ಸಲ್ಮಾನ್ ಖಾನ್ ಗೆ ಸಾರ್ವಜನಿಕ ಸ್ಥಳದಲ್ಲಿ ಥಳಿಸಿದರೆ 5 ಲಕ್ಷ ರೂ. ಬಹುಮಾನ!

ಮುಂಬೈ, ಶನಿವಾರ, 2 ಜೂನ್ 2018 (07:46 IST)

ಮುಂಬೈ : ವಿಶ್ವ ಹಿಂದೂ ಪರಿಷತ್ ಮಾಜಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಸಂಘಟಿಸಿರುವ 'ಹಿಂದೂ ಹೀ ಆಗೇ' ಸಂಘಟನೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಸಾರ್ವಜನಿಕ ಸ್ಥಳದಲ್ಲಿ ಥಳಿಸಿದರೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ.

ನಟ ಸಲ್ಮಾನ್ ಖಾನ್ ಅವರ ಸಿನಿಮಾ ನಿರ್ಮಾಣ ಸಂಸ್ಥೆ ಅಡಿಯಲ್ಲಿ ‘ಲವ್‌ರಾತ್ರಿ’ ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದು, ಈ ಚಿತ್ರ ನವರಾತ್ರಿ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಆದರೆ ಈ ಚಿತ್ರಕ್ಕೆ ಲವ್‌ರಾತ್ರಿ ಎಂದು ಹೆಸರಿಟ್ಟಿದ್ದು ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡಿದೆ ಎಂದು ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಲ್ಮಾನ್ ಅವರಿಗೆ ಸಾರ್ವಜನಿಕವಾಗಿ ಥಳಿಸಿದವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಹಿಂದೂ ಹೀ ಆಗೇ ಸಂಘಟನೆಯ ಆಗ್ರಾ ಘಟಕದ ಮುಖ್ಯಸ್ಥ ಗೋವಿಂದ ಪರಾಶರ್ ಘೋಷಿಸಿದ್ದಾರೆ.

ಹಾಗೇ ಈ ಚಿತ್ರಕ್ಕೆ ನಿಷೇಧ ಹೇರಬೇಕು. ಒಂದುವೇಳೆ ಯಾವುದಾದರೂ ಚಿತ್ರಮಂದಿರ ಸಲ್ಮಾನ್ ಅವರ ಲವ್ ರಾತ್ರಿ ಚಿತ್ರ ಪ್ರದರ್ಶನ ಮಾಡಿದರೆ ಅದಕ್ಕೆ ಬೆಂಕಿ ಹಚ್ಚುತ್ತೇವೆ. ಅಲ್ಲದೇ ಮುಂದಾಗುವ ಅನಾಹುತಕ್ಕೆ ಚಿತ್ರಮಂದಿರದ ಮಾಲೀಕರೇ ಹೊಣೆಗಾರರು ಎಂದು ಈ ಸಂಘಟನೆ ಎಚ್ಚರಿಕೆ ನೀಡಿದಲ್ಲದೇ ಚಿತ್ರದ ಪೋಸ್ಟರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಿಧಿ ಅಗರ್ವಾಲ್ - ಕ್ರಿಕೆಟಿಗ ರಾಹುಲ್ ಡೇಟಿಂಗ್ ಕುರಿತು ನಿಧಿ ಹೇಳಿದ್ದೇನು….?

ಮುಂಬೈ : ನಟಿ ನಿಧಿ ಅಗರ್ವಾಲ್ ಹಾಗೂ ಕ್ರಿಕೆಟಿಗ ರಾಹುಲ್ ಅವರು ಜೊತೆಯಾಗಿ ರೆಸ್ಟಾರೆಂಟ್ ನಲ್ಲಿ ...

news

ಕನ್ನಡದ ಸ್ಟಾರ್ ನಟರೊಬ್ಬರ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಬಿಗ್ ಬಾಸ್ ಸ್ಪರ್ಧಿ ದಿವಾಕರ್

ಬೆಂಗಳೂರು : ಕನ್ನಡದ ಬಿಗ್ ಬಾಸ್ 5 ರಲ್ಲಿ ರನ್ನರ್ ಅಪ್ ದಿವಾಕರ್ ಅವರು ಇದೀಗ ತಮ್ಮ ಹುಟ್ಟುಹಬ್ಬವನ್ನು ...

news

ಬಾಲಿವುಡ್ ನಟ ಅರ್ಬಾಜ್ ಖಾನ್ ಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ಯಾಕೆ?

ಮುಂಬೈ : ಐಪಿಎಲ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನ ಖ್ಯಾತ ನಟ, ನಿರ್ದೇಶಕ ಅರ್ಬಾಜ್ ...

news

ಐಶ್ವರ್ಯ ರೈ ಬಚ್ಚನ್ ಬಗ್ಗೆ ಕೇಳಿ ಬಂದ ಈ ಸುದ್ದಿ ತಿಳಿದು ಅಭಿಷೇಕ್ ಬಚ್ಚನ್ ನಕ್ಕಿದ್ಯಾಕೆ?

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅವರು ಎರಡನೇ ಮಗುವಿಗೆ ಜನ್ಮ ನೀಡಲು ರೆಡಿಯಾಗಿದ್ದಾರೆ ಎಂಬ ...

Widgets Magazine