ಸಂಭಾವನೆ ವಿಷಯದಲ್ಲಿ ಸ್ಟಾರ್ ನಟರನ್ನೂ ಹಿಂದಿಕ್ಕಿದ ಆ ನಟಿ ಯಾರು…?

ಮುಂಬೈ, ಗುರುವಾರ, 31 ಆಗಸ್ಟ್ 2017 (13:30 IST)

ಮುಂಬೈ: ಇತ್ತೀಚಿಗಷ್ಟೇ ಫೋರ್ಬ್ಸ್ ತನ್ನ ನಿಯತಕಾಲಿಕೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ-ನಟಿಯರ ಪಟ್ಟಿ ಬಿಡುಗಡೆ ಮಾಡಿತ್ತು. ಕಳೆದ ವರ್ಷ ಟಾಪ್ 10ರಲ್ಲಿ 10ನೇ ಸ್ಥಾನ ಪಡೆದಿದ್ದ ದೀಪಿಕಾ ಪಡುಕೋಣೆ ಈ ಬಾರಿ ಯಾವ ಸ್ಥಾನವೂ ಗಳಿಸಿರಲಿಲ್ಲ. ಆದರೆ ಈಗ ಬಿಟೌನ್ ನ ಈ ನ್ಯೂಸ್ ಕೇಳಿದರೆ ಖಂಡಿತ ಶಾಕ್ ಆಗ್ತೀರಾ…ಬಾಲಿವುಡ್ ನಲ್ಲಿ ಹೆಚ್ಚು ಸಂಭಾವನೆ ಪಡೆಯುವವರ ಪಟ್ಟಿಯಲ್ಲಿ ದೀಪಿಕಾ ಅಗ್ರ ಸ್ಥಾನದಲ್ಲಿದ್ದಾರೆ. ಸ್ಟಾರ್ ನಟರಿಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿ ಎಂಬ ಹೆಗ್ಗಳಿಕೆಗೆ ದೀಪಿಕಾ ಪಾತ್ರರಾಗಿದ್ದಾರೆ. ಈ ಮೂಲಕ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿರುವ ಮೊದಲ ನಟಿಯಾಗಿದ್ದಾರೆ.

ದೀಪಿಕಾ ಸದ್ಯ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿರುವ ಹಿಸ್ಟಾರಿಕಲ್ ಮೂವಿ `ಪದ್ಮಾವತಿ’ಯಲ್ಲಿ ನಟಿಸುತ್ತಿದ್ದು, ಈ ಚಿತ್ರದ ನಟನೆಗಾಗಿ 13 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಇನ್ನು ಈ ಚಿತ್ರದ ನಟರಾದ ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ತಲಾ 10 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

`ಮುಗುಳು ನಗೆ’ಗೆ ಪುರುಷರ ಪ್ರವೇಶ ನಿರ್ಬಂಧ...! ಯಾಕೆ…? ಈ ಸ್ಟೋರಿ ಓದಿ…

ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ, ಗಣೇಶ್ ಅಭಿನಯದ `ಮುಗುಳು ನಗೆ’ ನಾಳೆ ರಾಜ್ಯಾದ್ಯಂತ ರಿಲೀಸ್ ...

news

‘ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೂರ್ಖರಲ್ಲ ಎಂದುಕೊಂಡಿದ್ದೇನೆ’

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಂಗ್ರೆಸ್ ಸೇರುತ್ತಾರೆಂಬ ವದಂತಿಗಳು ಬಂದ ಬೆನ್ನಲ್ಲೇ ಬಿಜೆಪಿ ...

news

ರಾಜಕೀಯ ಸೇರ್ತಾರಾ ಚಾಲೆಂಜಿಂಗ್ ಸ್ಟಾರ್ ದರ್ಶನ್? ತೆರೆಮರೆ ನಡೆದಿದೆ ಭಾರೀ ಪ್ಲ್ಯಾನ್!

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ತಮ್ಮದೇ ರಾಜಕೀಯ ಪಕ್ಷ ಸ್ಥಾಪಿಸುತ್ತೇನೆಂದು ಹೊರಟ ಬೆನ್ನಲ್ಲೇ ...

news

ತಮ್ಮನಿಗಾದ ಅಪಘಾತಕ್ಕೆ ಜಗ್ಗೇಶ್ ಗೆ ಕೋಪ

ಬೆಂಗಳೂರು: ನವರಸನಾಯಕ ಜಗ್ಗೇಶ್ ಗೆ ತುಂಬಾ ಕೋಪ ಬಂದಿದೆ. ಅದಕ್ಕೆ ಕಾರಣ ತಮ್ಮ ಕೋಮಲ್ ಶೂಟಿಂಗ್ ಸಮಯದಲ್ಲಿ ...

Widgets Magazine
Widgets Magazine