ಪದ್ಮಾವತಿ ಬಗ್ಗೆ ವಿರೋಧ ಮಾಡುವವರಿಗೆ ನಟ, ಬಿಜೆಪಿ ನಾಯಕ ಜಗ್ಗೇಶ್ ಏಟು

ಬೆಂಗಳೂರು, ಶನಿವಾರ, 13 ಜನವರಿ 2018 (08:19 IST)

ಬೆಂಗಳೂರು: ಬಾಲಿವುಡ್ ನ ಪದ್ಮಾವತಿ ಸಿನಿಮಾದಲ್ಲಿ ರಜಪೂತ ನಾಯಕಿಯನ್ನು ಆಕ್ಷೇಪಾರ್ಹವಾಗಿ ಬಿಂಬಿಸಲಾಗಿದೆ ಎಂದು ಪ್ರತಿಭಟನೆ ನಡೆಸುತ್ತಿರುವ ಕೆಲವು ಸಮುದಾಯದವರಿಗೆ ಬಿಜೆಪಿ ನಾಯಕ, ನಟ ಜಗ್ಗೇಶ್ ತಿರುಗೇಟು ನೀಡಿದ್ದಾರೆ.
 

ಯಾವುದೇ ಸಿನಿಮಾವನ್ನು ನೋಡುವ ಮೊದಲೇ ತೀರ್ಮಾನ ಕೈಗೊಳ್ಳುವುದು ನಮ್ಮ ಜಾಯಮಾನವಾಗಿಬಿಟ್ಟಿದೆ. ಪಾಶ್ಚಿಮಾತ್ಯ ಸಿನಿಮಾಗಳನ್ನು ಬಾಯಿ ಮುಚ್ಚಿಕೊಂಡು ನೋಡುತ್ತೇವೆ. ಆದರೆ ನಮ್ಮದೇ ದೇಶದ ಸಿನಿಮಾಗಳಲ್ಲಿ ಬರುವ ಪ್ರಯೋಗಗಳನ್ನು ಒಪ್ಪಿಕೊಳ್ಳಲು ನಾವು ತಯಾರಿಲ್ಲ.
 
ಸ್ವಪ್ರತಿಷ್ಠೆ ಹೆಸರಿನಲ್ಲಿ ಕಲೆಯನ್ನು ಕೊಲ್ಲಬಾರದು. ಕೆಲವರ ಮನಸ್ಸಲ್ಲಿ ಒಬ್ಬ ಅದ್ಭುತ ಭಾರತೀಯ ನಿರ್ದೇಶಕ ಇಂದು ಅಪರಾಧಿಯಾಗಿದ್ದಾನೆ. ಅವರ ವರ್ಷಾನುಗಟ್ಟಲೆ ಶ್ರಮ ವೇಸ್ಟ್  ಆಗಬಾರದು. ಕೂಸು ಹುಟ್ಟುವ ಮುನ್ನವೇ ಕುಲಾವಣಿ ಹೆಣೆಯುವ ಪ್ರವೃತ್ತಿ ಬೇಡ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಫೇರ್ ನೆಸ್ ಕ್ರೀಂ ಜಾಹೀರಾತಿನಲ್ಲಿ ನಟಿಸಲು 'ನೋ' ಎಂದ ನಟ ಸುಶಾಂತ್ ಸಿಂಗ್

ಮುಂಬೈ : ಎಂ.ಎಸ್. ಧೋನಿ ಚಿತ್ರದ ಮೂಲಕ ಅಸಂಖ್ಯಾತ ಅಭಿಮಾನಿಗಳ ಮನಗೆದ್ದ ಬಾಲಿವುಟ್ ನಟ ಸುಶಾಂತ್ ಸಿಂಗ್ ...

news

ನಾನು ಪ್ರಧಾನಿ ಆಗಿಯೇ ಆಗುತ್ತೇನೆ-ಹುಚ್ಚ ವೆಂಕಟ್

ಮಂಗಳೂರು : ‘ನಾನು ಒಂದು ದಿನ ಪ್ರಧಾನಿ ಆಗಿಯೇ ಆಗುತ್ತೇನೆ’ ಹೀಗೆ ಹೇಳಿದ್ದು ಯಾರು ಗೊತ್ತಾ, ತಮ್ಮ ...

news

ಬೆಂಗಳೂರು ಸಿಟಿಯ ಬಗ್ಗೆ ಬಹುಭಾಷಾ ತಾರೆ ಸೀರತ್ ಕಪೂರ್ ಹೇಳಿದ್ದೇನು ಗೊತ್ತಾ...?

ಬೆಂಗಳೂರು : ಟ್ರಾಫಿಕ್, ಧೂಳು, ಕಸದಿಂದ ತುಂಬಿದೆ ಎಂದು ಬೆಂಗಳೂರು ಸಿಟಿಯನ್ನು ಅಲ್ಲಿನ ವಾಸಿಗಳು ...

news

ಬಾಂಗ್ಲಾ ದೇಶದಲ್ಲಿ ದೀಪಿಕಾ ಪಡುಕೋಣೆ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಗಾಗಿ ಮಾಡಿದ್ದೇನು ಗೊತ್ತಾ...?

ಮುಂಬೈ : ಬಾಲಿವುಡ್ ನ ಬೆಡಗಿ ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರಿಗೆ ಸ್ವದೇಶದಲ್ಲಿ ಮಾತ್ರವಲ್ಲ ...

Widgets Magazine
Widgets Magazine