ಈ ಸ್ಟಾರ್ ನಟನ ಜೊತೆ ನಟಿಸುವ ಅವಕಾಶ ಸಿಕ್ಕರೆ ಸ್ಯಾಂಡಲ್ ವುಡ್ ನಲ್ಲಿ ನಟಿಸ್ತಾರಂತೆ ನಟ ನಾಗಾರ್ಜುನ್

ಬೆಂಗಳೂರು, ಸೋಮವಾರ, 13 ಆಗಸ್ಟ್ 2018 (14:32 IST)

ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ನಟಿಸಲು ಈಗಾಗಲೇ ಬಾಲಿವುಡ್, ಕಾಲಿವುಡ್, ಟಾಲಿವುಡ್ ನಿಂದ ಹಲವು ಸ್ಟಾರ್ ನಟರು ಬಂದು ನಟಿಸಿ ಹೋಗಿದ್ದಾರೆ. ಅದೇರೀತಿ ಇದೀಗ ಟಾಲಿವುಡ್‌ ಯಂಗ್ ಅಂಡ್ ಎನರ್ಜಿಟಿಕ್ ಹಿರೋ ನಾಗಾರ್ಜುನ್ ಅವರು ಸ್ಯಾಂಡಲ್ ವುಡ್ ನ ಸ್ಟಾರ್ ನಟರೊಬ್ಬರ ಜೊತೆ ನಟಿಸುವ ಅವಕಾಶ ಸಿಕ್ಕರೆ ಕನ್ನಡ ಸಿನಿಮಾದಲ್ಲಿ ನಟಿಸುವುದಾಗಿ ಹೇಳಿದ್ದಾರೆ.


ಹೌದು. ನಟ ನಾಗಾರ್ಜುನ್ ಅವರು ಇತ್ತೀಚೆಗಷ್ಟೇ ಬೆಂಗಳೂರಿನ ಮಾರತ್ತಳ್ಳಿಯಲ್ಲಿರೋ ಖಾಸಗಿ ವಾಣಿಜ್ಯ ಮಳಗಿಯೊಂದರ ಉದ್ಘಾಟನೆಗೆ ಆಗಮಿಸಿದ್ದರು. ಆ ವೇಳೆ  ಸ್ಯಾಂಡಲ್ ವುಡ್ ನ ಸ್ಟಾರ್ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕೂಡ ಜೊತೆಗಿದ್ದರು. ಆ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ನಟ ನಾಗಾರ್ಜುನ್ ಅವರು,’ ಕನ್ನಡದಲ್ಲಿ ಅವಕಾಶ ಬಂದ್ರೆ ಸಿನಿಮಾ ಮಾಡ್ತಿನಿ, ಅದ್ರಲ್ಲೂ ಶಿವರಾಜ್‌ ಕುಮಾರ್ ಅವ್ರ ಜೊತೆ ಅಭಿನಯಿಸುವ ಅವಕಾಶ ಬಂದ್ರೆ ಖಂಡಿತಾ ಒಪ್ಪಿಕೊಳ್ತೇನೆ ಅಂತಾ ಹೇಳಿದ್ದಾರೆ.


ನಾನು ಡಾ.ರಾಜ್‌ಕುಮಾರ್ ಅವ್ರ ಅಭಿನಯವನ್ನ ನೋಡಿದ್ದೇನೆ ಹಾಗೂ ನನ್ನ ಅಭಿನಯವನ್ನ ನೋಡಿ ಅಣ್ಣಾವ್ರು ಪೋನ್ ಮಾಡಿ ಹಾರೈಸಿದ್ರು. ಶಿವಣ್ಣ ಹಾಗೂ ನಾನು ತುಂಬಾ ಒಳ್ಳೆಯ ಸ್ನೇಹಿತರು ಮುಂದಿನ ಅವಕಾಶಕ್ಕಾಗಿ ನಾನು ಕೂಡಾ ವೇಟ್ ಮಾಡ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

'ಆರ್ ಎಕ್ಸ್ 100' ರೊಮ್ಯಾಂಟಿಕ್ ಚಿತ್ರ ಮಾಡಿದ ನಿರ್ದೇಶಕನಿಗೆ ನಿರ್ಮಾಪಕರು ದುಬಾರಿ ಗಿಪ್ಟ್ ನೀಡಿದ್ಯಾಕೆ?

ಹೈದರಾಬಾದ್ : ಟಾಲಿವುಡ್ ನಲ್ಲಿ ರೊಮ್ಯಾಂಟಿಕ್ ಚಿತ್ರವೊಂದನ್ನು ಮಾಡಿದ ನಿರ್ದೇಶಕರೊಬ್ಬರಿಗೆ ನಿರ್ಮಾಪಕರಿಂದ ...

news

ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಕಟ್ಟಲಿಲ್ಲವಂತೆ ನಟ ಸಲ್ಮಾನ್ ಖಾನ್

ಮುಂಬೈ : ಕೃಷ್ಣ ಮೃಗ ಭೇಟೆ, ರ್ಯಾಶ್ ಡ್ರೈವಿಂಗ್, ಹೀಗೆ ಹಲವಾರು ವಿಚಾರಗಳಿಗೆ ಸುದ್ದಿಯಾಗಿರೋ ನಟ ಸಲ್ಮಾನ್ ...

news

ಗರ್ಭಿಣಿ ರಾಧಿಕಾ ಪಂಡಿತ್ ಹೇಗೆ ಕಾಣ್ತಿದ್ದಾರೆ ಗೊತ್ತಾ?

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಪತ್ನಿ, ನಟಿ ರಾಧಿಕಾ ಪಂಡಿತ್ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿ ...

news

ಕೇರಳದ ನಿರಾಶ್ರಿತರ ನೆರವಿಗೆ ನಿಂತ ತಮಿಳಿನ ಸ್ಟಾರ್ ನಟ ಸಹೋದರರು

ಚೆನ್ನೈ : ತಮಿಳು ಚಿತ್ರರಂಗದ ಖ್ಯಾತ ನಟರಾದ ಸೂರ್ಯ ಮತ್ತು ಕಾರ್ತಿ ಸಿನಿಮಾರಂಗದಲ್ಲಿ ಮಾತ್ರವಲ್ಲದೇ ...

Widgets Magazine