ರಣವೀರ್ ಗೆ ಕೈಕೊಟ್ಟಳಾ ದೀಪಿಕಾ ಪಡುಕೋಣೆ?

ಮುಂಬೈ, ಶನಿವಾರ, 4 ನವೆಂಬರ್ 2017 (08:55 IST)

ಮುಂಬೈ: ಬಾಲಿವುಡ್ ನ ಮೋಸ್ಟ್ ಸೆನ್ಸೇಷನಲ್ ಜೋಡಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಸಂಬಂಧಕ್ಕೆ ತಿಲಾಂಜಲಿ ಇಟ್ಟು ಬಿಟ್ಟರೇ? ಕೆಲವು ಮೂಲಗಳ ಪ್ರಕಾರ ಹೌದು.


 
ದೀಪಿಕಾ ಮತ್ತು ರಣವೀರ್ ಪರಸ್ಪರ ತಮ್ಮ ಪ್ರೀತಿ ವಿಷಯವನ್ನು ಸಾರ್ವಜನಿಕವಾಗಿ ಹೇಳಿಕೊಳ್ಳದೇ ಇದ್ದರೂ ಕಳೆದ ಐದು ವರ್ಷಗಳಿಂದ ಇಬ್ಬರೂ ಡೇಟಿಂಗ್ ನಡೆಸುತ್ತಿದ್ದುದು ಗುಟ್ಟಾಗಿ ಉಳಿದಿಲ್ಲ. ಇದೀಗ ‘ಪದ್ಮಾವತಿ’ ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಇವರ ನಡುವಿನ ಬಿರುಕು ಸ್ಪಷ್ಟವಾಗಿದೆ ಎನ್ನಲಾಗಿದೆ.
 
‘ಪದ್ಮಾವತಿ’ ಸಿನಿಮಾದಲ್ಲಿ ದೀಪಿಕಾ ಜತೆಗೆ ಶಾಹಿದ್ ಕಪೂರ್ ಮತ್ತು ರಣವೀರ್ ಸಿಂಗ್ ಅಭಿನಯಿಸಿದ್ದಾರೆ. ಇದರ 3ಡಿ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಬರುವುದಿಲ್ಲವೆಂದು ಮೂವರೂ ಸ್ಟಾರ್ ಗಳು ನಿರ್ಧರಿಸಿದ್ದರೂ ಕೊನೆಗಳಿಗೆಯಲ್ಲಿ ಕಾರ್ಯಕ್ರಮಕ್ಕೆ ಬಂದು ದೀಪಿಕಾ ಅಚ್ಚರಿ ನೀಡಿದ್ದರು.
 
ಅದೂ ತನ್ನ ಸಹ ನಟರಿಗೆ ಅದರಲ್ಲೂ ಸ್ನೇಹಿತ ರಣವೀರ್ ಗೆ ತಿಳಿಸದೇ ದೀಪಿಕಾ ಬಂದಿರುವುದು ರಣವೀರ್ ಗೆ ಶಾಕ್ ನೀಡಿದೆಯಂತೆ. ಅದೇ ಕಾರಣಕ್ಕೆ ಇಬ್ಬರ ಮುನಿಸು ಹೆಚ್ಚಾಗಿದ್ದು, ರಣವೀರ್ ನನ್ನು ಅವಾಯ್ಡ್ ಮಾಡಲೆಂದೇ ದೀಪಿಕಾ ಹೀಗೆ ಮಾಡಿದ್ದಾಳೆಂಬ ಗುಸು ಗುಸು ಕೇಳಿ ಬಂದಿದೆ. ನಿಜ ಇವರಿಬ್ಬರಿಗೇ ಗೊತ್ತು. ಆದರೂ ಐದು ವರ್ಷಗಳ ಪ್ರೀತಿಗೆ ತೆರೆ ಬಿದ್ದಿರುವುದು ನಿಜ ಎಂದು ಬಾಲಿವುಡ್ ಗಾಸಿಪ್ ಪ್ರಿಯರು ಮಾತಾಡಿಕೊಳ್ಳುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

100 ಎಕರೆಯ ಬಾಹುಬಲಿ ಸೆಟ್ ಗತಿ ಏನಾಯ್ತು ಗೊತ್ತಾ?!

ಹೈದರಾಬಾದ್: ಬಾಹುಬಲಿ ಹೆಸರು ಕೇಳಿದರೇನೇ ಭಾರತೀಯ ಸಿನಿಮಾ ಅಭಿಮಾನಿಗಳಲ್ಲಿ ಮಿಂಚಿನ ಸಂಚಾರವಾದಂತಾಗುತ್ತದೆ. ...

news

ವಿಶ್ವದ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾಗೆ ಸ್ಥಾನ

ನ್ಯೂಯಾರ್ಕ್: ಫೋರ್ಬ್ಸ್ ಮ್ಯಾಗ್‌ಜಿನ್ 2017ರ ವಿಶ್ವದ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಬಾಲಿವುಡ್, ...

news

ಬಹುಭಾಷಾ ನಟ ಕಮಲ್‌ಹಾಸನ್‌ ವಿರುದ್ಧ ಕೇಸ್ ದಾಖಲು

ವಾರಣಾಸಿ: ಹಿಂದು ಭಯೋತ್ಪಾದನೆಯಿದೆ ಎಂದು ಹೇಳಿಕೆ ನೀಡಿದ್ದ ಬಹುಭಾಷಾ ನಟ ಕಮಲ್‌ಹಾಸನ್‌ ವಿರುದ್ಧ ಕೇಸ್ ...

news

ಸಿಹಿಕಹಿ ಚಂದ್ರು ವಿರುದ್ಧ ಪ್ರತಿಭಟನೆ: ಈ ವಾರ ಮನೆಯಿಂದ ಚಂದ್ರು ಔಟ್…?

ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿ ಸಿಹಿಕಹಿ ಚಂದ್ರು ವಿರುದ್ಧ ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ ಪ್ರತಿಭಟನೆ ...

Widgets Magazine