ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ನಟಿ ಸೋನಾಲಿ ಬೇಂದ್ರೆಗೆ ಧೈರ್ಯ ತುಂಬಿದ್ದಾರಂತೆ ಈ ನಟ

ಮುಂಬೈ, ಭಾನುವಾರ, 8 ಜುಲೈ 2018 (07:05 IST)

ಮುಂಬೈ : ಅಪಾಯಕಾರಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಅವರನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು  ಭೇಟಿ ಮಾಡಿ ಧೈರ್ಯ ತುಂಬಿದ್ದಾರಂತೆ.


ಇತ್ತೀಚೆಗಷ್ಟೇ ನಟಿ ಸೋನಾಲಿ ಬೇಂದ್ರೆ ಅವರು ಅಪಾಯಕಾರಿ ಕ್ಯಾನ್ಸರ್ ರೋಗಕ್ಕ ತುತ್ತಾಗಿದ್ದು, ಇದೀಗ ನ್ಯೂ ಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಟ್ವೀಟರ್ ನಲ್ಲಿ ತಿಳಿಸಿದ್ದರು. ಈ ವಿಷಯ ತಿಳಿದ ಬಾಲಿವುಡ್ ಸಿನಿಮಾ ತಾರೆಯರು ಸೋಷಿಯಲ್ ಮೀಡಿಯಾದಲ್ಲಿ ಸೊನಾಲಿ ಬೇಂದ್ರೆ ಅವರು ಆದಷ್ಟು ಬೇಗ ಕ್ಯಾನ್ಸರ್ ನಿಂದ ಗುಣಮುಖರಾಗಿ ಬರಲಿ ಅಂತಾ ಹಾರೈಸಿದ್ದಾರೆ. ಆದ್ರೆ ಅಕ್ಷಯ್ ಕುಮಾರ್ ಅವರು ನಟಿಯನ್ನು ಕಂಡು ಮಾತನಾಡಿಸಿ ಬಂದಿದ್ದಾರಂತೆ.


ನಟ ಅಕ್ಷಯ್ ಕುಮಾರ್ ಅವರು  ಯುಎಸ್ ನಲ್ಲಿ ಫ್ಯಾಮಿಲಿ ಜೊತೆ ರಜೆ ಎಂಜಾಯ್ ಮಾಡುತ್ತಿದ್ದು, ಈ  ವಿಷಯ ತಿಳಿದ ತಕ್ಷಣ  ಹೋಗಿ ಸೊನಾಲಿ ಅವರನ್ನು ಕಂಡು ಮಾತಾಡಿ, ಧೈರ್ಯ ತುಂಬಿ ಬಂದಿದ್ದಾರೆ. ನಂತ್ರ ಮಾಧ್ಯಮದ ಎದುರು ಮಾತನಾಡಿ 'ಆಕೆ ನಿಜಕ್ಕೂ ಹೋರಾಟಗಾರ್ತಿ, ಆಕೆ ಮೊದಲಿನಂತೇ ಆದಷ್ಟು ಬೇಗ ಗುಣಮುಖರಾಗಲಿ’ ಎಂದು ಹೇಳಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಲ್ಮಾನ್ ಖಾನ್ ಜೊತೆ ನಟಿಸಿದ ಈ ನಟಿಗೆ ಬೆದರಿಕೆಯ ಸಂದೇಶಗಳು ಬರುತ್ತಿವೆಯಂತೆ!

ಮುಂಬೈ : ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರ ಜೊತೆ ನಟಿಸಿದ ಬಾಲಿವುಡ್ ನ ನಟಿಯೊಬ್ಬರಿಗೆ ಬೆದರಿಕೆಯ ...

news

ಬಾಲಿವುಡ್ ನಟಿ ಜಾಕ್ವೆಲಿನ್ ಕುಣಿಯಲಿರುವ ಕನ್ನಡದ ಆ ಸಿನಿಮಾ ಯಾವುದು ಗೊತ್ತಾ?

ಮುಂಬೈ : ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸ್ಯಾಂಡಲ್ ವುಡ್ ನ ಸಿನಿಮಾ ವೊಂದರಲ್ಲಿ ಐಟಂ ...

news

ಸಂಜು ಸಿನಿಮಾ ಹಾಗೂ ಸಂಜಯ್ ದತ್ ರನ್ನು ವೈಭವೀಕರಿಸಬೇಡಿ ಎಂದಿದ್ದು ಯಾರು ಗೊತ್ತಾ?

ಮುಂಬೈ : ಬಾಲಿವುಡ್ ನ ದುರಂತ ನಾಯಕ ಸಂಜಯ್ ದತ್ ಅವರ ಜೀವನಾಧಾರಿತ ‘ಸಂಜು’ ಚಿತ್ರ ಈಗ ಯಶಸ್ವಿ ಪ್ರದರ್ಶನ ...

news

ನಟ ಅಂಬರೀಶ್ ಸಾವಿನ ಮನೆಗೆ ಹೋಗುವುದಿಲ್ಲವಂತೆ. ಯಾಕೆ ಗೊತ್ತಾ?

ಬೆಂಗಳೂರು : ಚಿತ್ರರಂಗ ಹಾಗೂ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅಂಬರೀಶ್ ಅವರು ತಮ್ಮ ಆತ್ಮೀಯ ...

Widgets Magazine