ಕನ್ನಡವೆಂದರೆ ಬಾಲಿವುಡ್ ಬೆಡಗಿ ದೀಪಿಕಾಗೆ ಇಷ್ಟೊಂದು ಅಸಡ್ಡೆಯೇ?

ಮುಂಬೈ, ಶುಕ್ರವಾರ, 27 ಅಕ್ಟೋಬರ್ 2017 (10:38 IST)

ಮುಂಬೈ: ಕನ್ನಡ ನಾಡಿನವಳಾಗಿದ್ದುಕೊಂಡು, ಇಲ್ಲಿಯೇ ಮೊದಲು ಬಣ್ಣ ಹಚ್ಚಿ ನಂತರ ಖ್ಯಾತಿ ಪಡೆದ ದೀಪಿಕಾ ಪಡುಕೋಣೆಗೆ ಕನ್ನಡವೆಂದರೆ ಅಷ್ಟೊಂದು ಅಸಡ್ಡೆಯೇ?


 
ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಆಕೆ ನೀಡಿರುವ ಹೇಳಿಕೆ ನೋಡಿದರೆ ಇದು ಸತ್ಯವೆನಿಸುತ್ತದೆ. ಈ ಸಂದರ್ಶನದಲ್ಲಿ ‘ಪದ್ಮಾವತಿ’ ಬೆಡಗಿ ತಮ್ಮ ಮೊದಲು ಚಿತ್ರ ‘ಓಂ ಶಾಂತಿ ಓಂ’ ಎಂದು ಹೇಳಿಕೊಂಡಿದ್ದಾಳೆ. ಅದಕ್ಕಿಂತ ಮೊದಲು ತಾನು ಸಿನಿಮಾ ಸೆಟ್ ನೋಡಿಯೇ ಇರಲಿಲ್ಲ ಎಂದು ಲೊಟ್ಟೆ ಬಿಟ್ಟಿದ್ದಾಳೆ.
 
ಅಸಲಿಗೆ, ದೀಪಿಕಾ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು, ಕನ್ನಡದಲ್ಲಿ. ಉಪೇಂದ್ರ ಜತೆ ‘ಐಶ್ವರ್ಯಾ’ ಎಂಬ ಚಿತ್ರದಲ್ಲಿ ಅಭಿನಯಿಸಿದ್ದ ದೀಪಿಕಾ ನಂತರವಷ್ಟೇ ಓಂ ಶಾಂತಿ  ಓಂ ನಲ್ಲಿ ನಟಿಸಿದ್ದಳು. ಆದರೆ ಕನ್ನಡ ಸಿನಿಮಾವನ್ನು ಬೇಕೆಂದೇ ಬದಿಗೆ ತಳ್ಳಿದ ದೀಪಿಕಾ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ.
 
ದೀಪಿಕಾ ಸುಳ್ಳುಗಾತಿ ಎಂದು ಕೆಲವರು ಜರೆದರೆ, ಇನ್ನು ಕೆಲವರು ಗೂಗಲ್ ನಲ್ಲಿ ವಿಕಿಪೀಡಿಯಾ ಎಂಬ ಸೈಟ್ ಇದೆ. ಅದು ಸುಳ್ಳು ಹೇಳಲ್ಲ ಎಂದು ಕೆಲವರು ಬೆವರಿಳಿಸಿದ್ದಾರೆ. ಜನಪ್ರಿಯತೆಗಾಗಿ ಇವರಿಗೆಲ್ಲಾ ಬಾಲಿವುಡ್ ಬೇಕು ಎಂದು ಟೀಕಿಸಿದ್ದಾರೆ. ವಿಶೇಷವೆಂದರೆ ಹೀಗೆ ಟೀಕಿಸಿದವರಲ್ಲಿ, ಕನ್ನಡಿಗರು ಮಾತ್ರವಲ್ಲ, ಬೇರೆ ಭಾಷೆಯವರೂ ಇದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕ್ರೈಂ ಬ್ರಾಂಚ್ ಮಹಿಳಾ ಪೊಲೀಸ್ ಅಧಿಕಾರಿಗಳಿಂದ ಪ್ರಭಾಸ್ ಪೂಜೆ!

ಹೈದರಾಬಾದ್: ಬಾಹುಬಲಿ ಚಿತ್ರವಾದ ಮೇಲೆ ಜಗತ್ತಿನ ಯಾವ ಮೂಲೆಯಿಂದೆಲ್ಲಾ ಪ್ರಭಾಸ್ ಆರಾಧಿಸುವವರು ಇದ್ದಾರೆ ...

news

ಬಿಗ್ ಬಾಸ್ ಮನೆಯಲ್ಲಿ ಅಸ್ವಸ್ಥಗೊಂಡ ಅನುಪಮಾ

ಬೆಂಗಳೂರು: ಬಿಗ್ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ನಿನ್ನೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಈ ...

news

ಬಿಗ್ ಬಾಸ್ ಮನೆಯಲ್ಲಿ ಮುಂದುವರೆದ ಕಲಹ, ಕಣ್ಣೀರು…

ಬೆಂಗಳೂರು: ಎರಡನೇ ವಾರ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಗದ್ದಲಕ್ಕೆ ಕಾರಣವಾಗಿದೆ. ಈ ವಾರ ಬಿಗ್ ಬಾಸ್ ...

news

ಟಿಪ್ಪು ವಿವಾದದ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದು ಬಿಟ್ಟರು ಜಗ್ಗೇಶ್

ಬೆಂಗಳೂರು: ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ಇದೀಗ ಕಾಂಗ್ರೆಸ್-ಬಿಜೆಪಿ ನಡುವೆ ಕಿತ್ತಾಟಕ್ಕೆ ...

Widgets Magazine