ಲಿಪ್ ಲಾಕ್ ದೃಶ್ಯದಲ್ಲಿ ನಟಿಸಲಾರದೆ ಸಿನಿಮಾದಿಂದ ಹೊರ ನಡೆದ ನಟಿ ತಾರಾ ಸುತಾರಿಯಾ!

ಮುಂಬೈ, ಬುಧವಾರ, 12 ಸೆಪ್ಟಂಬರ್ 2018 (11:47 IST)

ಮುಂಬೈ : ತೆಲುಗಿನ 'ಅರ್ಜುನ್ ರೆಡ್ಡಿ' ಸಿನಿಮಾ ಹಿಂದಿಯಲ್ಲಿ ರಿಮೇಕ್ ಆಗುತ್ತಿದ್ದು, ಇದೀಗ ಈ ಚಿತ್ರದಲ್ಲಿ ನಟಿಸಲು ನಟಿ ತಾರಾ ಸುತಾರಿಯಾ ಹಿಂದೇಟು ಹಾಕಿದ್ದಾರಂತೆ.


ಹೌದು ತೆಲುಗು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹವಾ ಕ್ರಿಯೆಟ್ ಮಾಡಿದ್ದ ನಟಿಸಿರುವ 'ಅರ್ಜುನ್ ರೆಡ್ಡಿ' ಸಿನಿಮಾ ಇದೀಗ ಹಿಂದಿಗೆ ರಿಮೇಕ್ ಆಗುತ್ತಿದೆ. ಸಿನಿಮಾ ಹಕ್ಕು ಈಗಾಗಲೇ ಹಿಂದಿಗೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿದ್ದು, ಸಂದೀಪ್ ರೆಡ್ಡಿ ವೆಂಗ ಅವರೇ ಹಿಂದಿ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.


ಇದರಲ್ಲಿ ವಿಜಯ್ ದೇವರಕೊಂಡ ಮಾಡಿದ ಪಾತ್ರವನ್ನು ಶಾಹಿದ್ ಕಪೂರ್ ಮಾಡುತ್ತಿದ್ದು, ನಾಯಕಿಯಾಗಿ ನಟಿ ತಾರಾ ಸುತಾರಿಯಾ ನಟಿಸುತ್ತಾರೆ ಎಂದು ಚಿತ್ರತಂಡ ಹೇಳಿತ್ತು. ಆದರೆ ಈಗ ತಾರಾ ಈ ಪ್ರಾಜೆಕ್ಟ್​​​ನಿಂದ ಹೊರಬಂದಿದ್ದಾರೆಯಂತೆ . ಕಾರಣ ಈ ಚಿತ್ರದಲ್ಲಿ ಬರುವ  ಲಿಪ್​ಲಾಕ್ ದೃಶ್ಯ. ಲಿಪ್ ಲಾಕ್ ದೃಶ್ಯ ಗಳಲ್ಲಿ ತಾರಾಗೆ ನಟಿಸಲು ಆಸಕ್ತಿಯಿಲ್ಲದ್ದರಿಂದ ಚಿತ್ರದಿಂದ ಹೊರ ಉಳಿದಿದ್ದಾರೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪತ್ರಕರ್ತರ ಮೇಲೆ ಹರಿಹಾಯ್ದ ದೀಪಿಕಾ ಪಡುಕೋಣೆ; ಕಾರಣವೇನು ಗೊತ್ತಾ?

ಮುಂಬೈ : ಇತ್ತೀಚೆಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ಮದುವೆಯ ಬಗ್ಗೆ ಕೇಳಿದ ಪತ್ರಕರ್ತರೊಬ್ಬರ ...

news

ಯಶ್ ಕೆಜಿಎಫ್’ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್

ಬೆಂಗಳೂರು : ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಚಿತ್ರ ‘ಕೆಜಿಎಫ್’ ಸಿನಿಮಾವನ್ನು ನೋಡಲು ಕಾತುರದಿಂದ ...

news

ಅಧ್ಯಕ್ಷ ಸ್ಥಾನಕ್ಕೆ ಆಸೆಪಟ್ಟು ಲಕ್ಷಾಂತರ ರೂ. ಹಣ ಕಳೆದುಕೊಂಡ ಕಿರುತೆರೆ ನಟಿ

ಬೆಂಗಳೂರು : ಕಿರುತೆರೆ ನಟಿ ಸುಶ್ಮಿತಾ ಅಧ್ಯಕ್ಷ ಸ್ಥಾನಕ್ಕೆ ಆಸೆಪಟ್ಟು ಲಕ್ಷಾಂತರ ರೂ. ಹಣ ಕಳೆದುಕೊಂಡಿರುವ ...

news

ಎಂಗೇಜ್ ಮೆಂಟ್ ಬ್ರೇಕ್ ಅಪ್ ಬಗ್ಗೆ ಮೌನ ಮುರಿದ ರಕ್ಷಿತ್ ಶೆಟ್ಟಿ

ಬೆಂಗಳೂರು : ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಿಂದ ದೂರಸರಿದ ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಇದೀಗ ...

Widgets Magazine
Widgets Magazine