ರಾಖಿ ಸಾವಂತ್ ವಿರುದ್ಧ ಕೋರ್ಟ್ ನೋಟಿಸ್ - ಹನಿಪ್ರೀತ್ ತಾಯಿ...!!

ನಾಗಶ್ರೀ ಭಟ್ 

ಬೆಂಗಳೂರು, ಸೋಮವಾರ, 8 ಜನವರಿ 2018 (17:23 IST)

ಇತ್ತೀಚಿಗೆ ದೇಶದಲ್ಲೆಡೆ ಬಾರಿ ಚರ್ಚೆಗೆ ಗ್ರಾಸವಾಗಿದ್ದ ಡೇರಾ ಮುಖ್ಯಸ್ಥ ಗುರ್ಮಿತ್ ಸಿಂಗ್ ಮತ್ತು ಆತನ ದತ್ತು ಪುತ್ರಿ ಹನಿಪ್ರೀತ್ ಸಿಂಗ್‌ರನ್ನು ಪಂಚಕುಲ ಹಿಂಸಾಚಾರ ಪ್ರಕರಣದಲ್ಲಿ ಬಂಧಿಸಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ.

ಆದರೆ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಹನಿಪ್ರೀತ್ ಕುರಿತು ರಾಖಿ ಸಾವಂತ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು, ಅದರಿಂದ ಕೋಪಗೊಂಡಿರುವ ಹನಿಪ್ರೀತ್ ತಾಯಿ ತಮ್ಮ ಮಗಳ ಕುರಿತು ಅವಮಾನಕಾರಿಯಾಗಿ ಹೇಳಿಕೆಗಳನ್ನು ನೀಡಿರುವುದಕ್ಕೆ ರಾಖಿ ಸಾವಂತ್ ಅವರನ್ನು ಆರೋಪಿಸಿದ್ದಲ್ಲದೇ 5 ಕೋಟಿ ರೂಪಾಯಿಗಳ ಮಾನವಷ್ಟ ಮೊಕದ್ದಮೆಯನ್ನು ಹೂಡುವುದಾಗಿ ಕೋರ್ಟ್ ನೋಟೀಸ್ ಅನ್ನು ನೀಡಿದ್ದಾರಂತೆ.
 
ಗುರುಮೀತ್ ಸಿಂಗ್ ಜೀವನಾಧಾರಿತ ಬಾಲಿವುಡ್ ಚಿತ್ರವೊಂದರಲ್ಲಿ ಹನಿಪ್ರೀತ್ ಪಾತ್ರದಲ್ಲಿ ರಾಖಿ ಸಾವಂತ್ ಅಭಿನಯಿಸುತ್ತಿದ್ದು, ಗುರುಮೀತ್ ಮತ್ತು ಹನಿಪ್ರೀತ್ ಬಂಧನಕ್ಕೊಳಗಾದ ಸಮಯದಲ್ಲಿ ನನಗೆ ಗುರುಮೀತ್ ಬಗ್ಗೆ ಚೆನ್ನಾಗಿ ತಿಳಿದಿತ್ತು ಮತ್ತು ಅಲ್ಲದೇ ಮೊದಲು ನಾನು ಅವರನ್ನು ಭೇಟಿಯಾಗಲು ಹೋದಂತ ಸಂದರ್ಭದಲ್ಲಿ ಅವರಿಗೆ ನಾನು ಆತ್ಮೀಯಳಾಗಬಹುದು ಎನ್ನುವ ಕಾರಣಕ್ಕೆ ಹನಿಪ್ರೀತ್ ನನಗೆ ಅವರನ್ನು ಭೇಟಿಮಾಡಲು ಅವಕಾಶ ಕೊಡುತ್ತಿರಲಿಲ್ಲ ಎಂದು ವೀಡಿಯೊ ಒಂದರಲ್ಲಿ ರಾಖಿ ಹೇಳಿಕೊಂಡಿದ್ದರು.
 
ಇದರಿಂದ ಸಿಟ್ಟಿಗೆದ್ದಿರುವ ಹನಿಪ್ರೀತ್ ತಾಯಿ ರಾಖಿ ಸಾವಂತ್ ತಮ್ಮ ಮಗಳ ಕುರಿತು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಲ್ಲದೇ, ಇದೇ ಕಾರಣಕ್ಕೆ ರಾಖಿಗೆ ಕೋರ್ಟ್ ನೋಟೀಸ್ ನೀಡಿದ್ದು ಅದರಲ್ಲಿ ಒಂದು ತಿಂಗಳಲ್ಲಿ ಒಳಗಾಗಿ ಕ್ಷಮೆಯಾಚಿಸಬೇಕು ಇಲ್ಲವೇ 5 ಕೋಟಿ ರೂಪಾಯಿಗಳ ದಂಡ ಸಲ್ಲಿಸಬೇಕೆಂದು ತಿಳಿಸಲಾಗಿದೆ ಎಂದು ಮಾಧ್ಯಮದವರ ಎದುರು ಹನಿಪ್ರೀತ್ ತಾಯಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
 
ಒಟ್ಟಿನಲ್ಲಿ ಒಂದಲ್ಲಾ ಒಂದು ಗಾಸಿಪ್‌ಗಳಿಂದಲೇ ಚರ್ಚೆಯಲ್ಲಿರುವ ರಾಖಿ ಸಾವಂತಗೆ ಇದು ಸ್ವಲ್ಪಮಟ್ಟಿಗೆ ಶಾಕ್ ನೀಡಿರಿರುವುದಂತು ಸುಳ್ಳಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಹು ನಿರೀಕ್ಷಿತ ಚಿತ್ರ 'ಪದ್ಮಾವತ್' ಜ. 25ಕ್ಕೆ ತೆರೆಯಮೇಲೆ ಬರಲಿದೆ..!!

ಹಲವಾರು ವಿವಾದಗಳಿಗೆ ತುತ್ತಾಗಿದ್ದ ಸಂಜಯ್ ಲೀಲಾ ಬನ್ಸಾಲಿಯವರ ನಿರ್ಮಾಣದ 'ಪದ್ಮಾವತ್' ಜನವರಿ 25, 2018 ...

news

ಭಾವಿ ಸೊಸೆಗೆ ರಣವೀರ್ ಪೋಷಕರು ನೀಡಿದ ಉಡುಗೊರೆ ಏನು ಗೊತ್ತಾ...?

ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಜನವರಿ 5ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಕೊಂಡಿದ್ದು, ...

news

ಜಗ್ಗೇಶ್ ಗೆ ರಾಕಿಂಗ್ ಸ್ಟಾರ್ ಯಶ್-ರಾಧಿಕಾ ತೊಟ್ಟಿಲು ತೂಗುವುದನ್ನು ನೋಡುವಾಸೆಯಂತೆ!

ಬೆಂಗಳೂರು: ಇಂದು ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ. ಸಿನಿ ಲೋಕದ ಗಣ್ಯರೂ ಯಶ್ ಗೆ ಹುಟ್ಟು ಹಬ್ಬದ ಶುಭಾಷಯ ...

news

ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇಗೆ ಬಿಡುಗಡೆಯಾಯ್ತು ಜಬರ್ ದಸ್ತು ಕೆಜಿಎಫ್ ಟೀಸರ್ (ವಿಡಿಯೋ)

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಗೆ ಇಂದು ಜನ್ಮದಿನದ ಸಂಭ್ರಮ. ಪತ್ನಿ ರಾಧಿಕಾ ಪಂಡಿತ್ ಸೇರಿದಂತೆ ...

Widgets Magazine
Widgets Magazine