ಸೋನಾಲಿ ಬೇಂದ್ರೆ ಜೊತೆ ಡಿನ್ನರ್ ಮಾಡಿದ ಅನುಪಮ್ ಖೇರ್..

ಬೆಂಗಳೂರು, ಬುಧವಾರ, 10 ಅಕ್ಟೋಬರ್ 2018 (15:12 IST)

ಅನುಪಮ್ ಖೇರ್ ಸದ್ಯ ನ್ಯೂಯಾರ್ಕ್‌ನಲ್ಲಿದ್ದು ವೈದ್ಯಕೀಯ ಪರೀಕ್ಷೆಗಾಗಿ ಈಗಾಗಲೇ ನ್ಯೂಯಾರ್ಕ್‌ಗೆ ತೆರಳಿದ್ದ ರಿಷಿ ಕಪೂರ್ ಅವರೊಂದಿಗೆ ಮ್ಯಾನ್ಹಾಟನ್‌ನಲ್ಲಿ ಓಡಾಡುತ್ತಿರುವ ವೀಡಿಯೊ ವೈರಲ್ ಆಗಿತ್ತು. ಇದೀಗ ವೈದ್ಯಕೀಯ ಚಿಕಿತ್ಸೆಗಾಗಿ ನ್ಯೂಯಾರ್ಕ್‌ನಲ್ಲಿರುವ ಇನ್ನೊಂದು ಬಾಲಿವುಡ್ ತಾರೆ ಸೋನಾಲಿ ಬೇಂದ್ರೆಯೊಂದಿಗಿರುವ ಫೋಟೋ ವೈರಲ್ ಆಗಿದೆ.
ಅನುಪಮ್ ಖೇರ್ ತಾವು ಸೋನಾಲಿ ಬೇಂದ್ರೆಯವರೊಂದಿಗಿರುವ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಸೋನಾಲಿ ಹಾಗೂ ಅನುಪಮ್ ಖೇರ್ ಇಬ್ಬರೂ ನಗುತ್ತಾ ಫೋಟೋಗೆ ಫೋಸ್ ನೀಡಿದ್ದು ಅವರೊಂದಿಗೆ ಸೋನಾಲಿ ಬೇಂದ್ರೆ ಪತಿ ಗೋಲ್ಡೀ ಬೇಲ್ ಸಹ ಕಂಡುಬಂದಿದ್ದಾರೆ. ಬಿಗ್ ಎಪಲ್‌ನಲ್ಲಿ ಇವರು ಡಿನ್ನರ್ ಮಾಡಿದ್ದು ಅಲ್ಲಿ ಫೋಟೋ ತೆಗೆದುಕೊಂಡಿದ್ದಾರೆ. "ಒತ್ತಡದ ಅಡಿಯಲ್ಲಿರುವ ಸೊಬಗು ನಿರ್ಭಯತೆಯ ಫಲಿತಾಂಶವಾಗಿದೆ. ಅತ್ಯಂತ ಸುಂದರವಾದ, ಸ್ಪೂರ್ತಿದಾಯಕವಾದ ಮತ್ತು ಧೈರ್ಯಶಾಲಿ @iamsonalibendre ಅವರೊಂದಿಗೆ ಸಹಾನುಭೂತಿಯ @GOLDIEBEHL ಮತ್ತು ಎಂದಿಗೂ ನಗುತ್ತಿರುವ ರೂಪಾ ಅವರ ಜೊತೆಗೆ ಊಟವನ್ನು ಮಾಡುವುದು ತುಂಬಾ ಅದ್ಭುತವಾಗಿದೆ ಮತ್ತು ರಿಫ್ರೆಶ್ ಆಗಿದೆ. #DeliciousFood #RichConversations #NYC." ಎನ್ನುವ ಹೇಳಿಕೆಯ ಅಡಿಯಲ್ಲಿ ಅನುಪಮ್ ಖೇರ್ ಸೋನಾಲಿ ಅವರೊಂದಿಗಿರುವ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
 
ಸೋನಾಲಿ ಬೇಂದ್ರೆ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದು ತಾವು ಗುಣಮುಖರಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅವರು ಆಗಾಗ ತಮ್ಮ ವೀಡಿಯೊ, ಫೋಟೋ ಮತ್ತು ಭಾವನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಆಸಿಡ್ ದಾಳಿ ಸಂತ್ರಸ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ದೀಪಿಕಾ ಪಡುಕೋಣೆ?

2005 ರಲ್ಲಿ ಆಸಿಡ್ ದಾಳಿಗೆ ತುತ್ತಾದ ಲಕ್ಷ್ಮೀ ಅಗರ್‌ವಾಲ್‌ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ...

news

ಕರಣ್ ಜೋಹರ್ ಮತ್ತು ರಣವೀರ್ ಸಿಂಗ್ ಅವರೊಂದಿಗೆ ವಿಲ್ ಸ್ಮಿತ್ ಮಸ್ತಿ...

ಪ್ರಸ್ತುತ ಹಾಲಿವುಡ್ ನಟ ವಿಲ್ ಸ್ಮಿತ್ ಇಂಡಿಯಾದಲ್ಲಿ ಸಮಯ ಕಳೆಯುತ್ತಿದ್ದಾರೆ. ಅವರು ಇತ್ತೀಚೆಗೆ ...

news

ಸನ್ನಿಲಿಯೋನಾ ವೀರಮಹಾದೇವಿ ಚಿತ್ರದಲ್ಲಿ ನಟಿಸಬಾರದಂತೆ. ಅದಕ್ಕೆ ಕಾರಣವೇನು ಎಂಬುದು ಇಲ್ಲಿದೆ ನೋಡಿ

ಬೆಂಗಳೂರು : ಬೆಂಗಳೂರಿಗೆ ಬಾಲಿವುಡ್ ನಟಿ, ಮಾಜಿ ನೀಲಿ ಚಿತ್ರ ತಾರೆ ಸನ್ನಿಲಿಯೋನಾ ಬರಬಾರದು ಎಂದು ಕನ್ನಡ ...

news

ಚಿತ್ರ ನಿರ್ಮಾಪಕಿ ವಿಂತಾ ನಂದಾ ಮೇಲೆ ಅತ್ಯಾಚಾರ ಎಸಗಿದ್ದಾರಂತೆ ನಟ ಅಲೋಕ್ ನಾಥ್

ಮುಂಬೈ : ಬಾಲಿವುಡ್ ನಲ್ಲಿ ಅತ್ಯಂತ ಸಭ್ಯತೆಯುಳ್ಳ ನಟ ಅಲೋಕ್ ನಾಥ್ ವಿರುದ್ಧ ಇದೀಗ ಅತ್ಯಾಚಾರ ಆರೋಪವೊಂದು ...

Widgets Magazine