ಪ್ರಭಾಸ್ ಜೊತೆಗಿನ ಮದುವೆ ಕುರಿತ ಪ್ರಶ್ನೆಗೆ ಅನುಷ್ಕಾ ಪ್ರತಿಕ್ರಿಯೆ ಏನು ಗೊತ್ತಾ?

ರಾಮಕೃಷ್ಣ ಪುರಾಣಿಕ 

ಬೆಂಗಳೂರು, ಸೋಮವಾರ, 12 ಫೆಬ್ರವರಿ 2018 (18:32 IST)

ದೀಪ್‌ವೀರ್ (ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್) ಅಭಿಮಾನಿಗಳು ಮಾತ್ರವಲ್ಲ, ಪ್ರನುಷ್ಕಾ (ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ) ಅಭಿಮಾನಿಗಳು ಸಹ ಇಬ್ಬರು ಪರಸ್ಪರ ಮದುವೆಯಾಗುವುದನ್ನು ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ.
ಎಸ್.ಎಸ್ ರಾಜಮೌಳಿಯ ಎರಡು ಅವತರಣಿಕೆಯ ಚಿತ್ರವಾದ ಬಾಹುಬಲಿ, ಪ್ರಭಾಸ್ ಮತ್ತು ಅನುಷ್ಕಾ ಅವರಿಬ್ಬರ ಜೋಡಿಯ ಮೊದಲ ಚಿತ್ರ ಅಲ್ಲ. ಅಮರೇಂದ್ರ ಬಾಹುಬಲಿ ಮತ್ತು ದೇವಸೇನಾ ಪಾತ್ರಗಳಾಗಿ ಅವರಿಬ್ಬರ ನಡುವಿನ ನಟನಾ ಬಾಂಧವ್ಯ ಮನೋಜ್ಞವಾಗಿತ್ತು. ಅವರಿಬ್ಬರ ಜೋಡಿಯು ಬೆರಗುಗೊಳಿಸುವಂತಿತ್ತು ಮತ್ತು ಆದರ್ಶ ಪತಿ-ಪತ್ನಿ ಜೋಡಿಯಾಗಿ ಕಾಣಿಸಿಕೊಂಡಿದ್ದರು, ಇದು ಅವರಿಗೆ ಮದುವೆಯ ಪ್ರಸ್ತಾಪದಂತೆ ಕಂಡುಬಂದಿತ್ತು.
 
ಚಲನಚಿತ್ರದಲ್ಲಿ, ಪ್ರೀತಿಯಲ್ಲಿ ಮಿಂದಿರುವ ಜೋಡಿಯಾಗಿ ಕಾಣಿಸಿಕೊಂಡಿದ್ದ ಪ್ರಭಾಸ್ ಮತ್ತು ಅನುಷ್ಕಾ ಈ ಮೊದಲು ಎಂದಿಗೂ ಪ್ರದರ್ಶಿಸದ ಪ್ರಣಯದ ದೃಶ್ಯಗಳಲ್ಲಿ ಅತ್ಯದ್ಭುತವಾಗಿ ನಟಿಸಿದ್ದರು. ಈ ಕಾರಣಕ್ಕಾಗಿಯೇ ಅಭಿಮಾನಿಗಳು ಅವರ ರೀಲ್-ಲೈಫ್‌ನ ಕೆಮೆಸ್ಟ್ರಿಯನ್ನು ರಿಯಾಲಿಟಿ ಆಗಿ ನಿಜ ಜೀವನದಲ್ಲಿ ನೋಡಲು ಹತಾಶರಾಗಿದ್ದಾರೆ.
 
ಪ್ರಭಾಸ್ ಮತ್ತು ಅನುಷ್ಕಾ ಇಬ್ಬರೂ ಸಂಬಂಧದಲ್ಲಿರುವ ವಿಷಯವನ್ನು ನಿರಾಕರಿಸಿದ್ದಾರೆ, ಈ ನಿರಾಕರಣೆ ಅವರ "ಸನ್ನಿಹಿತ ವಿವಾಹದ" ಕುರಿತು ವದಂತಿಗಳನ್ನು ಮುಚ್ಚುವುದಕ್ಕೆ ನಿರಾಕರಿಸಿದಂತೆ ತೋರುತ್ತಿದೆ.
 
ಪಿಂಕ್‌ವಿಲ್ಲಾ ವರದಿಯ ಪ್ರಕಾರ, ಪ್ರಭಾಸ್ ಜೊತೆಗಿನ ಅವರ ಮದುವೆಯ ಕುರಿತು ಅನುಷ್ಕಾಗೆ ಪ್ರತಿಕ್ರಿಯೆ ಕೇಳಿದಾಗ, “ಪ್ರಭಾಸ್ ಮತ್ತು ನಾನು ಮದುವೆಯಾಗುತ್ತಿಲ್ಲ. ಬಾಹುಬಲಿ ಮತ್ತು ದೇವಾಸೇನೆಯ ಪ್ರೀತಿಯನ್ನು ನಿಜ ಜೀವನದಲ್ಲಿ ನಿರೀಕ್ಷಿಸಬೇಡಿ. ಅದು ಕೇವಲ ಚಲನಚಿತ್ರಕ್ಕಾಗಿ ಮಾಡಿದ ನಟನೆ.” ಎಂದು ಹೇಳಿದ್ದಾರೆ.
 
