ಸನ್ನಿ ಲಿಯೋನ್‌‌ಗೆ ರೈತ ಮಾಡಿದ್ದು ನೋಡಿದ್ರೆ ಗಾಬರಿಯಾಗ್ತೀರಿ

ರಾಮಕೃಷ್ಣ ಪುರಾಣಿಕ 

ಹೈದರಾಬಾದ್, ಬುಧವಾರ, 14 ಫೆಬ್ರವರಿ 2018 (17:15 IST)

ಬಹು ದಿನಗಳಿಂದ ಸುದ್ದಿ ಮಾಧ್ಯಮಗಳಲ್ಲಿ ಕಾಣೆಯಾಗಿದ್ದ ಸನ್ನಿ ಲಿಯೋನ್ ಇದೀಗ ರೈತರ ಹೊಲದಲ್ಲಿ ಸಿಕ್ಕಿದ್ದಾಳೆ. ರೈತರ ಬೆಳೆಗಳ ರಕ್ಷಣೆಯ ಜವಾಬ್ದಾರಿ ಹೊತ್ತ ಸನ್ನಿ ಲಿಯೋನ್.
ತೆಲಂಗಾಣ ರಾಜ್ಯದ ನೆಲ್ಲೂರು ಜಿಲ್ಲೆಯಲ್ಲಿ ರೈತರು ತಮ್ಮ ಬೆಳೆ ಕೆಟ್ಟ ದೃಷ್ಟಿಯಿಂದ ಹಾಳಾಗದಿರಲಿ ಎಂಬ ಉದ್ದೇಶಕ್ಕೆ ತಮ್ಮ ಹೊಲಗಳ ಸುತ್ತಲೂ ದೃಷ್ಟಿ ಬೊಂಬೆಯಂತೆ ಬಿಕಿನಿ ತೊಟ್ಟ ಸನ್ನಿ ಲಿಯೋನ್‌ನ ಚಿತ್ರದ ಬ್ಯಾನರ್‌ಗಳನ್ನು ಹಾಕಿಕೊಂಡಿದ್ದಾರೆ. ಬೆಳೆಗಳ ರಕ್ಷಣೆಗೆಂದು ಹೊಲಗಳ ಮಧ್ಯದಲ್ಲಿ ಬೆದರುಗೊಂಬೆಗಳನ್ನು ನಿಲ್ಲಿಸುವ ಬದಲಿಗೆ ಬೃಹದಾಕಾರದ ಸನ್ನಿ ಲಿಯೋನ್‌ನ ಚಿತ್ರದ ಬ್ಯಾನರ್‌ಗಳನ್ನು ಜಿಲ್ಲೆಯ ರೈತರು ತಮ್ಮ ಹೊಲಗಳಲ್ಲಿ ಹಾಕಿಕೊಂಡಿದ್ದಾರೆ.
 
ಸನ್ನಿ ಲಿಯೋನ್‌ನ ಅಭಿಮಾನಿ ಅಲ್ಲದ ಬಂದ ಕಿಂಡಿ ಪಲ್ಲೆ ಗ್ರಾಮದ ಚೆಂಚು ರೆಡ್ಡಿ, ಬಿಕಿನಿಯಲ್ಲಿರುವ ಲಿಯೋನ್‌ನ ಪೋಸ್ಟರ್ ಹಾಕುವ ಮೂಲಕ ಹಳ್ಳಿಗರ ವಕ್ರ ದೃಷ್ಟಿಯಿಂದ ತನ್ನ ಬೆಳೆಯನ್ನು ಕಾಪಾಡಿಕೊಳ್ಳಲು ಮಾಡಿದ ಉಪಾಯ ಇದು.
 
10 ಎಕರೆ ಹೊಲದಲ್ಲಿ ಬೆಳೆದ ಹೂಕೋಸು ಮತ್ತು ಎಲೆಕೋಸು, ಓಕ್ರಾ ಮತ್ತು ಮೆಣಸಿನಕಾಯಿಯ ಮೇಲಿನ ಎಲ್ಲರ ಗಮನವು ಲಿಯೋನ್ ಪೋಸ್ಟರ್ ಸೆಳೆಯುವುದರಿಂದ ತನ್ನ ಬೆಳೆ ಸುರಕ್ಷಿತವಾಗಿರುತ್ತದೆ ಎಂದು ತುಂಬಾ ಸರಳವಾದ ಕಾರಣ ಕೊಡುತ್ತಾನೆ ಈ ರೈತ.
 
ಅಷ್ಟೇ ಅಲ್ಲದೆ ಪೋಸ್ಟರ್‌ನ ಮೇಲೆ ತೆಲುಗು ಭಾಷೆಯಲ್ಲಿ ಸಂದೇಶವೊಂದನ್ನು ಬರೆಸಿದ್ದಾನೆ: “ಓರೇ, ನನ್ನು ಚೂಸಿ ಎಡವಕುರಾ (ಲೇ, ನನ್ನ ನೋಡಿ ಎಡವಬೇಡ)!” ಎಂದು ನೋಡುಗರಿಗೆ ಸನ್ನಿ ಲಿಯೋನ್‌ನ ಪೋಸ್ಟರ್ ಹೇಳುತ್ತದೆ.
 
