'ಟೈಗರ್ ಘರ್ಜನೆಗೆ ಬಾಕ್ಸ್ ಆಫೀಸ್ ಧೂಳಿಪಟ...!!!

ನಾಗಶ್ರೀ ಭಟ್ 

ಬೆಂಗಳೂರು, ಬುಧವಾರ, 10 ಜನವರಿ 2018 (18:31 IST)

ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ 'ಟೈಗರ್ ಜಿಂದಾ ಹೈ' ಚಿತ್ರ ಬಿಡುಗಡೆಯಾಗಿ 18 ದಿನಗಳೇ ಕಳೆದುಹೋದರೂ ಬಾಕ್ಸ್ ಆಫೀಸ್‌ನಲ್ಲಿ ಮಾತ್ರ ಇನ್ನೂ ಸದ್ದು ಮಾಡುತ್ತಲೇ ಇದೆ. ಮೂಲವೊಂದರ ಪ್ರಕಾರ ಚಿತ್ರದ ಇಲ್ಲಿಯವರೆಗಿನ ಕಲೆಕ್ಷನ್ 313 ಕೋಟಿ ರೂಪಾಯಿಗಳಾಗಿದ್ದು 18 ನೇ ದಿನದಂದೂ ಸಹ ಚಿತ್ರದ ಕಲೆಕ್ಷನ್ ಸುಮಾರು 4 ಕೋಟಿ ರೂಪಾಯಿಗಳು ಎನ್ನಲಾಗುತ್ತಿದೆ.
ಚಿತ್ರ ಬಿಡುಗಡೆಯಾಗಿ ಸುಮಾರು 2 ಕ್ಕೂ ಮೇಲಾದರೂ ಚಿತ್ರದ ಕಲೆಕ್ಷನ್‌ನಲ್ಲಿ ಯಾವುದೇ ಅಡೆ ತಡೆ ಕಂಡುಬಂದಿಲ್ಲ. ಇನ್ನೂ ಈ ಚಿತ್ರವು ಸನ್ಮಾನ್ ಖಾನ್ ಅಭಿನಯದ 'ಭಜರಂಗಿ ಭಾಯಿಜಾನ್' ಅನ್ನು ಮೀರಿಸುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ಏಕೆಂದರೆ 'ಭಜರಂಗಿ ಭಾಯಿಜಾನ್' ಚಿತ್ರದ ಒಟ್ಟು ಸಂಗ್ರಹ 320.34 ಕೋಟಿ ರೂಪಾಯಿಗಳಾಗಿದ್ದು, 'ಟೈಗರ್ ಜಿಂದಾ ಹೈ' ಕನಿಷ್ಟ 3 ವಾರದೊಳಗೆ ಇದನ್ನು ಮೀರಿಸಿಲಿದ್ದು, ಈ ಮೂಲಕ ಸಲ್ಮಾನ್ ಖಾನ್ ಅಭಿನಯದ ಅತಿ ಹೆಚ್ಚು ಹಣ ಗಳಿಸಿದ ಚಿತ್ರ ಇದಾಗುವ ಎಲ್ಲಾ ಸಾಧ್ಯತೆಗಳೂ ಇದೆ.
 
ಜನವರಿ 25 ರ ವರೆಗೆ ಯಾವುದೇ ದೊಡ್ಡ ಚಿತ್ರ ಬಿಡುಗಡೆಯಾಗುತ್ತಿಲ್ಲ, ಆದ ಕಾರಣ 'ಟೈಗರ್ ಜಿಂದಾ ಹೈ' ಚಿತ್ರಕ್ಕೆ ಯಾವುದೇ ಎದುರಾಳಿ ಇಲ್ಲದೇ ಇರುವುದು ಗಲ್ಲಾಪೆಟ್ಟಿಗೆ ತುಂಬಲು ಒಂದು ಕಾರಣವೆಂದೇ ಹೇಳಬಹುದು. ಆದರೆ ಈ ಚಿತ್ರ 'ಪಿಕೆ' ಮತ್ತು 'ದಂಗಲ್‌'ನ ದಾಖಲೆಯನ್ನು ಮುರಿಯುವ ಸಾಧ್ಯತೆಗಳಿವೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ. ಅಂದಹಾಗೆ 2012 ರಲ್ಲಿ 'ಏಕ್ ಥಾ ಟೈಗರ್‌'ನ ನಂತರ ಸಲ್ಮಾನ್ ಖಾನ್ ಮತ್ತು ಖತ್ರಿನಾ ಕೈಫ್ ಜೊತೆಯಲ್ಲಿ ಅಭಿನಯಿಸಿದ ಚಿತ್ರ ಇದಾಗಿದ್ದು ಚಿತ್ರ ರಸಿಕರನ್ನು ಈ ಸಿನೇಮಾ ಆಕರ್ಷಿಸಿರುವುದಂತು ಸುಳ್ಳಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಕನ್ನಡ: ರಿಯಾಜ್ ಪತ್ನಿಯ ಲೊಚ ಲೊಚ ಮುತ್ತು ಜೆಕೆ ಕಣ್ಣಲ್ಲಿ ನೀರು ತರಿಸಿತಂತೆ!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ತಮ್ಮ ತಂದೆ ಬಂದಾಗಲೂ ಅಷ್ಟೊಂದು ಅಳದ ಜಯರಾಮ್ ಕಾರ್ತಿಕ್ ರಿಯಾಜ್ ಪತ್ನಿ ...

news

ಬಿಗ್ ಬಾಸ್ ಕನ್ನಡ: ಜೆಕೆ ಅಪ್ಪನ ನೋಡಿ ಅನುಪಮಾ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರ ಸ್ಪರ್ಧಿಗಳಿಗೆ ಕುಟುಂಬದವರ ಜತೆ ಮಿಲನದ ಸಮಯ. ಮೊದಲು ಬಂದವರು ...

news

ರಿಯಲ್ ಸ್ಟಾರ್ ಉಪ್ಪಿ ಪುತ್ರಿ ಐಶ್ವರ್ಯಾ ಮಾಡಿದ ಕೆಲಸವೇನು ಗೊತ್ತೇ?!

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಎಲ್ಲಾ ವಿಷಯದಲ್ಲೂ ಡಿಫರೆಂಟ್. ಇದೀಗ ಅವರ ಪುತ್ರಿಯೂ ಅಪ್ಪನಿಗಿಂತ ...

news

ದೀಪಕ್ ರಾವ್ ಹಾಗು ಬಶೀರ್ ಅವರ ನಿವಾಸಕ್ಕೆ ಭೇಟಿ ನೀಡಿದ ಇಂದ್ರಜಿತ್ ಲಂಕೇಶ್

ಮಂಗಳೂರು : ದುಷ್ಕರ್ಮಿಗಳಿಂದ ಹತ್ಯೆಗಿಡಾದ ಮಂಗಳೂರಿನ ಕಾಟಿಪಳ್ಳದ ದೀಪಕ್ ರಾವ್ ಹಾಗು ಬಶೀರ್ ಅವರ ...

Widgets Magazine
Widgets Magazine