ಬಾಡಿಗೆ ಕಟ್ಟದ ಬಾಲಿವುಡ್ ತಾರೆಯನ್ನು ಹೊರ ಹಾಕಿದ ಫ್ರಾನ್ಸ್ ಕೋರ್ಟ್!

ಅತಿಥಾ 

ಬೆಂಗಳೂರು, ಬುಧವಾರ, 10 ಜನವರಿ 2018 (18:57 IST)

ಮನೆಯ ಬಾಡಿಗೆ ಕಟ್ಟಿಲ್ಲ ಎಂದು ಬಾಲಿವುಡ್ ನ ಖ್ಯಾತ ನಟಿ ಮಲ್ಲಿಕಾ ಶೆರಾವತ್ ಅವರನ್ನು ಫ್ರಾನ್ಸ್ ಕೋರ್ಟ್ ಮನೆಯಿಂದ ಹೊರ ಹಾಕಿದೆಯಂತೆ. ಈ ಕುರಿತು ಮಾಧ್ಯಮವೊಂದು ವರದಿ ಮಾಡಿದ್ದು, ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿರುವ ಮಲ್ಲಿಕಾ ಶೆರಾವತ್ ಅವರ ಫ್ಲ್ಯಾಟ್ ಬಾಡಿಗೆ 94 ಸಾವಿರ ಡಾಲರ್ ಹಣ ಕಟ್ಟಿಲ್ಲ ಎಂದು ಫ್ರಾನ್ಸ್ ಕೋರ್ಟ್ ಅವರನ್ನು ಹೊರಗೆ ಹಾಕಿದೆ.

ಮಲ್ಲಿಕಾ ಉಳಿದುಕೊಂಡಿರುವ ಫ್ಲ್ಯಾಟ್ ನ ಮಾಲೀಕ ಈ ಬಗ್ಗೆ ಪ್ಯಾರಿಸ್ ಕೋರ್ಟ್ ಗೆ ದೂರು ನೀಡಿ ಮಲ್ಲಿಕಾ ಶೆರಾವತ್ ಅವರು, 78,787 ಯೂರೋ (ಸುಮಾರು 60 ಲಕ್ಷ) ಬಾಡಿಗೆ ನೀಡಬೇಕು ಎಂದು ಆರೋಪಿಸಿದ್ದರು. 
ಬಾಡಿಗೆ ಪಾವತಿ ಮಾಡದ ಕಾರಣ ಸ್ವತಃ ಪ್ಯಾರಿಸ್ ಕೋರ್ಟ್ ಮಲ್ಲಿಕಾ ಮತ್ತು ಅವರ ಪತಿಯನ್ನು ಮನೆಯಿಂದ ಹೊರಗೆ ಹಾಕಿದೆ. ಅಲ್ಲದೆ ಅವರ ಮನೆಯ ಪೀಠೋಪಕರಣಗಳನ್ನು ಜಪ್ತಿ ಮಾಡಿದ್ದು, ಬಾಡಿಗೆ ರೂಪದಲ್ಲಿ ಬರ ಬೇಕಾಗಿರುವ ಹಣವನ್ನು ಇದರ ಮೂಲಕ ಸ್ವೀಕರಿಸುವಂತೆ ಮಾಲೀಕರಿಗೆ ಸೂಚನೆ ನೀಡಿದೆ
 
ಈ ಹಿಂದೆ ಎದ್ದಿದ್ದ ಸುದ್ದಿಗೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದ ಮಲ್ಲಿಕಾ ಶೆರಾವತ್, "ನಾನು ಫ್ರಾನ್ಸ್‌ನಲ್ಲಿ ಯಾವುದೇ ಅಪಾರ್ಟ್‌ಮೆಂಟ್ ಹೊಂದಿಲ್ಲ, ಜನರು ಹಬ್ಬಿಸಿರುವ ಸುದ್ದಿ ಶುದ್ಧ ಸುಳ್ಳು! ಆದರೆ ಯಾರಾದರೂ ನನಗೆ ಕೊಡುಗೆಯಾಗಿ ಫ್ರಾನ್ಸ್‌ನಲ್ಲಿ ಅಪಾರ್ಟ್‌ಮೆಂಟ್ ನೀಡುವುದಾದಲ್ಲಿ ನನಗೆ ವಿಳಾಸ ಕಳುಹಿಸಿ" ಎಂದು ಹೇಳಿದ್ದರಲ್ಲದೇ, ಈಗ ಹಬ್ಬಿರುವ ಸುದ್ದಿಗಳೆಲ್ಲಾ ಶುದ್ಧ ಸುಳ್ಳು ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಫಿಲ್ಮ್‌ಫೇರ್‌ನ ಜನವರಿಯ ಮುಖಪುಟದಲ್ಲಿ ಮಿಂಚುತ್ತಿರುವ ವಿರುಷ್ಕಾ...!!

ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಮತ್ತು ಭಾರತ ಕ್ರಿಕೆಟ್‌ನ ರನ್ ಮೆಷಿನ್ ಎಂದೇ ಕರೆಯಲ್ಪಡುವ ನಾಯಕ ವಿರಾಟ್ ...

news

'ಟೈಗರ್ ಘರ್ಜನೆಗೆ ಬಾಕ್ಸ್ ಆಫೀಸ್ ಧೂಳಿಪಟ...!!!

ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ 'ಟೈಗರ್ ಜಿಂದಾ ಹೈ' ಚಿತ್ರ ...

news

ಬಿಗ್ ಬಾಸ್ ಕನ್ನಡ: ರಿಯಾಜ್ ಪತ್ನಿಯ ಲೊಚ ಲೊಚ ಮುತ್ತು ಜೆಕೆ ಕಣ್ಣಲ್ಲಿ ನೀರು ತರಿಸಿತಂತೆ!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ತಮ್ಮ ತಂದೆ ಬಂದಾಗಲೂ ಅಷ್ಟೊಂದು ಅಳದ ಜಯರಾಮ್ ಕಾರ್ತಿಕ್ ರಿಯಾಜ್ ಪತ್ನಿ ...

news

ಬಿಗ್ ಬಾಸ್ ಕನ್ನಡ: ಜೆಕೆ ಅಪ್ಪನ ನೋಡಿ ಅನುಪಮಾ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರ ಸ್ಪರ್ಧಿಗಳಿಗೆ ಕುಟುಂಬದವರ ಜತೆ ಮಿಲನದ ಸಮಯ. ಮೊದಲು ಬಂದವರು ...

Widgets Magazine
Widgets Magazine