ಚಿಕ್ಕ ಚಿಕ್ಕ ಬಟ್ಟೆ ತೊಟ್ಟುಕೊಳ್ಳುವುದಕ್ಕೆ ಹೇಳಿದ್ದಕ್ಕೆ ನಟಿ ಪುಲ್ ಗರಂ!

ಮುಂಬೈ, ಬುಧವಾರ, 14 ಮಾರ್ಚ್ 2018 (07:01 IST)

ಮುಂಬೈ : ಸಿನಿಮಾ ರಂಗದಲ್ಲಿ ತಾರೆಯರು, ನಿರ್ದೇಶಕರ ಮೇಲೆ ಆರೋಪ ಮಾಡಿರುವುದನ್ನು ನಾವು ಅನೇಕ ಬಾರಿ ಕೇಳಿರುತ್ತೇವೆ, ಅದೇರೀತಿ ಇದೀಗ  ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ಅಭಿನಯಿಸಿದ ನಟಿ ಇಲಿಯಾನಾ ಅವರು ದಕ್ಷಿಣ ಭಾರತದ ಸಿನಿಮಾ ನಿರ್ದೇಶಕರ ವಿರುದ್ಧ ಆರೋಪವೊಂದನ್ನು ಮಾಡಿದ್ದಾರೆ.


ಪತ್ರಿಕೆಯೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು,’ ನಟಿಯಾಗಿ ನಿರೂಪಿಸಿಕೊಳ್ಳಲು ನಾನೆಷ್ಟೇ ಪ್ರಯತ್ನ ಮಾಡಿದರು ನಿರ್ದೇಶರು ನನಗೆ ಚಾನ್ಸ್‌ ಕೊಡುತ್ತಿರಲಿಲ್ಲ. ಬದಲಿಗೆ ಎಕ್ಸ್ ಪೋಸ್‌ ಮಾಡುವ, ಬರೀ ಗ್ಲಾಮರ್‌ಗಷ್ಟೇ ಸೀಮಿತವಾಗುವ ಪಾತ್ರಗಳನ್ನು ನೀಡಿದರು. ಹದಿನೆಂಟನೇ ವಯಸ್ಸಿಗೇ ನಾನು ಚಿತ್ರರಂಗಕ್ಕೆ ಬಂದೆ. ದೇವದಾಸು ಚಿತ್ರದ ಮೂಲಕ ತೆಲುಗಿಗೆ ಹೆಜ್ಜೆ ಇಟ್ಟೆ. ಆ ಚಿತ್ರವೂ ಸೇರಿ ಬಹುತೇಕ ಚಿತ್ರಗಳಲ್ಲಿ ನಾನು ಗ್ಲಾಮರ್‌ ಗೊಂಬೆಯಾಗಿ ಮಾತ್ರ ಕಾಣಿಸಿಕೊಳ್ಳಬೇಕಾಯಿತು. ನಟನೆ ಸುಮಾರಾಗಿದ್ದರೂ ಪರವಾಗಿಲ್ಲ, ಚಿಕ್ಕ ಚಿಕ್ಕ ಬಟ್ಟೆಗಳನ್ನು ತೊಟ್ಟು ಕಾಣಿಸಿಕೊಳ್ಳುವಂತೆ ನಿರ್ದೇಶಕರು ಹೇಳುತ್ತಿದ್ದರು’ ಎಂದು ಆರೋಪಿಸಿದ ಅವರು ದಕ್ಷಿಣಕ್ಕೆ ಹೋಲಿಸಿದರೆ ಹಿಂದಿ ನಿರ್ದೇಶಕರು ಉತ್ತಮ. ಇಲ್ಲಿ ಗ್ಲಾಮರ್‌ ಜತೆಗೆ ನಟಿಸುವ ಅವಕಾಶವೂ ಇರುತ್ತದೆ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟ ಸುದೀಪ್ ಅವರು ಮತ್ತೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು ಯಾಕೆ…?

ಬೆಂಗಳೂರು : ವಿಷ್ಣುವರ್ಧನ್ ಅವರ ಸಮಾಧಿಯನ್ನು ಸ್ಥಳಾಂತರ ಮಾಡೋದು ಬೇಡ ಎಂದು ಈ ಹಿಂದೆ ಮುಖ್ಯಮಂತ್ರಿ ...

news

‘ಆಪ್ತಮಿತ್ರರು’ ಚಿತ್ರದ ನಟ ವಿಕ್ರಂ ಕಾರ್ತಿಕ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ಬೆಂಗಳೂರು : ಸ್ಯಾಂಡಲ್ ವುಡ್ ನ ನಟರೊಬ್ಬರ ಮೇಲೆ ದರೋಡೆಕೋರರು ಹಲ್ಲೆ ನಡೆಸಿದ ಘಟನೆ ಬಸವೇಶ್ವರ ನಗರದ ವಾಟರ್ ...

news

ಹುಚ್ಚ ವೆಂಕಟ್ ನಟ ಶಿವರಾಜ್ ಕುಮಾರ್ ಮೇಲೆ ಸಿಟ್ಟಾಗಿ ಏನು ಹೇಳಿದ್ದು ಗೊತ್ತಾ…?

ಬೆಂಗಳೂರು : ಒಂದಲ್ಲ ಒಂದು ಅವಾಂತರಗಳನ್ನು ಮಾಡಿ ವಿವಾದ ಸೃಷ್ಟಿಸುವ ಹುಚ್ಚ ವೆಂಕಟ್ ಇದೀಗ ಹ್ಯಾಟ್ರಿಕ್ ...

news

ಶ್ರೀದೇವಿ ಅವರು ನಟಿಸಬೇಕಾಗಿದ್ದ ‘ಶಿದ್ದತ್’ ಚಿತ್ರಕ್ಕೆ ಈಗ ಈ ನಟಿ ಆಯ್ಕೆಯಾಗಿದ್ದಾರೆ!

ಮುಂಬೈ : ಬಾಲಿವುಡ್ ನ ಖ್ಯಾತ ನಟಿ ಶ್ರೀದೇವಿ ಅವರು ನಟಿಸಬೇಕಾಗಿದ್ದ ‘ಶಿದ್ದತ್’ ಚಿತ್ರದಲ್ಲಿ ಅವರ ...

Widgets Magazine
Widgets Magazine