ಸಲ್ಮಾನ್ ಖಾನ್ ರನ್ನು ನೋಡುವುದಕ್ಕಾಗಿ ಈ ಬಾಲಕಿ ಇಂತಹ ಸಾಹಸಕ್ಕೆ ಕೈ ಹಾಕುವುದಾ…?

ಮುಂಬೈ, ಗುರುವಾರ, 5 ಏಪ್ರಿಲ್ 2018 (08:45 IST)

ಮುಂಬೈ : ನಟ ಸಲ್ಮಾನ್ ಖಾನ್ ಅವರಿಗಾಗಿ ಅವರ ಅಭಿಮಾನಿಗಳು ಮಾಡುವ ಅವಾಂತರಗಳು ಒಂದೆರಡಲ್ಲ. ಹಿಂದೊಮ್ಮೆ ಅವರ ಅಭಿಮಾನಿಯೊಬ್ಬಳು  ಅವರ ಮನೆಯ ಅಪಾರ್ಟಮೆಂಟ್ ಮೇಲೆ ಹೋಗಿ ಅವರಿಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಳು. ಆದರೆ ಇದೀಗ ಅವರ ಮತ್ತೊಬ್ಬ ಅಭಿಮಾನಿಯೊಬ್ಬಳು ಸಲ್ಮಾನ್ ಖಾನ್ ಅವರನ್ನು ನೋಡಲು ದೊಡ್ಡ ಸಾಹಸಕ್ಕೆ  ಕೈಹಾಕಿದಾಳಂತೆ.


ಭೋಪಾಲ್ ಮೂಲದ 15 ವರ್ಷದ ಬಾಲಕಿಯೊಬ್ಬಳಿಗೆ ಸಲ್ಮಾನ್ ಖಾನ್ ಅವರೆಂದರೆ ಬಹಳ ಇಷ್ಟವಂತೆ. ಆದ ಕಾರಣ ಅವರನ್ನು ನೋಡುವುದಾಗಿ ಭಾನುವಾರ ಸಂಜೆ  ಬಾಲಕಿ ಮನೆ ಬಿಟ್ಟು ಬಂದಿದ್ದಾಳಂತೆ. ನಂತರ ಆಕೆ ಮಂಗಳವಾರ ಬೆಳಗ್ಗೆ ಮುಂಬೈಗೆ ಬಂದಿಳಿದು, ನೇರವಾಗಿ ರೈಲು ಹತ್ತಿ ಬಾಂದ್ರಾದಲ್ಲಿರೋ ಸಲ್ಮಾನ್ ಖಾನ್ ಅವರ  ಮನೆಗೆ  ಆಗಮಿಸಿದ್ದಾಳೆ. ಗೇಟ್ ಮೂಲಕ ಒಳಗೆ ಹೋಗಲು ಪ್ರಯತ್ನಿಸಿದ ಆಕೆಯನ್ನು  ಭದ್ರತಾ ಸಿಬ್ಬಂದಿ ತಡೆದ ಕಾರಣ ಪಕ್ಕದ ಕಟ್ಟಡದ ಮೇಲಕ್ಕೆ ತೆರಳಿ ಅಲ್ಲಿಂದ ಗೋಡೆ ಹಾರಿ ಅಪಾರ್ಟ್ಮೆಂಟ್ ಒಳಕ್ಕೆ ಪ್ರವೇಶಿಸಿದ್ದಾಳಂತೆ.


ಇತ್ತ ಬಾಲಕಿಯ ಮನೆಯವರು ಮಗಳು ಕಾಣದೇ ಇರುವುದರಿಂದ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಆ ಬಾಲಕಿಯನ್ನು ವಶಕ್ಕೆ ಪಡೆದ ಪೊಲೀಸರು ದೊಂಗ್ರಿ ಚಿಲ್ಡ್ರನ್ಸ್ ಹೌಸ್ ನಲ್ಲಿಟ್ಟಿದ್ದಾರೆ.


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹುಚ್ಚ 2 ಚಿತ್ರ ಇಷ್ಟು ತಡವಾಗಲು ಕಾರಣ ಯಾರು…?

ಬೆಂಗಳೂರು : ಕನ್ನಡದ ಖ್ಯಾತ ನಿರ್ದೇಶಕ ಓಂಪ್ರಕಾಶ್ ರಾವ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮದರಂಗಿ ...

news

‘ಭಾಗಿ-2' ಚಿತ್ರದಲ್ಲಿ ಟೈಗರ್ ಶ್ರಾಫ್ ಸಾಹಸ ನೋಡಿ ಮೆಚ್ಚಿಗೆಯ ಸುರಿಮಳೆ ಗೈದ ಬಾಲಿವುಡ ಸ್ಟಾರ್ ನಟರು!

ಮುಂಬೈ : ಇತ್ತೀಚೆಗಷ್ಟೇ ಬಿಡುಗಡೆಯಾದ ಬಾಲಿವುಡ್ ನಟ ಟೈಗರ್ ಶ್ರಾಫ್ ಅಭಿನಯಿಸಿದ ‘ಭಾಗಿ-2’ ಚಿತ್ರ ಭರ್ಜರಿ ...

news

ನಟ ಜಗ್ಗೇಶ್ ಟ್ವೀಟ್ ಮೂಲಕ ಜನರಲ್ಲಿ ಮನವಿ ಮಾಡಿರುವುದು ಯಾರಿಗೋಸ್ಕರ…?

ಬೆಂಗಳೂರು : ‘ರಾಜರಥ ಸಿನಿಮಾ ನೋಡದ ಪ್ರೇಕ್ಷಕರು ಕಚಡ ನನ್ ಮಕ್ಳು’ ಎಂದು ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ...

news

ದರ್ಶನ್ ತಮ್ಮ ಅಭಿಮಾನಿಯೊಬ್ಬರಿಗೆ ಆಟೋಗ್ರಾಫ್ ಬರೆದುಕೊಟ್ಟಿದ್ದು ಹೇಗಿತ್ತು ಗೊತ್ತಾ…?

ಬೆಂಗಳೂರು :ಹೆಚ್ಚಾಗಿ ನಟರ ಬಳಿ ಅವರ ಅಭಿಮಾನಿಗಳು ಆಟೋಗ್ರಾಫ್ ಕೇಳಿದಾಗ ಶುಭವಾಗಲಿ, ಒಳ್ಳೆಯದಾಗಲಿ, ...

Widgets Magazine
Widgets Magazine