ಮುಂಬೈ: ಸಿನಿಮಾಗಳು, ಟಿವಿ ಶೋಗಳು ಮತ್ತು ಸೆಲೆಬ್ರಿಟಿಗಳ ಬಗ್ಗೆ ಮಾಹಿತಿಯ ಅಧಿಕೃತ ಮೂಲ ಹಾಗೂ ವಿಶ್ವದ ಅತ್ಯಂತ ಜನಪ್ರಿಯ ತಾಣ ಐಎಂಡಿಬಿ www.imdb.com 2025 ರಲ್ಲಿ ಅತ್ಯಂತ ಜನಪ್ರಿಯ ಭಾರತೀಯ ಸಿನಿಮಾಗಳು ಮತ್ತು 2025 ರ ಜುಲೈನಿಂದ ಡಿಸೆಂಬರ್ವರೆಗೆ ಬಿಡುಗಡೆಯಾಗಲಿರುವ ಅತ್ಯಂತ ನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. 2025 ರಲ್ಲಿ ಈವರೆಗೆ ಭಾರತದ ಜನಪ್ರಿಯ ಸಿನಿಮಾಗಳ ಪಟ್ಟಿಯಲ್ಲಿ ಛಾವಾ ಸ್ಥಾನ ಪಡೆದಿದ್ದು ನಮಗೆ ಸಂತೋಷ ತಂದಿದೆ ಎಂದು ಛಾವಾ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಹೇಳಿದ್ದಾರೆ.