ಅಮ್ಮ,ಅಣ್ಣನ ಮಾತಿಗೆ ಡೋಂಟ್ ಕೇರ್… ಒಟ್ಟಿಗೆ ಸಿನಿಮಾ ನೋಡಿದ ಲವ್ ಬರ್ಡ್ಸ್

ಮುಂಬೈ, ಮಂಗಳವಾರ, 24 ಅಕ್ಟೋಬರ್ 2017 (16:54 IST)

ಮುಂಬೈ: ಚಿತ್ರರಂಗಕ್ಕೆ ಬರುವ ಮುಂಚೆಯೇ ನಟಿ ಶ್ರೀದೇವಿ ಮಗಳು ಜಾಹ್ನವಿ ಹಾಗೂ ಶಾಹಿದ್ ಕಪೂರ್‌ ಸಹೋದರ ಇಶಾನ್‌ ಸುದ್ದಿಯಲ್ಲಿದ್ದಾರೆ.


ಜಾಹ್ನವಿ ಹಾಗೂ ಇಶಾನ್‌ ರನ್ನು ಬಾಲಿವುಡ್‌ಗೆ ಪರಿಚಯಿಸಲು ಸಿದ್ಧತೆಗಳು ನಡೆದಿವೆ. ಈ ನಡುವೆ ಈ ಲವ್ ಬರ್ಡ್ಸ್‍ ಒಟ್ಟಿಗೆ ಕಾಣಿಸಿಕೊಂಡು ಚರ್ಚೆಗೆ ವಿಷಯವಾಗುತ್ತಿದ್ದಾರೆ. ಕೆಲ ದಿನಗಳ ಹಿಂದೆ ಹಾಲಿವುಡ್‌ ಚಿತ್ರದ ವೀಕ್ಷಣೆಗೆ ತೆರಳಿದ್ದ ವೇಳೆ ಕ್ಯಾಮರಾ ಕಣ್ಣಿಗೆ ಸಿಕ್ಕಿದ್ದ ಇವರು, ಆಮಿರ್‌ ಖಾನ್‌ ಅಭಿನಯದ 'ಸೀಕ್ರೆಟ್‌ ಸೂಪರ್ ಸ್ಟಾರ್‌' ಚಿತ್ರ ವೀಕ್ಷಿಸಲು ತೆರಳಿ ಮತ್ತೆ ಸುದ್ದಿಯಾಗಿದ್ದಾರೆ.

ಈಗಾಗಲೇ ಈ ಜೋಡಿ ಬಗ್ಗೆ ಬಿಟೌನ್‌ನಲ್ಲಿ ಗುಸು ಗುಸು ಶುರುವಾಗಿದೆ. ಶಾಹಿದ್ ಕಪೂರ್ ತಮ್ಮನಿಗೆ ಬುದ್ಧಿಯೂ ಹೇಳಿದ್ದಾರಂತೆ. ಇತ್ತ ಜಾಹ್ನವಿಗೆ ತಾಯಿ ಶ್ರೀದೇವಿ ಸಹ ಬುದ್ಧಿ ಹೇಳಿದ್ದಾರೆ. ಆದರೆ ಇವರ್ಯಾರಿಗೂ ಕಿವಿಗೊಡದ ಈ ಜೋಡಿ ಮತ್ತೆ ಕೈ ಕೈ ಹಿಡಿದು ಓಡಾಡುತ್ತಿದೆ.

ಸೀಕ್ರೆಟ್‌ ಸೂಪರ್ ಸ್ಟಾರ್‌ ಚಿತ್ರದ ಮೇಹರ್‌ ವಿಜ್‌ ಕೂಡ ಇಶಾನ್‌ ಹಾಗೂ ಜಾಹ್ನನಿ ಜತೆ ಸೇರಿ ತಮ್ಮ ಚಿತ್ರ ವೀಕ್ಷಿಸಿದ್ದಾರೆ. ಬಳಿಕ ಈ ಮೂವರು ಸೇರಿ ತೆಗೆಸಿಕೊಂಡಿರುವ ಫೋಟೊ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ ಮೇಹರ್‌.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ತಾಜ್‌ಮಹಲ್ ಯಾವಾಗ ಕೆಡುವುತ್ತೀರಾ ಹೇಳಿ? : ಪ್ರಕಾಶ್ ರೈ ಪ್ರಶ್ನೆ

ಬೆಂಗಳೂರು: ತಾಜ್‌ಮಹಲ್ ಕೆಡುವವ ಬಗ್ಗೆ ದಿನಕ್ಕೊಂದು ಹೇಳಿಕೆ ಹೊರಬರುತ್ತಿರುವ ಹಿನ್ನೆಲೆಯಲ್ಲಿ ಇಂದು ...

news

ಅಶ್ಲೀಲ ಕಾಂಡೋಮ್ ಜಾಹೀರಾತು ಸಮರ್ಥಿಸಿಕೊಂಡ ಹಾಟ್ ಬಿಪಾಶಾ

ನವದೆಹಲಿ: ಬಾಲಿವುಡ್ ಸ್ಟಾರ್ ಬಿಪಾಶಾ ಬಸು ಆನ್‌ಲೈನ್ ಟ್ರಾಲ್‌ಗಳ ಟೀಕೆಗಳ ಸುರಿಮಳೆಗೆ ಕಾರಣವಾಗಿದ್ದಾರೆ. ...

news

ಹಿರಿಯ ಪೋಷಕ ನಟ ವೇಣುಗೋಪಾಲ್ ಇನ್ನಿಲ್ಲ

ಬೆಂಗಳೂರು: ಕನ್ನಡದ ಹಲವು ಚಿತ್ರಗಳಲ್ಲಿ ಪೋಷಕ ನಟ, ಖಳನಟನಾಗಿ ಅಭಿನಯಿಸಿದ್ದ ಹಿರಿಯ ಕಲಾವಿದ ವೇಣುಗೋಪಾಲ್ ...

news

ಮೊದಲ ಬಾರಿಗೆ ಬಣ್ಣ ಹಚ್ಚಿದ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚಾರಿತ್ರ್ಯ

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚಾರಿತ್ರ್ಯ ಮೊದಲ ಬಾರಿಗೆ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿರುವ ...

Widgets Magazine
Widgets Magazine