Widgets Magazine

'ವೆಲ್‌ಕಮ್ ಟು ನ್ಯೂಯಾರ್ಕ್‌' ಚಿತ್ರದಲ್ಲಿ ಯಾರೆಲ್ಲಾ ಕಾಣಿಸಿಕೊಳ್ಳಲಿದ್ದಾರೆ ಗೊತ್ತಾ..?!

ಬೆಂಗಳೂರು| ನಾಗಶ್ರೀ ಭಟ್| Last Modified ಶುಕ್ರವಾರ, 23 ಫೆಬ್ರವರಿ 2018 (19:47 IST)
ಚಕ್ರಿ ಟೊಲೆಟಿ ನಿರ್ದೇಶನ ಮತ್ತು ದಿಲ್ಜಿತ್ ದೋಸಾಂಜ್ ಅವರೊಂದಿಗೆ ಸೋನಾಕ್ಷಿ ಸಿನ್ಹಾ ನಟಿಸುತ್ತಿರುವ ಚಿತ್ರ 'ವೆಲ್‌ಕಮ್ ಟು ನ್ಯೂಯಾರ್ಕ್'. ಈ ಚಿತ್ರದಲ್ಲಿ ಚಿತ್ರ ನಿರ್ಮಾಪಕ ಕರಣ್ ಜೋಹರ್ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಇದಲ್ಲದೇ ಮೂಲವೊಂದರ ಪ್ರಕಾರ 'ದಬಾಂಗ್' ನಂತರ ಮೊದಲ ಬಾರಿಗೆ ಸೋನಾಕ್ಷಿ ಸಿನ್ಹಾ ಮತ್ತು ಸಲ್ಮಾನ್ ಖಾನ್ 'ನೈನಾ ಫಿಸಲ್ ಗಯೆ' ಎನ್ನುವ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
 
ಚಿತ್ರದ ಟ್ರೇಲರ್‌ನಲ್ಲಿ ಕಾಣಿಸಿಕೊಂಡಿರುವ ರಿತೇಶ್ ದೇಶ್ಮುಖ್ ಅವರ ಕಾಮಿಡಿಯನ್ನು ತಪ್ಪಿಸಿಕೊಳ್ಳುವುದು ಕಷ್ಟ. ಈ ಚಿತ್ರವು 'ಹೌಸ್‌ಫುಲ್' ನಂತರ ಮತ್ತೊಮ್ಮೆ ಬೋಮನ್ ಇರಾನಿ ಮತ್ತು ಲಾರಾ ದತ್ತಾ ಅವರನ್ನು ಒಟ್ಟಿಗೆ ತೆರೆಯ ಮೇಲೆ ತರುತ್ತಿದೆ. ಇದಲ್ಲದೇ ಈ ಚಿತ್ರದಲ್ಲಿ ಮೊದಲ ಬಾರಿಗೆ ರಾಣಾ ದಗ್ಗುಬಾಟಿ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಸುಶಾಂತ್ ಸಿಂಗ್ ರಜಪೂತ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಚಿತ್ರವು ನಟರ ನಡುವಿನ ಉತ್ತಮ ಕೆಮೆಸ್ಟ್ರಿಯೊಂದಿಗೆ ನಗುವಿನ ಕೋಲಾಹಲವನ್ನೇ ಎಬ್ಬಿಸುವ ಭರವಸೆಯನ್ನು ನೀಡುತ್ತಿದೆ.
"'ವೆಲ್‌ಕಮ್ ಟು ನ್ಯೂಯಾರ್ಕ್‌' ಇಡೀ ಕುಟುಂಬಕ್ಕಾಗಿ ಒಂದು ಮೋಜಿನ ಚಿತ್ರವಾಗಿದೆ. ನಗುವು ಒಳ್ಳೆಯ ಔಷಧಿ, ಆದ್ದರಿಂದ ಈ ವಾರದ ಕೊನೆಯಲ್ಲಿ ನಿಮಗೆ ಸಮೀಪವಿರುವ ಥಿಯೇಟರ್‌ನಲ್ಲಿ ನಿಮ್ಮ ಡೋಸ್ ಅನ್ನು ಪಡೆದುಕೊಳ್ಳಿ" ಎಂದು ಕರಣ್ ಜೋಹರ್ ಚಿತ್ರದ ಕುರಿತು ಹೇಳಿಕೊಂಡಿದ್ದಾರೆ. ಸೋನಾಕ್ಷಿ ಸಿನ್ಹಾ ಅಭಿಪ್ರಾಯ ಕೂಡ ಇದೇ ರೀತಿಯಾಗಿದ್ದು "ಚಿತ್ರದುದ್ದಕ್ಕೂ ನಗೆಯುಕ್ಕಿಸುವ ಅಪರೂಪದ ಕಥೆ ಇದಾಗಿದೆ. ಈ ಸಿನೇಮಾ ನಿಮ್ಮನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಲಿದೆ" ಎಂದು ಹೇಳಿದ್ದಾರೆ.
 
ಇದೊಂದು ಹೃದಯಸ್ಪರ್ಶಿ ಕಾಮಿಡಿ ಚಿತ್ರವಾಗಿದ್ದು ಇದು ಭಾರತದಲ್ಲಿ ವಾಸಿಸುತ್ತಿರುವ ಎರಡು ಯುವಕರು ತಮಗಾಗಿ ಉತ್ತಮ ಜೀವನವನ್ನು ಹುಡುಕುತ್ತಿರುವ ಕಥೆಯನ್ನು ಹೇಳುತ್ತದೆ. ಆಕಸ್ಮಿಕವಾಗಿ ನ್ಯೂಯಾರ್ಕ್‌ಗೆ ಪ್ರವಾಸವನ್ನು ಕೈಗೊಂಡಾಗ ಎದುರಾದ ಹಾಸ್ಯಭರಿತ ಸಾಹಸವು ಇವರ ಜೀವನವನ್ನು ಎಂದೆಂದಿಗೂ ಬದಲಾಯಿಸುತ್ತದೆ. ಪೂಜಾ ಫಿಲ್ಮ್ಸ್ ಮತ್ತು ವಿಝ್ ಫಿಲ್ಮ್ಸ್ ನಿರ್ಮಾಣದ, ಪೂಜಾ ಸಂಗೀತವಿರುವ 'ವೆಲ್‌ಕಮ್ ಟು ನ್ಯೂಯಾರ್ಕ್‌' ಇಂದು ಬಿಡುಗಡೆಯಾಗುತ್ತಿದೆ. ದೊಡ್ಡ ತಾರಾ ಬಳಗವನ್ನೇ ಹೊಂದಿರುವ ಈ ಚಿತ್ರ ಪ್ರೇಕ್ಷಕರನ್ನು ರಂಜಿಸುವುದು ಖಚಿತ ಎನ್ನಲಾಗುತ್ತಿದೆ.


ಇದರಲ್ಲಿ ಇನ್ನಷ್ಟು ಓದಿ :