ಕ್ರಿಷ್ 4…. ಹೀರೊ, ವಿಲನ್ ಎರಡೂ ಪಾತ್ರದಲ್ಲಿ ಮಿಂಚಲಿದ್ದಾರಾ ಹೃತಿಕ್…?

ಮುಂಬೈ, ಬುಧವಾರ, 27 ಸೆಪ್ಟಂಬರ್ 2017 (21:44 IST)

ಮುಂಬೈ: ಹೃತಿಕ್ ರೋಷನ್ ಮತ್ತೆ ಸೂಪರ್ ಹೀರೊ ಆಗೋದಕ್ಕೆ ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದಾರೆ. ಚಿತ್ರದಲ್ಲಿ ನಟಿಸಲು ಸಕಲ ಸಿದ್ಧತೆ ನಡೆಸಿದ್ದಾರೆ.


ಕ್ರಿಷ್ 4ರಲ್ಲಿ ಹೃತಿಕ್ ರೋಷನ್ ಪಾತ್ರವೇನು ಎಂಬುದು ಎಲ್ಲರ ಕುತೂಹಲ ಕೆರಳಿಸಿದೆ. ಮಕ್ಕಳ ಸೂಪರ್ ಹೀರೊ ಆಗಿರುವ ಹೃತಿಕ್, ಈ ಬಾರಿ ಹೀರೊ ಮತ್ತು ವಿಲನ್ ಎರಡೂ ಪಾತ್ರಗಳನ್ನು ಅವರೇ ನಿಭಾಯಿಸಲಿದ್ದಾರೆ ಎಂದು ಬಿಟೌನ್ ನಲ್ಲಿ ಸುದ್ದಿ ಹಬ್ಬಿದೆ.

ಇನ್ನು ನಿರ್ಮಾಪಕ ರಾಕೇಶ್ ರೋಷನ್ ಮಾತನಾಡಿ, `ಕ್ರಿಷ್’ ನಮ್ಮ ದೇಶದ ಏಕೈಕ ಸೂಪರ್ ಹೀರೊ. ನನ್ನ ಪತ್ನಿ ಕ್ರಿಷ್ ಅವತಾರದಲ್ಲಿರುವ ಗಣೇಶನನ್ನು ತೋರಿಸಿದಾಗ ನಾವು ಹೊಂದಿರುವ ಏಕೈಕ ಒರಿಜಿನಲ್ ಸೂಪರ್ ಹೀರೊ ಎಂದೆ. ಅದು ನನ್ನ ನಂಬಿಕೆಯನ್ನು ಹೆಚ್ಚಿಸಿತು. ಅದೇ ಬಲವಾದ ನಂಬಿಕೆ ಈಗ ಕ್ರಿಷ್ 4 ಚಿತ್ರ ಮಾಡಲು ಸ್ಫೂರ್ತಿ ಎಂದಿದ್ದಾರೆ.

ಹೃತಿಕ್ ಈಗಾಗಲೇ ಡಬಲ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರಿಷ್, ಕ್ರಿಷ್ 3 ಮತ್ತು ಕೋಯಿ ಮಿಲ್ ಗಯಾ ಚಿತ್ರದಲ್ಲಿ ಡ್ಯುಯಲ್ ರೋಲ್ ನಲ್ಲಿ ಮಿಂಚಿದ್ದಾರೆ. ಆದರೆ ಈ ಚಿತ್ರದಲ್ಲಿ ಹೃತಿಕ್ ಯಾವ ಪಾತ್ರದಲ್ಲಿ ಕಾಣಿಸುತ್ತಾರೆ ಗೊತ್ತಿಲ್ಲ. ಒಂದೇ ವ್ಯಕ್ತಿ ಎರಡು ಶೇಡ್ ಅಥವಾ ಹೀರೊ, ವಿಲನ್ ಎರಡೂ ಪಾತ್ರಗಳಲ್ಲಿ ಕಾಣಿಸುತ್ತಾರಾ ಅನ್ನೋ ಕುತೂಹಲ ಹೆಚ್ಚಾಗ್ತಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಿಲ್ವರ್ ಸ್ಕ್ರೀನ್ ನಲ್ಲಿ ಮತ್ತೆ ಒಂದಾಗ್ತಾರ ಐಶ್-ಅಭಿ

ಮುಂಬೈ: `ಗುರು’ ಚಿತ್ರದ ಶೂಟಿಂಗ್ ವೇಳೆ ಐಶ್ವರ್ಯ ಮತ್ತು ಅಭಿಷೇಕ್ ಬಚ್ಚನ್ ಪ್ರೀತಿಯಲ್ಲಿ ಬಿದ್ದು, ...

news

ಸಲ್ಮಾನ್ ಖಾನ್ ಮೊದಲ ಸಂಭಾವನೆ ಎಷ್ಟು ಗೊತ್ತಾ?

ಮುಂಬೈ: ದೇಶದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಸ್ಥಾನ ಪಡೆದಿರುವ ಬಾಲಿವುಡ್ ನಟ ಸಲ್ಮಾನ್ ...

news

ಆಸ್ಕರ್ ಗೆ ಎಂಟ್ರಿ ಪಡೆಯಲು ವಿಫಲವಾದ ಬಾಹುಬಲಿ 2!

ನವದೆಹಲಿ: ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಸಿನಿಮಾ ಬೇರೆಯದೇ ಹವಾ ಸೃಷ್ಟಿಸಿತ್ತು. ಇದು ಭಾರತದ ...

news

ಚಿತ್ರರಂಗಕ್ಕೆ ರಮ್ಯಾ ಹೇಳ್ತಾರಂತೆ ಗುಡ್ ಬೈ!

ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ಎನಿಸಿಕೊಂಡಿದ್ದ ರಮ್ಯಾ ತಮ್ಮ ಅಭಿಮಾನಿಗಳಿಗೆ ಬೇಸರವಾಗುವಂತಹ ...

Widgets Magazine
Widgets Magazine