ನಟ ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ; ನಾಳೆಗೆ ತೀರ್ಪು ಕಾದಿರಿಸಿದ ಜೋಧಪುರದ ಸೆಷನ್ಸ್ ಕೋರ್ಟ್

ಜೋಧಪುರ, ಶುಕ್ರವಾರ, 6 ಏಪ್ರಿಲ್ 2018 (11:40 IST)

ಜೋಧಪುರ : ಕೃಷ್ಣ ಮೃಗಗಳ ಭೇಟೆಯಾಡಿದ ಪ್ರಕರಣದಡಿ ದೋಷಿ ಎಂದು ಸಾಬೀತಾದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಈಗಾಗಲೇ ಜೈಲು ವಾಸ ಅನುಭವಿಸುತ್ತಿದ್ದು, ಅವರ ಜಾಮೀನು ಅರ್ಜಿ ವಿಚಾರಣೆ ಶುಕ್ರವಾರ(ಇಂದು) ನಡೆದಿದೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಧಪುರ್ ನ್ಯಾಯಾಲಯ ನಟ ಸಲ್ಮಾನ್ ಖಾನ್ ಅವರಿಗೆ 5ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡವನ್ನು ವಿಧಿಸಿತ್ತು. ಈ ಕಾರಣದಿಂದ ಸಲ್ಮಾನ್ ಖಾನ್ ಪರ ವಕೀಲರು ಜಾಮೀನು ಕೋರಿ  ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಶುಕ್ರವಾರ(ಇಂದು) ಬೆಳಿಗ್ಗೆ  ಜೋಧಪುರದ ಸೆಷನ್ಸ್ ಕೋರ್ಟ್ ನಲ್ಲಿ  ನಡೆದಿದೆ. ವಾದ ಪ್ರತಿವಾದಗಳ ಬಳಿಕ ಇದೀಗ ವಿಚಾರಣೆ ನಡೆಸಿದ ನ್ಯಾ. ರವೀಂದ್ರ ಕುಮಾರ್ ಜೋಷಿ ಅವರು ಇದಕ್ಕೆ ಸಂಬಂಧಪಟ್ಟ ತೀರ್ಪನ್ನು ಶನಿವಾರ(ನಾಳೆ) ಬೆಳಿಗ್ಗೆ 10.30ಕ್ಕೆ ಕಾದಿರಿಸಿದ್ದಾರೆ.  ಆದ ಕಾರಣ ಈವತ್ತು ಕೂಡ ನಟ ಸಲ್ಮಾನ್ ಖಾನ್ ಅವರು ಜೈಲಿನಲ್ಲೇ ಕಾಲಕಳೆಯಬೇಕಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಜೈಲು ವಾಸ ಅನುಭವಿಸುತ್ತಿರುವ ನಟ ಸಲ್ಮಾನ್ ಖಾನ್ !

ಜೋಧಪುರ : ಕೃಷ್ಣ ಮೃಗ ಭೇಟೆಯಾಡಿದ ಪ್ರಕರಣದಡಿ ಅಪರಾಧಿ ಎಂದು ಸಾಬೀತಾದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ...

news

ಸೀಜರ್’ ಚಿತ್ರದ ಡೈಲಾಗ್ ಬಗ್ಗೆ ಜನರು ವಿರೋಧ ವ್ಯಕ್ತಪಡಿಸಿದ್ದು ಯಾಕೆ…?

ಬೆಂಗಳೂರು : ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯಿಸಿರುವ ‘ಸೀಜರ್’ ಚಿತ್ರದಲ್ಲಿ ಬರುವ ಡೈಲಾಗ್ ಒಂದರ ಬಗ್ಗೆ ...

news

ಮೂರು ವರ್ಷಗಳ ನಂತರ ಒಂದಾಗಲಿರುವ ಮಾಜಿ ಲವರ್ಸ್ ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ

ಮುಂಬೈ : ಹಿಂದೊಮ್ಮೆ ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ನಟಿ ದೀಪಿಕಾ ಪಡುಕೋಣೆ ಅವರು ಒಬ್ಬರನೊಬ್ಬರು ...

news

ಬಿಗ್ ಬಾಸ್ ಸ್ಪರ್ಧಿ ದಿವಾಕರ್ ಗೆ ಒಲಿದು ಬಂದ ಬಂಫರ್ ಆಫರ್ ಏನು ಗೊತ್ತಾ …?

ಬೆಂಗಳೂರು : ಕನ್ನಡ ಬಿಗ್ ಬಾಸ್ ಸೀಸನ್ 5 ರ ರನ್ನರ್ ಅಪ್ ಆದ ದಿವಾಕರ್ ಅವರಿಗೆ ಇದೀಗ ಸ್ಯಾಂಡಲ್ ವುಡ್ ನ ...

Widgets Magazine
Widgets Magazine