ಬಾಲಿವುಡ್ ಬಾದ್ಷ ಶಾರೂಖ್ ಖಾನ್ ದಕ್ಷಿಣದಲ್ಲೂ ಸಾಮ್ರಾಜ್ಯ ಸ್ಥಾಪಿಸುವ ಪ್ರಯತ್ನ?

ಸೋಮವಾರ, 21 ಏಪ್ರಿಲ್ 2014 (10:31 IST)

Widgets Magazine

ಬಾಲಿವುಡ್ ಬಾದ್ಷ ಅಗ್ಗಳಿಕೆ ಪಡೆದ ನಟ ಶಾರುಖ್ ಖಾನ್ ಆತ ತನ್ನ ಅಭಿನಯದ ಚಿತ್ರಗಳ ಮುಖಾಂತರ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಅದರಲ್ಲೂ ಕಲ್ ಹೋನ ಹೊ, ಓಂ ಶಾಂತಿ ಓಂ, ರಬ್ ನೆ ಬನಾದಿ ಜೋಡಿ, ಮೈ ನೆಮ್ ಇಸ್ ಖಾನ್ ನಂತಹ ಚಿತ್ರಗಳ ಮೂಲಕ ತಾವೆಷ್ಟು ಪ್ರತಿಭಾವಂತರು  ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಆ ಪಟ್ಟಿಗೆ ಕಳೆದ ವರ್ಷ ಬಿಡುಗಡೆ ಆದ ಚೆನ್ನೈ ಎಕ್ಸ್ಪ್ರೆಸ್ ಸಹ ಸೇರ್ಪಡೆ ಆಗುತ್ತದೆ. 
 
ಆ ಚಿತ್ರವೂ ಸಾಕಷ್ಟು  ಸುದ್ದಿ ಮಾಡಿತ್ತು ಗೆಲುವಿನ ಮೂಲಕ. ಉತ್ತರ ಭಾರತದ ರಾಜ್ಯಗಳಲ್ಲಿ ಆತನ ಬಗ್ಗೆ ಇರುವ ಕ್ರೇಜ್   ಭಾರತಕ್ಕೂ ಹರಡುವ ಪ್ರಯತ್ನಕ್ಕೆ ಜೊತೆ ಆದದ್ದು ಚೆನ್ನೈ ಎಕ್ಸ್ ಪ್ರೆಸ್ ಚಿತ್ರ. ಅದೇ ರೀತಿ ಈಗ ಅವರ ಹೊಸ ಚಿತ್ರ ಹ್ಯಾಪಿ ನ್ಯೂ ಇಯರ್ ನ್ನು ಸಹಿತ ದಕ್ಷಿಣ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನದಲ್ಲಿ   ನಿರತವಾಗಿದೆ. ಅಂದರೆ ಈ ಚಿತ್ರವು ಕೇವಲ ಹಿಂದಿಯಲ್ಲಿ ಮಾತ್ರವಲ್ಲ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿದೆಯಂತೆ  .
 
 
ಈ ಚಿತ್ರದಲ್ಲಿ ಶಾರೂಖ್ ಖಾನ್ ಅಲ್ಲದೆ ದೀಪಿಕ ಪಡುಕೋಣೆ, ಅಭಿಷೇಕ್ ಬಚ್ಚನ್, ಬೊಮ್ಮನ್ ಇರಾನಿ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಸಿಗುತ್ತಿದ್ದಾರೆ. ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವವರು ಫರಾ ಖಾನ್.ಈ ಚಿತ್ರಕ್ಕೆ ಯಶ್ರಾಜ್ ಫಿಲಿಮ್ಸ್ ನವರು ಡಿಸ್ಟ್ರಿ ಬ್ಯೂಟ್ ಮಾಡಲು ಮುಂದೆ ಬಂದಿದ್ದಾರೆ.ದೀಪಾವಳಿ ಸಮಯದಲ್ಲಿ ಈ ಚಿತ್ರ ಬಿಡುಗಡೆ ಆಗುತ್ತದೆ. Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಅಂದು ಅನುಷ್ಕಾ ಜೊತೆ ಏನಾಯ್ತು ಗೊತ್ತೆ?

ಅಂದು ಅನುಷ್ಕಾ ಶರ್ಮ ನಟನೆಯ ಹೊಸ ಚಿತ್ರ ಎನ್ವಿಚ್ 10 . ಇದರ ಚಿತ್ರೀಕರಣ ರಾಜಸ್ತಾನದಲ್ಲಿ ...

news

ರಾಜಮೌಳಿ ಬಾಹುಬಲಿಯಲ್ಲಿ ರಜನಿಕಾಂತ್ ನಟನೆ ?

ಟಾಲಿವುಡ್ ಸಿನಿಮಾ ಇಂಡಸ್ಟ್ರಿ ಯಲ್ಲಿ ರಾಜಮೌಳಿ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರು. ಅವರು ಯಾವ ಚಿತ್ರವನ್ನೇ ...

news

ತುಪ್ಪದ ಹುಡುಗಿ ರಾಗಿಣಿ ಪರಪಂಚದ ಐಟಂ ನಂಬರ್ ನಲ್ಲಿ ಕಾಣಿಸ್ತಾ ಇದ್ದಾರ?

ತುಪ್ಪ ಬೇಕ ತುಪ್ಪ ಎಂದು ಕನ್ನಡ ಸಿನಿ ರಸಿಕರ ಮೂಗಿಗೆ ತುಪ್ಪ ಸವರಿ ಮನಕ್ಕೆ ಖುಷಿ ಕೊಟ್ಟ ಚೆಲುವೆ ರಾಗಿಣಿ ...

news

ರಕ್ಷಿತ್ ಶೆಟ್ಟಿಗೆ ಇವರೆಂದರೆ ಪಂಚಪ್ರಾಣ...!

ಕನ್ನಡದ ಉದಯೋನ್ಮುಖ ಪ್ರತಿಭೆ ರಕ್ಷಿತ್ ಶೆಟ್ಟಿ. ನಟಿಸಿರುವ ಚಿತ್ರಗಳು ಬೆರಳೆಣಿಕೆ ಮಾತ್ರ ಆದರೆ ಹಿಟ್ಸ್ ...

Widgets Magazine