ಮೂರು ವರ್ಷಗಳ ನಂತರ ಒಂದಾಗಲಿರುವ ಮಾಜಿ ಲವರ್ಸ್ ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ

ಮುಂಬೈ, ಶುಕ್ರವಾರ, 6 ಏಪ್ರಿಲ್ 2018 (07:53 IST)

ಮುಂಬೈ : ಹಿಂದೊಮ್ಮೆ ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ನಟಿ ದೀಪಿಕಾ ಪಡುಕೋಣೆ ಅವರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದು, ನಂತರ ಬ್ರೇಕ್ ಅಪ್ ಆದ ವಿಷಯ ಎಲ್ಲರಿಗೂ ತಿಳಿದೇ ಇದೆ. ಆದರೆ ಇವರಿಬ್ಬರ ರಿಲೇಶನ್ ಶಿಪ್ ಬ್ರೇಕ್ ಅಪ್ ಆಗಿ ಮೂರು ವರ್ಷ ಕಳೆದ ನಂತರ ಈಗ  ಮತ್ತೆ ಈ ಜೋಡಿ ಒಂದಾಗುತ್ತಿದೆಯಂತೆ.


ಅಂದಮಾತ್ರಕ್ಕೆ ರಣಬೀರ್ ಕಪೂರ್ ಹಾಗೂ ನಟಿ ದೀಪಿಕಾ ಪಡುಕೋಣೆ ಇಬ್ಬರು ಒಂದಾಗುತ್ತಿದ್ದಾರೆ ಅಂದರೆ ಇವರ ನಡುವೆ ಲವ್ ಶುರುವಾಗಿದೆ ಅಂತ ಅಥವಾ ಯಾವುದೋ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದರ್ಥವಲ್ಲ. ಬದಲಾಗಿ ಇವರಿಬ್ಬರು ಫ್ಯಾಶನ್ ಶೋವೊಂದರಲ್ಲಿ ಜತೆಯಾಗಿ ರ‍್ಯಾಂಪ್‌ ವಾಕ್‌ ಮಾಡಲಿದ್ದಾರಂತೆ.


ಹೌದು. ಫ್ಯಾಶನ್ ಡಿಸೈನರ್‌ ಮನಿಶ್‌ ಮಲ್ಹೋತ್ರಾ ಅವರು ಮುಂದಿನ ವಾರ ಫ್ಯಾಶನ್ ಶೋವೊಂದನ್ನು ಆಯೋಜಿಸಿದ್ದು, ಇದಕ್ಕೆ ಇಡೀ ಬಾಲಿವುಡ್ ತಾರೆಯರು ಆಗಮಿಸಲಿದ್ದಾರಂತೆ. ಅಲ್ಲಿ ರಣಬೀರ್ ಕಪೂರ್ ಹಾಗೂ ನಟಿ ದೀಪಿಕಾ ಪಡುಕೋಣೆ ಇಬ್ಬರು ಜತೆಯಾಗಿ ರ‍್ಯಾಂಪ್‌ ವಾಕ್‌ ಮಾಡಲಿದ್ದಾರಂತೆ. ಒಟ್ಟಿನಲ್ಲಿ ಇದೀಗ ಮೂರು ವರ್ಷಗಳ ಬಳಿಕ ಒಂದೇ ಸ್ಟೇಜ್ ಮೇಲೆ ಇವರಿಬ್ಬರನ್ನು ಕಣ್ತುಂಬಿಕೊಳ್ಳುವ ಭಾಗ್ಯ ಅವರ ಅಭಿಮಾನಿಗಳಿಗೆ ಸಿಗಲಿದೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಸ್ಪರ್ಧಿ ದಿವಾಕರ್ ಗೆ ಒಲಿದು ಬಂದ ಬಂಫರ್ ಆಫರ್ ಏನು ಗೊತ್ತಾ …?

ಬೆಂಗಳೂರು : ಕನ್ನಡ ಬಿಗ್ ಬಾಸ್ ಸೀಸನ್ 5 ರ ರನ್ನರ್ ಅಪ್ ಆದ ದಿವಾಕರ್ ಅವರಿಗೆ ಇದೀಗ ಸ್ಯಾಂಡಲ್ ವುಡ್ ನ ...

news

ನಟಿ ರಾಧಿಕಾ ಪಂಡಿತ್ ಯಶ್ ರವರ ‘ಕೆಜಿಎಫ್’ ಚಿತ್ರದ ಶೂಟಿಂಗ್ ಸೆಟ್ ನಿಂದ ತೆಗೆದುಕೊಂಡು ಬಂದ ವಸ್ತು ಯಾವುದು..?

ಬೆಂಗಳೂರು : ನಟ ಯಶ್ ಅವರ ‘ಕೆಜಿಎಫ್’ ಚಿತ್ರದ ಶೂಟಿಂಗ್ ಸೆಟ್ ಗೆ ಅವರ ಪತ್ನಿ, ನಟಿ ರಾಧಿಕಾ ಪಂಡಿತ್ ಅವರು ...

news

ಇರ್ಫಾನ್ ಖಾನ್ ಚಿತ್ರದ ಪ್ರಚಾರಕ್ಕಾಗಿ ಒಂದಾದ ಬಾಲಿವುಡ್ ನ ಸ್ಟಾರ್ ನಟರು!

ಮುಂಬೈ : ಬಾಲಿವುಡ್ ನಟ ಇರ್ಫಾನ್ ಖಾನ್ ಅಭಿನಯದ 'ಬ್ಲ್ಯಾಕ್ ಮೇಲ್' ಸಿನಿಮಾ ಬಿಡುಗಡೆಯಾಗುತ್ತಿರುವ ...

news

ಐಪಿಎಲ್ ಓಪನಿಂಗ್ ಕಾರ್ಯಕ್ರಮಕ್ಕೆ ರಣವೀರ್ ಸಿಂಗ್ ಬದಲಿಗೆ ಯಾರು ಸ್ಟೇಜ್ ಪರ್ಫಾರ್ಮೆನ್ಸ್ ನೀಡಲಿದ್ದಾರೆ ಗೊತ್ತಾ…?

ಮುಂಬೈ : ಏಫ್ರಿಲ್ 7ರಂದು ನಡೆಯಲಿರುವ ಐಪಿಎಲ್ 11ನೇ ಆವೃತ್ತಿಯ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮಕ್ಕೆ ...

Widgets Magazine
Widgets Magazine