Widgets Magazine

ಸುಶಾಂತ್ ಸಿಂಗ್ ನಾಗಾಲ್ಯಾಂಡ್ ನ ಪ್ರವಾಹ ಪೀಡಿತರ ನಿಧಿಗೆ ನೀಡಿದ ಹಣವೆಷ್ಟು ಗೊತ್ತಾ?

ಮುಂಬೈ| pavithra| Last Modified ಶುಕ್ರವಾರ, 7 ಸೆಪ್ಟಂಬರ್ 2018 (06:52 IST)
ಮುಂಬೈ
:
ನಟ ಸುಶಾಂತ್ ಸಿಂಗ್ ರಜಪೂತ್ ನಾಗಾಲ್ಯಾಂಡ್ ಪ್ರವಾಹ ಪೀಡಿತರಿಗೆ ಸಹಾಯಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.


ಸುಶಾಂತ್ ಸಿಂಗ್ ಈ ಹಿಂದೆ ನೆರೆ ಪೀಡಿತ ರಾಜ್ಯಕ್ಕೆ ಒಂದು ಕೋಟಿ ರೂ. ನೀಡುವುದರ ಮೂಲಕ ನೆರವಾಗಿದ್ದರು. ಇದೀಗ
ನಾಗಾಲ್ಯಾಂಡ್ ನಲ್ಲಿ ಉಂಟಾದ ಪ್ರವಾಹಕ್ಕೆ 50 ಸಾವಿರ ಜನ ನಿರಾಶ್ರಿತರಾಗಿದ್ದು, ಈ ಸುದ್ದಿ ತಿಳಿದ ನಟ ಸುಶಾಂತ್ ಸಿಂಗ್ ಇದೀಗ ನಾಗಾಲ್ಯಾಂಡ್ ನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಮುಖ್ಯ ಮಂತ್ರಿ ನೀಫಿಯು ರಿಯೊ ರನ್ನು ಭೇಟಿ ಮಾಡಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1.25 ಕೋಟಿ ದೇಣಿಗೆ ನೀಡಿದ್ದಾರೆ.


ಸುಶಾಂತ್ ದೇಣಿಗೆ ನೀಡಿದ ಫೋಟೋವನ್ನು, ಮುಖ್ಯಮಂತ್ರಿ ನೀಫಿಯು ರಿಯೊ ಟ್ವಿಟರ್ ನಲ್ಲಿ ಹಾಕಿಕೊಂಡಿದ್ದಾರೆ. ಅಲ್ಲದೆ ಸುಶಾಂತ್ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.

ಇದರಲ್ಲಿ ಇನ್ನಷ್ಟು ಓದಿ :