೇಹಿತನೇ ಹಲ್ಲೆ ನಡೆಸಿ, ಅಸಭ್ಯವಾಗಿ ವರ್ತಿಸಿದ್ದಲ್ಲದೆ ...

news

ನಾನಾ ಪಾಟೇಕರ್‌ ವಿರುದ್ಧ ಮತ್ತೊಮ್ಮೆ ಲೈಂಗಿಕ ಕಿರುಕುಳದ ದೂರು ದಾಖಲಿಸಿದ ನಟಿ ತನುಶ್ರೀ ದತ್ತಾ

ಮುಂಬೈ : ಸಿನಿಮಾ ಚಿತ್ರೀಕರಣದ ವೇಳೆ ಹಿರಿಯ ನಟ ನಾನಾ ಪಾಟೇಕರ್‌ ಅವರು ಲೈಂಗಿಕ ಕಿರುಕುಳ ನೀಡಿದ್ದರು ಎಂದು ...

Widgets Magazine