ಕನ್ನಡಿಗರಿಗೆ ಸವಾಲೆಸೆದಿದ್ದಕ್ಕೆ ಕ್ಷಮೆ ಕೇಳಿದ ನಟ ಗಿರೀಶ್

ಚೆನ್ನೈ, ಬುಧವಾರ, 6 ಜೂನ್ 2018 (14:21 IST)

ಚೆನ್ನೈ : ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಲಾ ಚಿತ್ರದ ಬಿಡುಗಡೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಕೋಪಕ್ಕೆ ಕಾರಣರಾದ  ಸ್ಟೈಲ್ ರಾಜಾ ಚಿತ್ರದ ನಾಯಕ ನಟ ಗಿರೀಶ್ ಇದೀಗ ತಮ್ಮ ಕೃತ್ಯಕ್ಕೆ ಕನ್ನಡಿಗರಲ್ಲಿ ಕ್ಷಮೆ ಯಾಚಿಸಿದ್ದಾರೆ.

ನಟ ರಜನೀಕಾಂತ್ ಅವರು ಕಾವೇರಿ ವಿವಾದದಲ್ಲಿ ಕರ್ನಾಟಕದ ವಿರುದ್ಧ ಮಾತನಾಡಿದ್ದಕ್ಕೆ ಕೋಪಗೊಂಡ ಕನ್ನಡಿಗರು ಅವರ ಕಾಲಾ ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಮಾಡಬಾರದೆಂದು ತಡೆಯೊಡ್ಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ್ದ ನಟ ಗಿರೀಶ್ ಅವರು ರಜನಿಕಾಂತ್ ಅಭಿನಯದ ಕಾಲಾ ಚಿತ್ರದ ಬಿಡುಗಡೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ತಾಕಿತ್ತಿದ್ದರೆ ಈ ಚಿತ್ರ ಬಿಡುಗಡೆ ತಡೆಯಿರಿ. ಕರ್ನಾಟಕದಲ್ಲಿರುವ ರಜನಿಕಾಂತ್ ಅಭಿಮಾನಿಗಳು ಈ ಚಿತ್ರವನ್ನು ನೋಡುತ್ತಾರೆ ಎಂದು ಹೇಳಿ ವಿಡಿಯೋ ಅಪ್ಲೋಡ್ ಮಾಡಿದ್ದರು.

 

ಈ ವಿಡಿಯೋ ಕನ್ನಡಿಗರನ್ನು ಕೆರಳಿಸಿದ್ದು ಈ ಹೇಳಿಕೆಗೆ ಬಾರೀ ವಿರೋಧ ವ್ಯಕ್ತವಾಗಿತ್ತು. ಇದನ್ನು ತಿಳಿದ ನಟ ಗಿರೀಶ್ ಅವರು ಇತ್ತೀಚೆಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಗೆ ಆಗಮಿಸಿ ತಮ್ಮ ಹೇಳಿಕೆ ಸಂಬಂಧ ಸ್ಪಷ್ಟನೆ ನೀಡಿದ್ದರು. ಅಲ್ಲದೆ ಕನ್ನಡಿಗರಲ್ಲಿ  ಕ್ಷಮೆ ಕೋರಿ ಪತ್ರ ಕೂಡ ಸಲ್ಲಿಕೆ ಮಾಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟ ಧರ್ಮೆಂದ್ರ ಈಗ ಏನು ಮಾಡುತ್ತಿದ್ದಾರೆ ಗೊತ್ತಾ?

ಮುಂಬೈ : ಬಾಲಿವುಡ್ ನ ಹಿರಿಯ ನಟ ಧರ್ಮೇಂದ್ರ ಅವರು ತಮ್ಮ ನಟನಾ ಜೀವನಕ್ಕೆ ಕೊಂಚ ವಿರಾಮ ಹೇಳಿ ಇದೀಗ ಮಹತ್ವ ...

news

ಗೆಳತಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಬಿಗ್ ಬಾಸ್ -7 ಸ್ಪರ್ಧಿ ಅರ್ಮಾನ್ ಕೊಹ್ಲಿ

ಮುಂಬೈ : ಸದಾ ವಿವಾದದ ಸುಳಿಯಲ್ಲೇ ಸಿಲುಕಿಕೊಂಡಿರುವ ಹಿಂದಿ ಬಿಗ್ ಬಾಸ್ ಸೀಸನ್ 7 ಸ್ಪರ್ಧಿ ಅರ್ಮಾನ್ ...

news

ನಟಿ ಆಲಿಯಾ ಭಟ್ ಗೆ ರಣ್ ಬೀರ್ ಕುಟುಂಬದ ಸದಸ್ಯರೊಬ್ಬರಿಂದ ಸಿಕ್ಕಿದೆಯಂತೆ ದುಬಾರಿ ಗಿಫ್ಟ್‌!

ಮುಂಬೈ : ಬಾಲಿವುಡ್ ನಟಿ ಆಲಿಯಾ ಭಟ್ ಅವರಿಗೆ ನಟ ರಣ್ ಬೀರ್ ಕಪೂರ್ ಅವರ ಕುಟುಂಬದ ಸದಸ್ಯರೊಬ್ಬರು ...

news

ಅರ್ಜುನ್ ಕಪೂರ್ ಮೇಲೆ ಪರಿಣಿತಿ ಚೋಪ್ರಾ ಮಾಡಿದ ಆರೋಪವೇನು ಗೊತ್ತಾ…?

ಮುಂಬೈ : ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ನಟ ಅರ್ಜುನ್ ಕಪೂರ್ ತನ್ನ ಜೊತೆ ಕೆಟ್ಟದಾಗಿ ...

Widgets Magazine
Widgets Magazine