ಸಲ್ಮಾನ್ ಖಾನ್ ವಿರುದ್ಧ ಕೇಸ್ ದಾಖಲಿಸಿದ ಜುಬೇರ್ ಖಾನ್

ಮುಂಬೈ, ಸೋಮವಾರ, 9 ಅಕ್ಟೋಬರ್ 2017 (17:41 IST)

ಮುಂಬೈ: ವಿವಾದಗಳಿಂದಲೇ ಸುದ್ದಿಯಾಗುತ್ತಿದೆ ಹಿಂದಿಯ ಬಿಗ್ ಬಾಸ್ ರಿಯಾಲಿಟಿ ಶೋ. ಅದೇ ರೀತಿ ಸೀಸನ್ 11 ಶುರುವಾದಾಗಿನಿಂದ ಸಾಕಷ್ಟು ಕುತೂಹಲಕಾರಿ ಟ್ವಿಸ್ಟ್ ಮತ್ತು ಟರ್ನ್ ಪಡೆದುಕೊಳ್ಳುತ್ತಿದೆ.


ಸದ್ಯ ಎವಿಕ್ಟ್ ಆಗಿದ್ದ ಸ್ಪರ್ಧಿ ಜುಬೇರ್ ಖಾನ್, ಬಿಗ್ ಬಾಸ್ ಸೀಸನ್ 11 ಹೋಸ್ಟ್ ಸಲ್ಮಾನ್ ಖಾನ್ ವಿರುದ್ಧ ಲೋನವಾಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಿಗ್ ಬಾಸ್ ನ ಮೊದಲ ವಾರದ `ವೀಕೆಂಡ್ ಕಾ ವಾರ್’ನಲ್ಲಿ ಸಲ್ಮಾನ್ ಖಾನ್ ತಮಗೆ ಬೆದರಿಕೆ ಹಾಕಿದ್ದಾರೆ. “I will make you my dog. Will see you after you leave the home” ಎಂದು ಹೇಳಿದ್ದಾರೆಂದು ಜುಬೇರ್ ಖಾನ್ ಆರೋಪಿಸಿದ್ದಾರೆ.

ಶೋನಲ್ಲಿ ಜುಬೇರ್, ಮಹಿಳಾ ಸ್ಪರ್ಧಿಗಳು ಮತ್ತು ಸಹ ಸ್ಪರ್ಧಿಗಳ ಬಗ್ಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ, ಕೆಟ್ಟ ಪದ ಬಳಸಿದ್ದರು. ಇದರಿಂದ ತಮ್ಮ ತಾಳ್ಮೆ ಕಳೆದುಕೊಂಡಿದ್ದ ಸಲ್ಮಾನ್, ಜುಬೇರ್ ಗೆ ತರಾಟೆ ತೆಗೆದುಕೊಂಡಿದ್ದರು.

ಜುಬೇರ್ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಂಬಂಧಿ ಎಂದು ಹೇಳಲಾಗಿದೆ. ಭಾನುವಾರ ಬೆಳಗ್ಗೆ ಅನಾರೋಗ್ಯ ಕಾರಣದಿಂದ ಕನ್ಫೆಷನ್ ರೂಮಿಗೆ ಕರೆಯಿಸಿ ನಂತರ ವೈದ್ಯರ ಬಳಿ ಕಳುಹಿಸಲಾಗಿತ್ತು. ಎಪಿಸೋಡ್ ಕೊನೆಯಲ್ಲಿ ಜುಬೇರ್ ಚೇತರಿಸಿಕೊಂಡಿದ್ದು, ಕಡಿಮೆ ವೋಟ್ ಗಳಿಸಿರುವ ಹಿನ್ನೆಲೆಯಲ್ಲಿ ಅವರನ್ನು ಎವಿಕ್ಟ್ ಮಾಡಲಾಗಿದೆ ಎಂದು ಸಲ್ಮಾನ್ ಖಾನ್ ಅನೌನ್ಸ್ ಮಾಡಿದ್ದರು.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಅ. 22ರಂದು ಚಿರು ಸರ್ಜಾ, ಮೇಘನಾ ರಾಜ್ ನಿಶ್ಚಿತಾರ್ಥ

ಬೆಂಗಳೂರು: ಚಂದನವನದ ತಾರಾ ಜೋಡಿ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ದಾಂಪತ್ಯ ಜೀವನಕ್ಕೆ ...

news

ಪ್ರಕಾಶ್ ರೈಗೆ ಸದಾನಂದ ಗೌಡರ ತಿರುಗೇಟು

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ಬಹುಭಾಷಾ ನಟ ಪ್ರಕಾಶ್ ರೈಗೆ ಕೇಂದ್ರ ...

news

ಶ್ರುತಿ ಹಾಸನ್ ಟ್ವೀಟ್ ನೋಡಿ ಸಿಟ್ಟಿಗೆದ್ದ ನಟ ಜಗ್ಗೇಶ್

ಬೆಂಗಳೂರು: ನವರಸನಾಯಕ ಜಗ್ಗೇಶ್ ಕನ್ನಡ ಭಾಷೆ ಮೇಲಿರುವ ಪ್ರೇಮ ಎಷ್ಟು ಎಂಬುದು ಅವರ ಟ್ವಿಟರ್ ನೋಡಿದರೇ ...

news

12 ವರ್ಷದ ಬಳಿಕ ಮತ್ತೆ ತೆರೆ ಮೇಲೆ ಅಣ್ಣ-ತಂಗಿ ಜೋಡಿ

ಬೆಂಗಳೂರು: 12 ವರ್ಷದ ಬಳಿಕ ಅಣ್ಣ-ತಂಗಿ ಜೋಡಿ ಖ್ಯಾತಿಯ ಶಿವರಾಜ್ ಕುಮಾರ್ ಮತ್ತು ನಟಿ ರಾಧಿಕಾ ...

Widgets Magazine
Widgets Magazine