ನಟಿ ಪ್ರಿಯಾಂಕ ಚೋಪ್ರಾ ಬಾಯ್ ಫ್ರೆಂಡ್ ಯಾರು ಗೊತ್ತಾ...?

ಮುಂಬೈ, ಸೋಮವಾರ, 12 ಫೆಬ್ರವರಿ 2018 (07:49 IST)

ಮುಂಬೈ: ನಟಿ ಪ್ರಿಯಾಂಕ ಚೋಪ್ರಾ ಮದುವೆ, ಮಕ್ಕಳ ಕನಸಿನ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದರು. ಈಗ ಮತ್ತೊಂದು ಹೇಳಿಕೆಯ ಮೂಲಕ ಸುದ್ದಿಯಲ್ಲಿದ್ದಾರೆ. ಅದೇನೆಂದರೆ  ‘ನಾನು ಕಳೆದ ಒಂದು ವರ್ಷದಿಂದ ಒಂಟಿಯಾಗಿದ್ದೇನೆ. ಅದಕ್ಕಿಂತ ಮೊದಲು ಕಮಿಟೆಡ್‌ ರಿಲೇಷನ್‌ಶಿಪ್‌ ಹೊಂದಿದ್ದೆ’ ಎಂದಿದ್ದಾರೆ ಈ ನಟಿ.  ಪ್ರಿಯಾಂಕ ಬಾಯ್‌ಫ್ರೆಂಡ್‌ ಯಾರಾಗಿದ್ದಿರಬಹುದು ಎಂದು ಅಭಿಮಾನಿಗಳು ತಲೆಕೆಡಿಸಿಕೊಳ್ಳುವಂತಾಗಿದೆ ಈಗ.


ಬಾಲಿವುಡ್‌ನ ಈ ಚೆಲುವೆ ನಟಿ ತನ್ನ ನೇರ ಮಾತುಗಳಿಂದಲೇ ಹೆಚ್ಚು ಪ್ರಸಿದ್ಧರಾಗಿದ್ದರು. ಮದುವೆ, ಮಕ್ಕಳ ಬಗ್ಗೆ ಸಾಕಷ್ಟು ಕನಸಿದೆ ಎಂಬುದನ್ನು ದಿಟ್ಟವಾಗಿಯೇ ಹೇಳುವ ಈ ನಟಿ ಇತ್ತೀಚೆಗೆ ಮ್ಯಾಗಜೀನ್‌ನ ಸಂದರ್ಶನವೊಂದರಲ್ಲಿ ತಾನಿನ್ನೂ ಒಂಟಿ. ಆದರೆ ಮದುವೆ ಬಗ್ಗೆ ತುಂಬ ಯೋಜನೆಗಳಿವೆ’ ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ.


ಇದೇ ವೇಳೆ ಮದುವೆ ಹಾಗೂ ಮಕ್ಕಳ ಬಗ್ಗೆ ಮುಕ್ತವಾಗಿ ಮಾತನಾಡಿರುವ ಅವರು, ನನಗೆ 12 ವರ್ಷದಲ್ಲಿರುವಾಗಲೇ ಮದುವೆಯಾಗುವ ಕನಸಿತ್ತು. ಶಾಲೆಯಲ್ಲಿ ಫ್ಯಾನ್ಸಿ ಡ್ರೆಸ್‌ ಸ್ಪರ್ಧೆಯಲ್ಲಿ ನಾನು ಯಾವಾಗಲೂ ಮದುಮಗಳ ಅಥವಾ ಬೆಂಡೆಕಾಯಿ ವೇಷ ಹಾಕುತ್ತಿದ್ದೆ. ತಲೆ ಮೇಲೆ ದುಪ್ಪಟ್ಟಾ ಹಾಕಿಕೊಂಡು ಮದುಮಗಳ ಹಾಗೇ ಕಾಣಿಸಿಕೊಳ್ಳಲು ನನಗೆ ಯಾವಾಗಲೂ ಇಷ್ಟ’ ಎಂದು ಹೇಳಿದ್ದಾರೆ.


ನನ್ನನ್ನು ಮದುವೆಯಾಗುವವನು ಯಾವಾಗಲೂ ನನ್ನ ಕೆಲಸವನ್ನು ಮೆಚ್ಚಬೇಕು. ನನಗೆ ಗೌರವ ಕೊಡಬೇಕು. ನಾನು ಉದ್ಯೋಗಸ್ಥ ಮಹಿಳೆಯಾಗಿಯೇ ಇರಲು ಇಷ್ಟಪಡುತ್ತೇನೆ ಎಂದು ಹೇಳುತ್ತಾರೆ.  ಆದರೆ ಪ್ರಿಯಾಂಕಾ ಚೋಪ್ರಾ ಆ ಬಾಯ್ ಫ್ರೆಂಡ್ ಯಾರು ಎಂಬ ಗುಟ್ಟನ್ನು ಮಾತ್ರ  ರಟ್ಟು ಮಾಡಿಲ್ಲ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಚುನಾವಣೆಗೆ ಸಂಬಂಧಿಸಿದಂತೆ ಜನರಿಗೆ ಕಿಚ್ಚ ಸುದೀಪ್ ನೀಡಿರುವ ಸಂದೇಶವೇನು ಗೊತ್ತಾ...?

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ...

news

ಪತಿ ಕೊಹ್ಲಿ ಅವರ ಜೊತೆ ಶೋವೊಂದಕ್ಕೆ ಬರಲು ಅನುಷ್ಕಾ ನಿರಾಕರಿಸಿದ್ಯಾಕೆ...?

ಮುಂಬೈ : ಅನುಷ್ಕಾ ಅವರು ತಮ್ಮ ಪತಿ ಕೊಹ್ಲಿ ಅವರ ಜೊತೆ ಕಾಫಿ ವಿತ್ ಕರಣ್ ಶೋಗೆ ಬರಲು

news

ಪುನೀತ್ ರಾಜ್‍ಕುಮಾರ್ ಗೆ ಅಭಿಮಾನಿಯೊಬ್ಬರು ನೀಡಿರುವ ವಿಶೇಷವಾದ ಉಡುಗೊರೆ ಏನು ಗೊತ್ತಾ...?

ಬೆಂಗಳೂರು : ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಅಭಿಮಾನಿಯೊಬ್ಬರು ನೀಡಿರುವ ...

news

ನಟಿ ದೀಪಿಕಾ ಪಡುಕೋಣೆ ಅವರಿಗೆ ಬೆದರಿಕೆ ಕರೆ ಹಿನ್ನೆಲೆ; ರಣವೀರ್ ಸಿಂಗ್ ಗಪ್ ಚುಪ್ ಆಗಿದ್ದಿದ್ದು ಯಾಕೆ ಗೊತ್ತಾ...?

ಮುಂಬೈ : ದೀಪಿಕಾ ಅಭಿನಯದ ಪದ್ಮಾವತ್ ಸಿನಿಮಾ ವಿರೋಧಗಳ ನಡುವೆಯೂ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ...

Widgets Magazine