ಯುವತಿಯೊಬ್ಬಳ ಮೇಲೆ ಹಲ್ಲೆ ನಡೆಸಿದ್ರಂತೆ ದೀಪಿಕಾ ಮತ್ತು ರಣವೀರ್

ಮುಂಬೈ, ಶುಕ್ರವಾರ, 3 ಆಗಸ್ಟ್ 2018 (14:23 IST)

ಮುಂಬೈ : ಬಾಲಿವುಡ್ ಕ್ಯೂಟ್ ಕಪಲ್ ದೀಪಿಕಾ ಮತ್ತು ರಣವೀರ್ ಯುವತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂದು ಹೇಳಲಾದ ಈ ಜೋಡಿ ಇದೀಗ ಅಮೆರಿಕದ ಡಿಸ್ನಿಲ್ಯಾಂಡ್ ನಲ್ಲಿ ಕೈ ಕೈ ಹಿಡಿದುಕೊಂಡು ಜಾಲಿಮೂಡ್ ನಲ್ಲಿದ್ದಾರೆ. ಈ ವೇಳೆ ಜೈನಾಬ್ ಖಾನ್ ಹೆಸರಿನ ಯುವತಿಯೊಬ್ಬಳು ಅವರಿಬ್ಬರು ಜೊತೆಯಾಗಿ ಸುತ್ತುತ್ತಿರುವ  ವಿಡಿಯೋವನ್ನು ರೆಕಾರ್ಡ್ ಮಾಡುತ್ತಾ ಅವರಿಬ್ಬರತ್ತ ತೆರಳಿದ್ದಾರೆ. ಈ ವೇಳೇ ದೀಪಿಕಾರನ್ನ ಆಕೆ ಮಾತಿಗೆಳೆದಿದ್ದಾರೆ.


ಆನಂತರದಲ್ಲಿ ಏನು ನಡೀತು ಅನ್ನೋದು ಆ ವಿಡಿಯೋದಲ್ಲಿ ರೆಕಾರ್ಡ್ ಆಗಿಲ್ಲ.
ಆದರೆ ಆ ಯುವತಿ ಈ ಬಗ್ಗೆ ಟ್ವೀಟ್ ಮಾಡಿ ದೀಪಿಕಾ ಮತ್ತು ರಣವೀರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಅಂತ ಸಾಮಾಜಿಕ ಜಾಲತಾಣದಲ್ಲಿ ವಾಗ್ದಾಳಿ ನಡೆಸಿದ್ದಾಳೆ. ಇಬ್ಬರ ತಲೆಯಲ್ಲೂ ಸ್ಟಾರ್ ಡಮ್ ಮನೆ ಮಾಡಿಬಿಟ್ಟಿದೆ. ಅಭಿಮಾನಿಗಳ ಪ್ರೀತಿಗೆ ಇವರಿಬ್ಬರು ಯೋಗ್ಯರಲ್ಲ ಎಂದು ಕಾಮೆಂಟ್ ಮಾಡಿದ್ದಾಳೆ.


ಇದಕ್ಕೆ ಪ್ರತಿಕ್ರಿಯಿಸಿದ  ದೀಪಿಕಾ ಮತ್ತು ರಣವೀರ್ ಅಭಿಮಾನಿಗಳು ಆ ಯುವತಿಯನ್ನು ತರಾಟೆಗೆ ತೆಗೆದುಕೊಂಡು, ‘ಸ್ಟಾರ್ ಆದ ಮಾತ್ರಕ್ಕೆ ಅವರಿಗೆ ಸ್ವಾತಂತ್ರ ಇಲ್ಲವೆಂದು ಅರ್ಥವಲ್ಲ. ಅವರ ಖಾಸಗಿ ಜೀವನವನ್ನು ಗೌರವಿಸದೆ ನಡೆದುಕೊಂಡಿದ್ದು ನಿನ್ನ ತಪ್ಪು’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕಿಕಿ ಚಾಲೆಂಜ್ ನಿಂದ ಈ ನಟಿ ಅನುಭವಿಸಿದ ಕಷ್ಟವೇನು ಗೊತ್ತಾ...?

ಮುಂಬೈ : ಇತ್ತೀಚೆಗೆ ಕಿಕಿ ಚಾಲೆಂಜ್ ಕಿರಿಕಿರಿ ಹೆಚ್ಚಾಗುತ್ತಿದ್ದು, ಈ ಚಾಲೆಂಜ್ ಅಪಾಯಕಾರಿ ಎಂದು ಪೊಲೀಸರು ...

news

ಪುನೀತ್, ಸುದೀಪ್, ರಕ್ಷಿತ್ ಶೆಟ್ಟಿ ಮೂವರನ್ನು ಸೇರಿಸಿ ಸಿನಿಮಾ ಮಾಡ್ತಾರಂತೆ ನಿರ್ಮಾಪಕ ಕೆ . ಮಂಜು

ಬೆಂಗಳೂರು : ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಪವರ್ ಸ್ಟಾರ್ ಪುನೀತ್, ಕಿಚ್ಚ ಸುದೀಪ್ ಹಾಗೂ ರಕ್ಷಿತ್ ...

news

ತಮಿಳಿನ ಬಿಗ್ ಬಾಸ್ 2 ಶೋ ನಿರೂಪಣೆಯಲ್ಲಿ ಎಡವಟ್ಟು ಹೇಳಿಕೆ; ಕಮಲ್ ಹಾಸನ್ ವಿರುದ್ಧ ದೂರು ದಾಖಲು

ಬೆಂಗಳೂರು : ತಮಿಳು ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್ 2, ವಿಜಯ್ ಟಿವಿ ಹಾಗೂ ನಟ, ಬಿಗ್ ಬಾಸ್ 2 ಶೋನ ...

news

ಅನುಷಾ ದಾಂಡೇಕರ್ ಹಾಗೂ ಸಿದ್ಧಾರ್ಥ್ ಮಲ್ಯ ಜೊತೆಗಿರುವ ಫೋಟೋ ನೋಡಿ ಅಭಿಮಾನಿಗಳು ಬೇಸರಗೊಂಡಿದ್ಯಾಕೆ?

ಮುಂಬೈ : ಇತ್ತೀಚೆಗೆ ನಟಿ ಅನುಷಾ ದಾಂಡೇಕರ್ ಇನ್ಸ್ಟ್ರಾಗ್ರಾಂ ನಲ್ಲಿ ತಮ್ಮ ಗೆಳೆಯನ ಜೊತೆಗಿರುವ ...

Widgets Magazine