ವಿರಾಟ್ ಕೊಹ್ಲಿ ಹೆಸರು ಕೂಗಿದಾಗ ನಾಚಿ ನೀರಾದ ಅನುಷ್ಕಾ ಶರ್ಮಾ

ಮುಂಬೈ, ಮಂಗಳವಾರ, 4 ಸೆಪ್ಟಂಬರ್ 2018 (08:44 IST)

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ನಟಿ ಅನುಷ್ಕಾ ಶರ್ಮಾ ತಮ್ಮ ಪತಿ ಮೇಲೆ ಎಷ್ಟೊಂದು ಪ್ರೀತಿಯಿಟ್ಟುಕೊಂಡಿದ್ದಾರೆಂದು ಎಲ್ಲರಿಗೂ ಗೊತ್ತಿರುವಂತದ್ದೇ.
 
ಅನುಷ್ಕಾ ಎಲ್ಲೇ ಹೋದರೂ ಕೊಹ್ಲಿ ಬಗ್ಗೆ ಆಕೆಯ ಬಳಿ ಪ್ರಶ್ನಿಸುತ್ತಲೇ ಇರುತ್ತಾರೆ. ಆದರೆ ಇತ್ತೀಚೆಗೆ ಅನುಷ್ಕಾ ತಮ್ಮ ಲೇಟೆಸ್ಟ್ ಸಿನಿಮಾ ಸೂಯ್ ದಾಗಾ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಮಾತ್ರ ಅಭಿಮಾನಿಗಳು ಕೊಹ್ಲಿ ಹೆಸರೆತ್ತಿ ಕೂಗಿದರೆ ನಾಚಿ ನೀರಾದರು.
 
ವೇದಿಕೆ ಮೇಲೆ ತಮ್ಮ ಚಿತ್ರತಂಡದೊಂದಿಗೆ ನಿಂತು ಚಿತ್ರದ ಬಗ್ಗೆ ಅನುಷ್ಕಾ ಮಾತನಾಡಲು ಹೊರಟಾಗ ಅಲ್ಲಿ ನೆರೆದಿದ್ದ ಸಾವಿರಾರು ಮಂದಿ ‘ಕೊಹ್ಲಿ ಕೊಹ್ಲಿ’ ಎಂದು ಕೂಗಿ ಅನುಷ್ಕಾಗೆ ಮಾತನಾಡಲೂ ಬಿಡದೇ ಘೋಷಣೆ ಕೂಗಿದರು. ಇದನ್ನು ನೋಡಿ ನಾಚಿ ನೀರಾದ ಅನುಷ್ಕಾ ‘ನಾನು ಅವರನ್ನು ತುಂಬಾ ಇಷ್ಟಪಡುತ್ತೇನೆ. ಆದರೆ ಈವತ್ತು ಸೂಯ್ ದಾಗಾ ಬಗ್ಗೆ ಮಾತ್ರ ಮಾತಾಡೋಣ’ ಎಂದು ಕೆನ್ನೆ ಕೆಂಪಗಾಗಿಸಿಕೊಂಡು ನಗುತ್ತಲೇ ಮನವಿ ಮಾಡಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಲ್ಮಾನ್ ಖಾನ್‌ಗೆ ತಂದೆಯಾಗಲಿರುವ ಜಾಕಿ ಶ್ರಾಫ್..

ಸಲ್ಮಾನ್ ಖಾನ್‌ ಮುಖ್ಯ ಪಾತ್ರದಲ್ಲಿರುವ ಭಾರತ್ ಚಿತ್ರ ತನ್ನ ತಂಡಕ್ಕೆ ಹೊಸ ಸದಸ್ಯರನ್ನು ಸೇರಿಸಿಕೊಡಿದೆ. ...

news

ಮಾಲ್ಡೀವ್ಸ್‌ನಲ್ಲಿ ಮಸ್ತಿ ಮಾಡುತ್ತಿರುವ ..!!

ಕರೀನಾ ಕಪೂರ್, ಸೈಫ್ ಅಲಿ ಖಾನ್, ತೈಮುರ್, ಸೋಹಾ ಅಲಿ ಖಾನ್, ಕುನಾಲ್ ಕೆಮ್ಮು ಮತ್ತು ಇನಾಯಾ ...

news

ಮಣಿಕರ್ಣಿಕಾ ಚಿತ್ರತಂಡದಿಂದ ಹೊರನಡೆದ ನಟ ಸೋನು ಸೂದ್

ಮುಂಬೈ : ನಟಿ ಕಂಗನಾ ರಾಣೌತ್ ನಟಿಸುತ್ತಿರುವ 'ಮಣಿಕರ್ಣಿಕಾ ದಿ ಕ್ವೀನ್ ಆಫ್ ಝಾನ್ಸಿ' ಚಿತ್ರದ ಶೂಟಿಂಗ್ ...

news

ಮಗಳ ಜೊತೆಗಿನ ಸನ್ನಿ ಲಿಯೋನ್ ಫೋಟೊಗೆ ಅಭಿಮಾನಿಗಳು ಫುಲ್ ಖುಷ್

ಮುಂಬೈ : ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಬಾಲಿವುಡ್ ಬೆಡಗಿ ಸನ್ನಿಲಿಯೋನಾ ಇದೀಗ ತಮ್ಮ ಮಗಳ ...

Widgets Magazine