ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಕಟ್ಟಲಿಲ್ಲವಂತೆ ನಟ ಸಲ್ಮಾನ್ ಖಾನ್

ಮುಂಬೈ, ಸೋಮವಾರ, 13 ಆಗಸ್ಟ್ 2018 (14:23 IST)

ಮುಂಬೈ : ಕೃಷ್ಣ ಮೃಗ ಭೇಟೆ, ರ್ಯಾಶ್ ಡ್ರೈವಿಂಗ್, ಹೀಗೆ ಹಲವಾರು ವಿಚಾರಗಳಿಗೆ ಸುದ್ದಿಯಾಗಿರೋ ನಟ ಸಲ್ಮಾನ್ ಖಾನ್ ಇದೀಗ ಸಂಚಾರಿ ನಿಯಮಗಳನ್ನ ಉಲ್ಲಂಘಿಸಿ ದಂಡ ಕಟ್ಟದಿರುವ ವಿಚಾರಕ್ಕೆ ಮತ್ತೆ ಸುದ್ದಿಯಾಗದ್ದಾರೆ.

 ಅತಿ ವೇಗದ ವಾಹನ ಚಾಲನೆ, ಸಿಗ್ನಲ್ ಜಂಪ್, ಜೀಬ್ರಾ ಕ್ರಾಸ್ ಗಳಲ್ಲಿ ವಾಹನ ನಿಲ್ಲಿಸಿರೋದು, ನೋ ಎಂಟ್ರಿಗಳನ್ನ ಲೆಕ್ಕಿಸದೆ ಕಾರು ನುಗ್ಗಿಸಿರೋದು ಸೇರಿದಂತೆ ಹಲವು ಸಂಚಾರಿ ನಿಯಮಗಳನ್ನ ಉಲ್ಲಂಘಿಸಿ ದಂಡ ಕಟ್ಟದಿರುವ ಪ್ರಜೆಗಳ ಪಟ್ಟಿಯನ್ನ, ಮುಂಬೈ ಟ್ರಾಫಿಕ್ ಪೊಲೀಸರು ಸಿದ್ಧಪಡಿಸಿದ್ದಾರೆ. ಅದರಲ್ಲಿ ನಟ ಸಲ್ಮಾನ್‌ ಖಾನ್‌, ರಾಜ್‌ ಠಾಕ್ರೆ ಸಂಬಂಧಿ ಯುವ ಸೇನಾ ಅಧ್ಯಕ್ಷ ಆದಿತ್ಯಾ ಠಾಕ್ರೆ, ನಟ ಕಪಿಲ್ ಶರ್ಮಾ ಮುಂತಾದವರು ಸ್ಥಾನ ಪಡೆದಿದ್ದಾರೆ.

 

ಮಹಾರಾಷ್ಟ್ರದ ದಿನಪತ್ರಿಕೆಯೊಂದರ ತನಿಖಾ ವರದಿಯ ಪ್ರಕಾರ ಎಂಎಚ್ 02 ಬಿವೈ 2727 ಹೆಸರಿನ ವಾಹನ ಸಲ್ಮಾನ್ ಖಾನ್ ಸೋದರ ಅರ್ಬಾಜ್ ಖಾನ್ ಹೆಸರಿನಲ್ಲಿ ರಿಜಿಸ್ಟರ್ ಆಗಿದೆ. ಈ ವಾಹನ ಪ್ರಸಕ್ತ ವರ್ಷದಲ್ಲಿ ಜನವರಿಯಿಂದ ಜೂನ್ ವರೆಗೆ ಹಲವು ಬಾರಿ ಟ್ರಾಫಿಕ್ ನಿಯಮಗಳನ್ನ ಉಲ್ಲಂಘಿಸಿದ ಕಾರಣಕ್ಕಾಗಿ ಸುಮಾರು 4000 ರೂಪಾಯಿ ದಂಡ ಬಾಕಿ ಇದೆ. ಇದಕ್ಕೆ ಸಂಬಂಧಿಸಿದ ಇ- ಚಲನ್ ಗಳನ್ನ ನೀಡಲಾಗಿದೆಯಂತೆ. ಆದ್ರೆ ಈ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಪೊಲೀಸರು ಈ ಬಗ್ಗೆ ನಮಗೆ ತಿಳಿಸಿದ್ದರೆ ನಾವು ದಂಡವನ್ನು ಕಟ್ಟಿಬಿಡ್ತಿದ್ವಿ ಅಂದಿದೆ ಸಲ್ಮಾನ್ ಖಾನ್ ಕುಟುಂಬ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಗರ್ಭಿಣಿ ರಾಧಿಕಾ ಪಂಡಿತ್ ಹೇಗೆ ಕಾಣ್ತಿದ್ದಾರೆ ಗೊತ್ತಾ?

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಪತ್ನಿ, ನಟಿ ರಾಧಿಕಾ ಪಂಡಿತ್ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿ ...

news

ಕೇರಳದ ನಿರಾಶ್ರಿತರ ನೆರವಿಗೆ ನಿಂತ ತಮಿಳಿನ ಸ್ಟಾರ್ ನಟ ಸಹೋದರರು

ಚೆನ್ನೈ : ತಮಿಳು ಚಿತ್ರರಂಗದ ಖ್ಯಾತ ನಟರಾದ ಸೂರ್ಯ ಮತ್ತು ಕಾರ್ತಿ ಸಿನಿಮಾರಂಗದಲ್ಲಿ ಮಾತ್ರವಲ್ಲದೇ ...

news

ಸ್ನೇಹಿತನ ಜೀವ ಉಳಿಸಲು ನಟಿ ಸನ್ನಿ ಲಿಯೋನ್ ಮಾಡಿದ್ದೇನು ಗೊತ್ತೇ?

ಮುಂಬೈ : ಮಾಜಿ ನೀಲಿ ಚಿತ್ರ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್​ ಅವರು ಕಿಡ್ನಿ ಕಳೆದುಕೊಂಡು ...

news

ಪಾಕ್ ಗಾಯಕ ಅತಿಫ್ ಅಸ್ಲಾಮ್ ವಿರುದ್ಧ ಪಾಕ್ ಜನರು ಕೋಪಗೊಂಡಿದ್ಯಾಕೆ?

ಕರಾಚಿ : ನ್ಯೂಯಾರ್ಕ್ ನಲ್ಲಿ ನಡೆದ ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಹಾಡು ಹಾಡಿದ ಪಾಕ್ ಗಾಯಕ ...

Widgets Magazine
Widgets Magazine