ಎರಡನೇ ಬಾರಿ ಮದುವೆಯಾದ ಹುಚ್ಚ ವೆಂಕಟ್. ಹುಡುಗಿ ಯಾರು ಗೊತ್ತಾ?

ಬೆಂಗಳೂರು, ಸೋಮವಾರ, 14 ಮೇ 2018 (07:23 IST)

ಬೆಂಗಳೂರು : ಸ್ಯಾಂಡಲ್ ವುಡ್ ನಟ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರು ಇದೀಗ ಮತ್ತೊಂದು ಮದುವೆಯಾಗಿರುವುದರ ಬಗ್ಗೆ ಫೇಸ್‍ಬುಕ್ ಲೈವ್‍ ಮೂಲಕ ತಿಳಿಸಿದ್ದಾರೆ.


ಈಗಾಗಲೇ ಮದುವೆಯಾಗಿರುವ ಹುಚ್ಚ ವೆಂಕಟ್ ಅವರು ಇದೀಗ ತಾವೇ ನಟಿಸಿ ಮಾಡುತ್ತಿರುವ `ಡಿಕ್ಟೇಟರ್ ಹುಚ್ಚ ವೆಂಕಟ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಐಶ್ವರ್ಯ ಅವರನ್ನು ಮದುವೆಯಾಗಿದ್ದಾರೆ. ಈ ಬಗ್ಗೆ ಫೇಸ್‍ಬುಕ್ ಲೈವ್‍ ಮೂಲಕ ,’ ಕಳೆದ ವಾರ ತಲಕಾವೇರಿಯಲ್ಲಿ ನಾನು ಐಶ್ವರ್ಯರನ್ನು ಮದುವೆ ಆದೆ. ಮದುವೆ ಆದ ನಂತರ ಐಶ್ವರ್ಯ ಅವರ ದೊಡ್ಡಮ್ಮ ತೀರಿಕೊಂಡರು. ಹಾಗಾಗಿ ಮದುವೆ ಆದ ವಿಷಯವನ್ನು ನಾವು ಮನೆಯವರಿಂದ ಹಾಗೂ ಎಲ್ಲರಿಂದ ಮುಚ್ಚಿಟ್ಟಿದ್ದೀವಿ’ ಎಂಬುದಾಗಿ  ಅವರು ತಿಳಿಸಿದ್ದಾರೆ.


‘ನಾವಿಬ್ಬರೂ ಮದುವೆಯಾಗಿ ಜೊತೆಯಲ್ಲಿ ಇದ್ದೇವೆ. ನಾನು ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತೀನಿ ಹಾಗೂ ಆಕೆಯನ್ನು ತುಂಬ ಪ್ರೀತಿಸ್ತೀನಿ. ಅವಳು ಕೂಡ ನನ್ನನ್ನು ತುಂಬಾನೇ ಪ್ರೀತಿಸುತ್ತಾಳೆ. ನಾವು ಯಾವುದೇ ತಪ್ಪು ಮಾಡಿಲ್ಲ. ಇಬ್ಬರು ಪ್ರೀತಿಸಿ ಮದುವೆ ಆಗಿದ್ದೀವಿ ಹಾಗೂ ನಾವಿಬ್ಬರು ಮೇಜರ್. ಬಲವಂತವಾಗಿ ನಾವು ಮದುವೆಯಾಗಿಲ್ಲ. ನಮ್ಮಿಬ್ಬರನ್ನು ದೂರ ಮಾಡಬೇಡಿ’ ಎಂದು ಕೂಡ ಹುಚ್ಚ ವೆಂಕಟ್ ಮನವಿ ಮಾಡಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ                        ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮತದಾನ ಮಾಡುವ ಹಕ್ಕನ್ನು ಕಳೆದುಕೊಂಡಿದ್ದಾರಂತೆ ಹಾಸ್ಯನಟ ಚಿಕ್ಕಣ್ಣ

ಬೆಂಗಳೂರು : ಕನ್ನಡದ ಹಾಸ್ಯನಟ ಚಿಕ್ಕಣ್ಣ ಅವರು ಈ ಬಾರಿಯ ಕರ್ನಾಟಕ ಚುನಾವಣೆಯಲ್ಲಿ ಮತದಾನ ಮಾಡುವ ...

news

ಬಾಲಿವುಡ್ ನ ಖ್ಯಾತ ನಟ ಅಮಿತಾಬ್ ಬಚ್ಚನ್ ಆರೋಗ್ಯದಲ್ಲಿ ಏರುಪೇರು

ಮುಂಬೈ : ಚಿತ್ರೀಕರಣದ ವೇಳೆ ಬಾಲಿವುಡ್ ನ ಖ್ಯಾತ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ಆರೋಗ್ಯದಲ್ಲಿ ...

news

ಕ್ರೇಜಿ ಕ್ವೀನ್ ರಕ್ಷಿತಾ ದುಖಃದಲ್ಲಿರಲು ಕಾರಣವೇನು ಗೊತ್ತಾ...?

ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಅವರು ತಮ್ಮ ಅಚ್ಚುಮೆಚ್ಚಿನ ನಾಯಿ ...

news

ಅಭಿಮಾನಿಗಳ ಬೇಡಿಕೆಯನ್ನು ಈಡೇರಿಸಿದ ನಟಿ ಐಶ್ವರ್ಯ ರೈ ಬಚ್ಚನ್

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅವರು ಸಾಮಾಜಿಕ ಜಾಲತಾಣಗಳಲ್ಲೊಂದಾದ ಇನ್ ಸ್ಟಾಗ್ರಾಂ ...

Widgets Magazine