Widgets Magazine
Widgets Magazine

ಟೆನ್ನೀಸ್ ತಾರೆ ಜೊಕೋವಿಕ್ - ದೀಪಿಕಾ ಡೇಟಿಂಗ್: ಜೊಕೊ ಮಾಜಿ ಗೆಳತಿ ಹೇಳಿದ್ದೇನು..?

ಮುಂಬೈ, ಮಂಗಳವಾರ, 11 ಜುಲೈ 2017 (11:15 IST)

Widgets Magazine

ಮುಂಬೈ:ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಹಾಗೂ ಟೆನಿಸ್‌ನ ಮಾಜಿ ವಿಶ್ವ ನಂ.1 ತಾರೆ ನೊವಾಕ್‌ ಜೊಕೋವಿಕ್‌ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಈಗ ಎಲ್ಲೆಡೆ ಹರಿದಾಡತೊಡಗಿದೆ. 2014ರಲ್ಲೇ ಈ ಬಗ್ಗೆ ಗುಸು ಗುಸು ಇದ್ದರೂ ಇದೀಗ ಜೊಕೊ ಮಾಜಿ ಗೆಳತಿ ನತಾಶಾ ಬೆಕ್ಲಾವಕ್‌ ನೇರಾನೇರ ಆರೋಪ ಮಾಡುವುದರೊಂದಿಗೆ ವಿಶ್ವಮಟ್ಟದಲ್ಲಿ ಸದ್ದು ಮಾಡಿದೆ.
 
ಸರ್ಬಿಯಾದ ಜೊಕೋವಿಕ್‌ ಮಾಜಿ ಗೆಳತಿ, ಪಾಪ್‌ ಗಾಯಕಿ ನತಾಶಾ ಬೆಕ್ಲಾವಕ್‌ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತನ್ನ ಮತ್ತು ಜೊಕೊ ನಡುವಿನ ಸಂಬಂಧ ಮುರಿದ ನಂತರ, ಜೊಕೊ ದೀಪಿಕಾ ಜತೆಗೆ ಡೇಟಿಂಗ್‌ ನಡೆಸುತ್ತಿದ್ದರು. ಇದೇ ವೇಳೆ ಜೊಕೊ ತಮ್ಮ ಹಾಲಿ ಪತ್ನಿ ಜೆಲೆನಾ ರಿಸ್ಟಿಕ್ ಜತೆಯೂ ಸಂಬಂಧವಿಟ್ಟುಕೊಂಡಿದ್ದರು ಎಂದು ನತಾಶಾ ಆರೋಪಿಸಿದ್ದಾರೆ.
 
ಜೊಕೋವಿಕ್‌-ದೀಪಿಕಾ ಮೊದಲು ಪರಿಚಿತರಾ ದದ್ದು 2014ರಲ್ಲಿ. ಮಹೇಶ್‌ ಭೂಪತಿ ಮಾಲಕತ್ವದ ಅಂತಾರಾಷ್ಟ್ರೀಯ ಪ್ರೀಮಿಯರ್‌ ಟೆನಿಸ್‌ ಲೀಗ್‌ನಲ್ಲಿ ಆಡಲು ಜೊಕೊ ಭಾರತಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಜೊಕೊ ಮತ್ತು ದೀಪಿಕಾ ಗೆಳೆತನ ಸಂಪಾದಿಸಿದ್ದರು. ಇವರಿಬ್ಬರು ಗಾಸಿಪ್‌ಗೆ ಆಹಾರವಾಗಿದ್ದು 2016 ರಲ್ಲಿ. ದೀಪಿಕಾ ಹಾಲಿವುಡ್‌ ಚಿತ್ರ "ಎಕ್ಸ್‌ಎಕ್ಸ್‌ಎಕ್ಸ್‌' ಚಿತ್ರದ ಶೂಟಿಂಗ್‌ಗಾಗಿ ಅಮೆರಿಕದಲ್ಲಿದ್ದರು. ಇದೇ ಸಂದರ್ಭದಲ್ಲಿ ಜೊಕೊ ಮತ್ತು ದೀಪಿಕಾ ರೆಸ್ಟೋರೆಂಟ್‌ವೊಂದರಲ್ಲಿ ಡಿನ್ನರ್‌ ಪಾರ್ಟಿ ಮಾಡಿರುವುದು, ಇಬ್ಬರು ಜತೆಯಾಗಿ ಓಡಾಡುತ್ತಿರುವ ಫೋಟೋಗಳು ಸಾಮಾಜಿಕಜಾಲತಾಣದಲ್ಲಿ ಹರಿದಾಡುತ್ತಿದ್ದವು. ಇದು ಈಗ ಜೋಕೋವಿಕ್ ಮತ್ತು ದೀಪಿಕಾ ನಡುವಿನ ಡೇಟಿಂಗ್ ವಿಷಯಕ್ಕೆ ಇನ್ನಷ್ಟು ಇಂಬುಕೊಟ್ಟಿದೆ.
 Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಪ್ರಿಯಾಂಕ ಚೋಪ್ರಾ ತುಂಡುಡುಗೆ ಪ್ರಧಾನಿ ಮೋದಿಗೆ ನೋ ಪ್ರಾಬ್ಲಂ ಅಂತೆ!

ಮುಂಬೈ: ಇತ್ತೀಚೆಗೆ ಬರ್ಲಿನ್ ನಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾಗುವಾಗ ಬಾಲಿವುಡ್ ಬೆಡಗಿ ಪ್ರಿಯಾಂಕ ...

news

ನಟ ದಿಲೀಪ್ ಆರೋಪಿ ಪಲ್ಸರ್ ಸುನಿಗೆ ಸುಪಾರಿ ಕೊಡುವ ವಿಡಿಯೋ ಲೀಕ್?

ಕೊಚ್ಚಿ: ಬಹುಭಾಷಾ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ದಿಲೀಪ್ ಮೂರು ವರ್ಷದ ಮೊದಲೇ ಆರೋಪಿ ...

news

ನಟ ದಿಲೀಪ್ ಬಂಧನಕ್ಕೆ ಕಾರಣವಾಯ್ತಾ ಸೆಲ್ಫೀ..? ಮಲೆಯಾಳಿ ನಟಿಗೆ ಲೈಂಗಿಕ ಕಿರುಕುಳದ ಸ್ಫೋಟಕ ಮಾಹಿತಿ ಬಹಿರಂಗ

ಮಲೆಯಾಳಂ ನಟಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದಲ್ಲಿ ನಟ ದಿಲೀಪ್ ಜೈಲು ಸೇರಿದ್ದಾಗಿದೆ. ಇದೀಗ, ಈಜೊ ...

news

ನಟ ದಿಲೀಪ್ ಬಗ್ಗೆ ತನಿಖಾ ತಂಡದ ಮೂಲಗಳನ್ನು ಆಧರಿಸಿ ಮಲಯಾಳಂ ಮಾಧ್ಯಮ ಹೊರಹಾಕಿದ ಭಯಾನಕ ಸತ್ಯಗಳು!

ಕೊಚ್ಚಿ: ಮಲಯಾಳಂ ಸೂಪರ್ ಸ್ಟಾರ್ ದಿಲೀಪ್ ಬಹುಭಾಷಾ ತಾರೆಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ...

Widgets Magazine Widgets Magazine Widgets Magazine