ಅನುಷ್ಕಾ ಶರ್ಮಾ 'ಪರಿ' ಟೀಸರ್ ನಿಮ್ಮ ನಿದ್ದೆ ಕೆಡಿಸಬಹುದು !!

ನಾಗಶ್ರೀ ಭಟ್ 

ಬೆಂಗಳೂರು, ಬುಧವಾರ, 10 ಜನವರಿ 2018 (19:02 IST)

ಬಾಲಿವೂಡ್ ಬ್ಯೂಟಿ ಅನುಷ್ಕಾ ಶರ್ಮಾ ಇದೀಗ 'ಪರಿ' ಎಂಬ ಹಾರರ್ ಸಿನೇಮಾದ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು ಇದು ಅವರ ಮೊದಲ ಹಾರರ್ ಚಿತ್ರವಾಗಿದೆ. ಪಕ್ಕಾ ರೋಮ್ಯಾಂಟಿಕ್ ಚಿತ್ರಗಳಲ್ಲಿ ಅಭಿನಯಿಸಿದ್ದ ಈ ಚತುರೆ, ಇದೀಗ ಹಾರರ್ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದ್ದಾಳೆ.
ಈ ಚಿತ್ರದ ಮೊದಲ ಟಿಸರ್ 2017 ರ ಜುಲೈನಲ್ಲಿ ಬಿಡುಗಡೆಯಾಗಿದ್ದು, ಇದೀಗ ಚಿತ್ರೀಕರಣ ಪೂರ್ಣಗೊಳಿಸಿರುವ ಹಿನ್ನಲೆಯಲ್ಲಿ ಚಿತ್ರತಂಡ ಫೆಬ್ರುವರಿ 9 ರಂದು ಚಿತ್ರ ಬಿಡುಗಡೆ ಮಾಡಲು ಮುಂದಾಗಿದೆ.
 
ಈ ಚಿತ್ರವನ್ನು ಅಭಿಮಾನಿಗಳು ಕಾತುರದಿಂದ ನಿರೀಕ್ಷಿಸುತ್ತಿದ್ದು, ಮೇಕಪ್ ಇಲ್ಲದೇ ವಿಕಾರವಾದ ಮುಖದೊಂದಿಗೆ ಭಯ ಬಿಳಿಸುವಂತ ಹಾರರ್ ಲೂಕ್‌ನಲ್ಲಿ ಅನುಷ್ಕಾ ಕಾಣಿಸಿಕೊಂಡಿರುವುದು ಇನ್ನಷ್ಟು ಅಭಿಮಾನಿಗಳ ಕುತುಹಲಕ್ಕೆ ಕಾರಣವಾಗಿದೆ. ಈ ಮೊದಲು ಎನ್‌ಎಚ್ 10 ಮತ್ತು ಫಿಲ್ಲೌರಿ ಸಿನೇಮಾವನ್ನು ಅನುಷ್ಕಾ ನಿರ್ಮಾಣ ಮಾಡಿದ್ದು, "ಪರಿ" ಅವರ ನಿರ್ಮಾಣದ ಮೂರನೇ ಸಿನೇಮಾವಾಗಿದೆ. 
 
ಈ ಚಿತ್ರಕ್ಕೆ ಪ್ರೋಸಿತ್ ರಾಯ್ ಎಕ್ಷನ್ ಕಟ್ ಹೇಳುತ್ತಿದ್ದು, ಅನುಪಮ್ ರಾಯ್ ಸಂಗೀತ ಈ ಚಿತ್ರಕ್ಕಿದೆ. ಈಗಾಗಲೇ ಟೀಸರ್‌ ಮೂಲಕ ಬಾರಿ ಕೂತುಹಲ ಕೆರಳಿಸಿರುವ ಈ ಸಿನೇಮಾ ಪ್ರೇಕ್ಷಕರನ್ನು ಯಾವ ರೀತಿ ಸೆರೆಹಿಡಿಯಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಾಡಿಗೆ ಕಟ್ಟದ ಬಾಲಿವುಡ್ ತಾರೆಯನ್ನು ಹೊರ ಹಾಕಿದ ಫ್ರಾನ್ಸ್ ಕೋರ್ಟ್!

ಮನೆಯ ಬಾಡಿಗೆ ಕಟ್ಟಿಲ್ಲ ಎಂದು ಬಾಲಿವುಡ್ ನ ಖ್ಯಾತ ನಟಿ ಮಲ್ಲಿಕಾ ಶೆರಾವತ್ ಅವರನ್ನು ಫ್ರಾನ್ಸ್ ಕೋರ್ಟ್ ...

news

ಫಿಲ್ಮ್‌ಫೇರ್‌ನ ಜನವರಿಯ ಮುಖಪುಟದಲ್ಲಿ ಮಿಂಚುತ್ತಿರುವ ವಿರುಷ್ಕಾ...!!

ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಮತ್ತು ಭಾರತ ಕ್ರಿಕೆಟ್‌ನ ರನ್ ಮೆಷಿನ್ ಎಂದೇ ಕರೆಯಲ್ಪಡುವ ನಾಯಕ ವಿರಾಟ್ ...

news

'ಟೈಗರ್ ಘರ್ಜನೆಗೆ ಬಾಕ್ಸ್ ಆಫೀಸ್ ಧೂಳಿಪಟ...!!!

ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ 'ಟೈಗರ್ ಜಿಂದಾ ಹೈ' ಚಿತ್ರ ...

news

ಬಿಗ್ ಬಾಸ್ ಕನ್ನಡ: ರಿಯಾಜ್ ಪತ್ನಿಯ ಲೊಚ ಲೊಚ ಮುತ್ತು ಜೆಕೆ ಕಣ್ಣಲ್ಲಿ ನೀರು ತರಿಸಿತಂತೆ!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ತಮ್ಮ ತಂದೆ ಬಂದಾಗಲೂ ಅಷ್ಟೊಂದು ಅಳದ ಜಯರಾಮ್ ಕಾರ್ತಿಕ್ ರಿಯಾಜ್ ಪತ್ನಿ ...

Widgets Magazine
Widgets Magazine