ಬೆಂಗಳೂರಿಗೆ ಬಂದಾಗಲೆಲ್ಲ ದೀಪಿಕಾ ಈ ಸ್ಟೋರ್`ಗೆ ಬಂದು ಇಡ್ಲಿ-ವಡೆ ಸವಿಯುತ್ತಾರೆ..!

ಬೆಂಗಳೂರು, ಗುರುವಾರ, 14 ಸೆಪ್ಟಂಬರ್ 2017 (17:21 IST)

ದೀಪಿಕಾ ಪಡುಕೋಣೆ.. ಕರ್ನಾಟಕ ಮೂಲದ ನಟಿಯಾದರೂ ಬೆಳೆದಿದ್ದೆಲ್ಲ ಬಾಲಿವುಡ್ ಹಾಲಿವುಡ್`ನಲ್ಲೇ. ಶೂಟಿಂಗ್`ಗಾಗಿ ದೇಶ ವಿದೇಶ ಸುತ್ತುವ ದೀಪಿಕಾ ಪಡುಕೋಣೆ ಸಮಯ ಸಿಕ್ಕಾಗಲೆಲ್ಲ ಬೆಂಗಳೂರಿಗೆ ಬರುತ್ತಾರೆ. ಇತ್ತೀಚೆಗೆ ಸಹ ಒಮ್ಮೆ ದೀಪಿಕಾ ಭೆಟಿ ನೀಡಿದ್ದು ಬೆಂಗಳೂರಿನ ಸ್ಟೋರ್`ವೊಂದಕ್ಕೆ ಬಂದು ಹೋಗಿದ್ದಾರೆ.


ದೀಪಿಕಾ ಪಡುಕೋಣೆ ಮುಂಬೈನಲ್ಲಿ ಮನೆ ಹೊಂದಿದ್ದರೂ ಕುಟುಂಬ ಸದಸ್ಯರೆಲ್ಲ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಹೀಗಾಗಿ, ಹಬ್ಬ ಹರಿದಿನಕ್ಕೆ ಬೆಂಗಳೂರಿಗೆ ಬಂದು ಕುಟುಂಬ ಸದಸ್ಯರ ಜೊತೆ ಬೆರೆಯುತ್ತಾರಂತೆ. ಕಳೆದ ದೀಪಾವಳಿ ಹಬ್ಬದಂದೂ ದೀಪಿಕಾ ಬೆಂಗಳೂರಿಗೆ ಬಂದು ಕುಟುಂಬದ ಜೊತೆ ಬೆರೆತಿದ್ದಾರೆ. ದೀಪಿಕಾ ಸಂಬಂಧಿಕರು ಮಲ್ಲೇಶ್ವರಂನಲ್ಲಿ ನೆಲೆಸಿದ್ದಾರೆ ಎನ್ನಲಾಗಿದ್ದು, ಇಲ್ಲಿಗೆ ಬಂದಾಗಲೆಲ್ಲ ತಮ್ಮ ಇಷ್ಟದ ಸ್ಥಳಗಳಿಗೆ ಬೇಟಿ ಕೊಡುತ್ತಾರೆ.

ಕಳೆದ ಮಂಗಳವಾರ ಇಲ್ಲಿನ ಪ್ರಸಿದ್ಧ ವೀಣಾ ಸ್ಟೋರ್`ನಲ್ಲಿ ದೀಪಿಕಾ ಇಡ್ಲಿ ವಡೆ ತಿಂದು ಹೋಗಿದ್ದಾರಂತೆ.ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕೆಲ ಫೋಟೋಗಳು ದೀಪಿಕಾ ಬೆಂಗಳೂರಿಗೆ ಬಂದು ಹೋಗಿರುವ ಬಗ್ಗೆ ತಿಳಿಸುತ್ತಿವೆ. ವೀಣಾ ಸ್ಟೋರ್ ಮಾಲೀಕ ಪ್ರದೀಪ್ ದೀಪಿಕಾ ಸೆಲ್ಫಿ ತೆಗೆದು ಪೋಸ್ಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಕಿನಿ ಯಾಕೆ ಎಲ್ಲ ಬಿಚ್ಚಿ ಬಿಡು ಎಂದವನಿಗೆ ಟ್ವಿಟ್ಟರ್`ನಲ್ಲಿ ಖಡಕ್ ಉತ್ತರ ಕೊಟ್ಟ ತಾಪ್ಸಿ

ಬಲಿಷ್ಠ ಪಾತ್ರಗಳ ಮೂಲಕ ಗಮನ ಸೆಳೆಯುವ ನಟಿ ತಾಪ್ಸಿ ಪನ್ನು ಬಿಕಿನಿ ಫೋಟೋ ಬಗ್ಗೆ ಟ್ವಿಟ್ಟರ್`ನಲ್ಲಿ ...

news

ಬಿಗ್ ಬಾಸ್ 5 ಪ್ರೋಮೋ ನೋಡಿ ಜಗ್ಗೇಶ್ ಫುಲ್ ಖುಷ್

ಬೆಂಗಳೂರು: ಕಿಚ್ಚ ಸುದೀಪ್ ಈಗಾಗಲೇ ಬಿಗ್ ಬಾಸ್ 5 ನೇ ಆವೃತ್ತಿಯ ಪ್ರೋಮೋ ಶೂಟ್ ಮಾಡಿಕೊಂಡಿದ್ದಾರೆ. ...

news

ಕಿಚ್ಚ ಸುದೀಪ್, ಜೋಗಿ ಪ್ರೇಮ್ ನಡುವೆ ನಡೆದ ಚಾಯ್ ಸಂಭಾಷಣೆ!

ಬೆಂಗಳೂರು: ಕಿಚ್ಚ ಸುದೀಪ್ ಮತ್ತು ಜೋಗಿ ಪ್ರೇಮ್ ಈಗ ವಿಲನ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ. ಇಬ್ಬರೂ ...

news

ಜಗ್ಗೇಶ್ ಇನ್ನು ಮೂರು ದಿನ ಮನೆಯಿಂದ ಹೊರಬರಲ್ಲ!

ಬೆಂಗಳೂರು: ನವರಸನಾಯಕ ಜಗ್ಗೇಶ್ ಇನ್ನು ಮೂರು ದಿನ ಮನೆಯಿಂದ ಹೊರ ಬರಲ್ವಂತೆ! ಹಾಗಂತ ಅವರೇ ಟ್ವಿಟರ್ ನಲ್ಲಿ ...

Widgets Magazine
Widgets Magazine