ಈ ಪೋಸ್ಟರ್ ಹೊಲದ ಮಾರ್ಗದ ಮೂಲಕ ಓಡಾಡುವವರ ಕೆಟ್ಟ ದೃಷ್ಟಿಯನ್ನು ತಡೆಯುವಲ್ಲಿ ಯಶಸ್ವಿಯಾಗಿದೆ. ಈ ಮೊದಲು, ರೈತರು ಕೆಟ್ಟ ದೃಷ್ಟಿಯನ್ನು ತಡೆಯಲು ತಮ್ಮ ಹೊಲಗಳಲ್ಲಿ ಕುಂಬಳಕಾಯಿ ಅಥವಾ ಮಣ್ಣಿನ ಮಡಿಕೆಯ ಮುಖ ಹೊಂದಿರುವ ಬೆದರುಗೊಂಬೆಯನ್ನು ನಿಲ್ಲಿಸುತ್ತಿದ್ದರು. ರೈತರು ದೇಶದ ಬೆನ್ನೆಲುಬು ಎಂದು ಹೇಳುವುದು ಲೋಕರೂಢಿ, ಆದರೆ ಇಲ್ಲಿ ಸನ್ನಿ ಲಿಯೋನ್ ರೈತರ ಬೆಳೆಗಳ ರಕ್ಷಣೆಗೆ ಬೆನ್ನೆಲುಬು ಆಗಿ ನಿಂತಿದ್ದಾಳೆ.
 
ಕೆನಡಾದಲ್ಲಿ ಜನಿಸಿದ ಭಾರತದ ನಟಿ ಸನ್ನಿ ಲಿಯೋನ್, ಮಾಜಿ ವಯಸ್ಕರ ಚಿತ್ರಗಳ ನಟಿ. ಅನೇಕ ಬಾಲಿವುಡ್ ಚಲನಚಿತ್ರಗಳಲ್ಲಿ ಅಭಿನಯಿಸಿದ್ದು, ಭಾರೀ ಪ್ರಮಾಣದ ಅಭಿಮಾನಿಗಳನ್ನು ಹೊಂದಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟಿ ದೀಪ್ತಿಕಾಪ್ಸೆಗೆ ಸೆಕ್ಸ್ ವರ್ಕರ್ಸ್ ಬೇಕೆಂದು ಅಪರಿಚಿತನಿಂದ ಅಶ್ಲೀಲ ಸಂದೇಶ ರವಾನೆ

ಬೆಂಗಳೂರು: ವಾಟ್ಸಾಪ್ ನಲ್ಲಿ ನಟಿ ದೀಪ್ತಿಕಾಪ್ಸೆಗೆ ಅಪರಿಚಿತ ಯುವಕನೊಬ್ಬ ಸೆಕ್ಸ್ ವರ್ಕರ್ಸ್ ಬೇಕೆಂದು ...

news

ಕಣ್ಸನ್ನೆ ಖ್ಯಾತಿಯ ನಟಿ ಪ್ರಿಯಾ ಪ್ರಕಾಶ್ ಮೇಲೆ ಮೂಲಭೂತವಾದಿಗಳ ಕೆಂಗಣ್ಣು

ಕೊಚ್ಚಿ: ಒಂದು ಹಾಡಿನಲ್ಲಿ ಬರೀ ಒಂದು ಕಣ್ ಸನ್ನೆಯಿಂದಾಗಿ ಭಾರೀ ಸಂಚಲನ ಸೃಷ್ಟಿಸಿದ್ದ ನಟಿ ಪ್ರಿಯಾ ...

news

ಪ್ರೇಮಿಗಳ ದಿನಕ್ಕೆ ರಿಯಲ್ ಜೋಡಿ ಮೇಘನಾ ರಾಜ್-ಚಿರು ಸರ್ಜಾ ಬಿಡುಗಡೆ ಮಾಡಿದ ಎಂಗೇಜ್ ಮೆಂಟ್ ವಿಡಿಯೋ ವೈರಲ್ (ವಿಡಿಯೋ)

ಬೆಂಗಳೂರು: ಸ್ಯಾಂಡಲ್ ವುಡ್ ನ ರೀಲ್ ಜೋಡಿ ರಿಯಲ್ ಆಗಿ ಹಸೆಮಣೆಗೇರುತ್ತಿರುವವರ ಪೈಕಿ ಮೇಘನಾ ರಾಜ್ ಮತ್ತು ...

news

ಪ್ರೇಮಿಗಳ ದಿನ ಪತ್ನಿ ರಾಧಿಕಾ ಬಿಟ್ಟಿರಲಾರದೆ ರಾಕಿಂಗ್ ಸ್ಟಾರ್ ಯಶ್ ಮಾಡಿದ್ದೇನು ಗೊತ್ತಾ?!

ಬೆಂಗಳೂರು: ಸ್ಯಾಂಡಲ್ ವುಡ್ ನ ಮೋಸ್ಟ್ ಬ್ಯೂಟಿಫುಲ್ ಕಪಲ್ ಎಂದರೆ ನಮಗೆ ನೆನಪಿಗೆ ಬರುವುದು ಯಶ್-ರಾಧಿಕಾ ...

Widgets Magazine
Widgets Magazine