ಶೂಟಿಂಗ್ ನಲ್ಲಿ ಗಾಯ ಮಾಡಿಕೊಂಡ ಬಿಗ್ ಬಿ ಅಮಿತಾಭ್ ಬಚ್ಚನ್

ಮುಂಬೈ, ಶನಿವಾರ, 12 ಆಗಸ್ಟ್ 2017 (11:36 IST)

Widgets Magazine

ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ‘ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ. ಆದರೆ ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ ಎಂದು ಮೂಲಗಳು ಹೇಳಿವೆ.


 
ಶೂಟಿಂಗ್ ವೇಳೆ ಹೆಗಲಿಗೆ ಗಾಯಮಾಡಿಕೊಂಡಿದ್ದಾರೆ. ಅವರಿಗೆ ಸಣ್ಣ ಮಟ್ಟಿಗೆ ಎಲುಬಿಗೆ ಪೆಟ್ಟಾಗಿದೆ ಎಂದು ತಿಳಿದುಬಂದಿದೆ. ಸದ್ಯಕ್ಕೆ ತುರ್ತು ಚಿಕಿತ್ಸೆ ಪಡೆಯಲಾಗಿದ್ದು, ಗಾಯದ ಗಂಭೀರತೆ ಬಗ್ಗೆ ಮುಂಬೈಗೆ ಶೂಟಿಂಗ್ ಮುಗಿಸಿ ಬಂದ ಮೇಲೆ ಎಂಆರ್ ಐ ಸ್ಕ್ಯಾನಿಂಗ್ ಮಾಡಿಸಿ ತಿಳಿದುಕೊಳ್ಳಲಾಗುವುದು ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.
 
ಗಾಯಗೊಂಡಿದ್ದರೂ, ಚಿತ್ರತಂಡಕ್ಕೆ ತೊಂದರೆಯಾಗಬಹುದು ಎಂಬ ಹಿನ್ನಲೆಯಲ್ಲಿ ಅಮಿತಾಭ್ ಮತ್ತೆ ಶೂಟಿಂಗ್ ಮುಂದುವರಿಸಿದರು ಎಂದು ತಿಳಿದುಬಂದಿದೆ. ಹಿಂದೊಮ್ಮೆ ಕೂಲಿ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ  ಅಮಿತಾಭ್ ಗಂಭೀರವಾಗಿ ಗಾಯಗೊಂಡಿದ್ದನ್ನು ಯಾವತ್ತೂ ಮರೆಯುವಂತಿಲ್ಲ.
 
ಇದನ್ನೂ ಓದಿ…  ಜ್ವರದ ನಡುವೆಯೂ ರಾಜ್ಯದಲ್ಲಿ ರಾಹುಲ್
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಇಂದು ಮಹತ್ವದ ಸುದ್ದಿ ಸ್ಪೋಟಿಸುತ್ತಾರಾ ಉಪೇಂದ್ರ?!

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯ ಸೇರುವುದು ನಿಶ್ಚಿತವಾಗಿದೆ. ಹೀಗಿರುವಾಗ ಅವರು ಯಾವ ಪಕ್ಷ ...

news

ಉಪೇಂದ್ರ ರಾಜಕೀಯ ಪ್ರವೇಶದ ಬಗ್ಗೆ ಚರ್ಚಿಸಿದ್ದು ಯಾರ ಜೊತೆ ಗೊತ್ತಾ..?

ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಟಿ.ಎನ್. ಸೀತಾರಾಮ್ ಅವರ ...

news

ಸದ್ಯದಲ್ಲೇ ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ..?

ಹಲವು ವರ್ಷಗಳಿಂದ ರಾಜಕೀಯ ಪ್ರವೇಶದ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ ಕೆಲವೇ ...

Widgets Magazine