ಕಾರ್ಯಕ್ರಮವೊಂದರಲ್ಲಿ ಕೇಳಿದ ಇದೇ ರೀತಿಯ ಪ್ರಶ್ನೆಗೆ ಪ್ರಭಾಸ್ ಅವರ ಪ್ರತಿಕ್ರಿಯೆ ಕೂಡ ವರದಿಯಾಗಿದೆ. “ನಾವು ಮೊದಲ ಬಾರಿಗೆ ಒಟ್ಟಾಗಿ ಕೆಲಸ ಮಾಡುವಾಗ, ನಮ್ಮ ಸುತ್ತ ನಡೆಯುವ ದಂತಿಗಳಿಗೆ ಯಾವುದೇ ಸೊಪ್ಪು ಹಾಕುವುದಿಲ್ಲ ಎಂದು ನಾವು ನಿರ್ಧರಿಸಿದ್ದೇವೆ. ನಾವು ಒಂಬತ್ತು ವರ್ಷಗಳಿಂದ ಚಲನಚಿತ್ರದ ಸ್ನೇಹಿತರಾಗಿದ್ದೇವೆ. ನಾವು ಒಳ್ಳೆಯ ಸ್ನೇಹಿತರು. ನಾವು ಕೆಲವು ವರ್ಷಗಳಿಂದ ಪರಸ್ಪರ ಅರಿತುಕೊಂಡಿದ್ದೇವೆ ಆದರೆ ನಾನು ಕೆಲವೊಮ್ಮೆ ಒಪ್ಪಿಕೊಳ್ಳುತ್ತೇನೆ ಅದು ಏನಂದರೆ ಇಂತಹ ವದಂತಿಗಳು ನಮ್ಮನ್ನು ಸುತ್ತುವುದನ್ನು ಪ್ರಾರಂಭಿಸಿದಾಗ ನಮ್ಮಿಬ್ಬರ ಸಡುವೆ ಅಂತಹ ಭಾವನೆ ಇರುವುದೇ ಎಂದು ನಾನೂ ಸಹ ಅಚ್ಚರಿ ಪಡುತ್ತೇನೆ.” ಎಂದು ಪ್ರಭಾಸ್ ಹೇಳಿದ್ದರು.
 
ಪ್ರನುಷ್ಕಾ ಅಭಿಮಾನಿಗಳು ಖಂಡಿತವಾಗಿಯೂ ಈ ರೀತಿಯ ಪ್ರತಿಕ್ರಿಯೆಯ ಕುರಿತು ಓದಲು ಇಷ್ಟಪಡುವುದಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ. ಆದರೆ ಅವರು ತಮ್ಮ ಅಭಿಮಾನಿಗಳಿಗೆ ಇಂದು ಅಥವಾ ನಾಳೆ ಆಶ್ಚರ್ಯಕರ ರೀತಿಯಲ್ಲಿ ಸುಖಾಂತ್ಯವನ್ನು ಸಾರಬಹುದು ಎಂದು ಯಾರಿಗೆ ತಾನೇ ತಿಳಿದಿದೆ!ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸನ್ನಿ ಲಿಯೋನ್ ತಮ್ಮದೇ ಕಾಸ್ಮೆಟಿಕ್ ಬ್ರ್ಯಾಂಡ್ ಸ್ಥಾಪಿಸುತ್ತಿದ್ದಾರಂತೆ..!?

ಸನ್ನಿ ಲಿಯೋನ್ ತಮ್ಮ ಸ್ಟಾರ್‌ಸ್ಟ್ರಕ್ ಎನ್ನುವ ಕಾಸ್ಮೆಟಿಕ್ ಬ್ರ್ಯಾಂಡ್ ಶಿಘ್ರದಲ್ಲೇ ಬರಲಿದೆ ಮತ್ತು ಅದು ...

news

ಲೇಟೆಸ್ಟ್ ಇಂಟರ್ನೆಟ್ ಸೆನ್ಸೇಷನ್: ಒಂದೇ ದಿನದಲ್ಲಿ ನ್ಯಾಷನಲ್ ಕ್ರಶ್ ಆದ ಪ್ರಿಯಾ ಪ್ರಕಾಶ್ ವಾರಿಯರ್

ಮಲೆಯಾಳಂ ಯುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಇಷ್ಟು ದಿನ ಯಾರಿಗೂ ಗೊತ್ತಿರಲಿಲ್ಲ. ಆದರೆ ಈ ಚಂದದ ಹುಡುಗಿ ...

news

ರಾಧಿಕಾ ಪಂಡಿತ್ ಮಡಿಲಿಗೆ ಬಂತು ಮುದ್ದು ಕಂದಮ್ಮ!

ಬೆಂಗಳೂರು: ಪತಿ ರಾಕಿಂಗ್ ಸ್ಟಾರ್ ಯಶ್ ರನ್ನು ಬಿಟ್ಟು ಅಮೆರಿಕಾ ವಿಮಾನವೇರಿ ಅಣ್ಣನ ಮನೆಗೆ ತೆರಳಿರುವ ...

news

ಮದುವೆ ಆನಿವರ್ಸರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಗೆ ಭರ್ಜರಿ ಗಿಫ್ಟ್ ಕೊಟ್ಟವರಾರು ಗೊತ್ತಾ?!

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ದಂಪತಿಗೆ ನಿನ್ನೆ ಸ್ಪೆಷಲ್ ದಿನ. ಇಬ್ಬರೂ ವೈವಾಹಿಕ ಜೀವನಕ್ಕೆ ...

Widgets Magazine
Widgets Magazine